HOME » NEWS » Sports » CRICKET WORLD CUP CRICKET INDIA VS NEW ZEALAND MATCH IN TRENT BRIDGE NOTTINGHAM STADIUM ENGLAND

ವಿಶ್ವಕಪ್​ನಲ್ಲಿಂದು ಭಾರತ V/S ನ್ಯೂಜಿಲ್ಯಾಂಡ್ ಮುಖಾಮುಖಿ: ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆ

India vs New Zealand; ಭಾರತ ತಂಡ ಈವರೆಗೂ ಆಡಿದ ಎರಡು ಪಂದ್ಯದಲ್ಲಿ ಜಯಶಾಲಿಯಾಗಿದೆ. ದಕ್ಷಿಣ​ ಆಫ್ರಿಕಾದ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ 6 ವಿಕೆಟ್​ಗಳ ಜಯಸಾಧಿಸಿದರೆ, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 36 ರನ್​ಗಳ ಅಂತರದಲ್ಲಿ ಮಣಿಸಿತ್ತು. ಅಂತೆಯೇ ನ್ಯೂಜಿಲ್ಯಾಂಡ್​ ವಿರುದ್ಧದ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ತವಕದಲ್ಲಿದೆ.

Harshith AS | news18
Updated:June 13, 2019, 9:04 AM IST
ವಿಶ್ವಕಪ್​ನಲ್ಲಿಂದು ಭಾರತ V/S ನ್ಯೂಜಿಲ್ಯಾಂಡ್ ಮುಖಾಮುಖಿ: ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆ
ಭಾರತ V/S ನ್ಯೂಜಿಲ್ಯಾಂಡ್
  • News18
  • Last Updated: June 13, 2019, 9:04 AM IST
  • Share this:
ಸತತ 2 ಪಂದ್ಯವನ್ನು ಗೆದ್ದಿರುವ ಟೀಂ ಇಂಡಿಯಾ ಇಂದು ಬಲಿಷ್ಠ ನ್ಯೂಜಿಲ್ಯಾಂಡ್​ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲು ಮುಂದಾಗಿದೆ. ಇಂಗ್ಲೆಂಡ್​ನ ಟ್ರೆಂಟ್ ಬ್ರಿಜ್​​​​ ಮೈದಾನದಲ್ಲಿ ಕೊಹ್ಲಿ ಪಡೆ ಕೇನ್​​ ವಿಲಿಯಮ್ಸ್​ ತಂಡವನ್ನು ಎದುರಿಸುತ್ತಿದೆ. ಇನ್ನು ಆರಂಭಿಕ ಆಟಗಾರ ಶಿಖರ್​ ಧವನ್​ ಅವರನ್ನು ಹೊರಗಿಟ್ಟು ಭಾರತ ಮೈದಾನಕ್ಕಿಳಿಯುತ್ತಿದೆ.

ವಿಶ್ವಕಪ್​ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್​ ತಂಡವು ಈವರೆಗೆ ಆಡಿರುವ ಮೂರು ಪಂದ್ಯಗಳಲ್ಲಿಯೂ ಗೆದ್ದು ಬೀಗಿದೆ. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ 7 ವಿಕೆಟ್​ ಗೆಲುವು ಸಾಧಿಸಿದರೆ, 2ನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 2 ವಿಕೆಟ್​ಗಳ ಪ್ರಯಾಸದ ಜಯ ಸಾಧಿಸಿತ್ತು. ಹಾಗೆಯೇ ಅಫ್ಘಾನಿಸ್ತಾನದ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ಕಿವೀಸ್​​ ತಂಡ 106 ರನ್​​ಗಳ ಗೆಲುವಿನ ನಗೆ ಬೀರಿತ್ತು. ಇಂಥ ಬಲಿಷ್ಠ ನ್ಯೂಜಿಲೆಂಡ್​ ತಂಡವನ್ನು ಮಣಿಸುವ ತವಕದಲ್ಲಿ ಭಾರತ ಇದೆ.

ಇದನ್ನೂ ಓದಿ: ಬಿಜೆಪಿಯಲ್ಲೆಲ್ಲೂ ಕಾಣಿಸಿಕೊಳ್ಳದ ಜನಾರ್ದನ ರೆಡ್ಡಿ ಒಳಗೊಳಗೆ ಪ್ಲಾನ್ ರೂಪಿಸುತ್ತಿರೋದೇನು?

ಇನ್ನು ಟೀಂ ಇಂಡಿಯಾದಲ್ಲಿ ಆರಂಭಿಕ ಆಟಗಾರ ಶಿಖರ್​ ಧವನ್ ತಂಡದಿಂದ ಹೊರಗುಳಿದಿದ್ದಾರೆ. ಶಿಖರ್​ ಧವನ್​ ಬದಲಿ ಆಟಗಾರನಾಗಿ ರಿಷಭ್​ ಪಂತ್​ಗೆ ಅವಕಾಶ ನೀಡಲಾಗಿದೆ.  ಇತ್ತ ಒಪನಿಂಗ್​ ಬ್ಯಾಟ್ಸ್​ಮನ್​ ಧವನ್​ರನ್ನು ಹೊರಗಿಟ್ಟು ಆಡುತ್ತಿರುವ ಕೊಹ್ಲಿ ಪಡೆಗೆ ಇದೊಂದು ಸವಾಲಿನ ಸಂಗತಿ.

ಭಾರತ ತಂಡ ಈವರೆಗೂ ಆಡಿದ ಎರಡು ಪಂದ್ಯದಲ್ಲಿ ಜಯಶಾಲಿಯಾಗಿದೆ. ಸೌತ್​ ಆಫ್ರಿಕಾದ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ 6 ವಿಕೆಟ್​ಗಳ ಜಯಸಾಧಿಸಿದರೆ, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 36 ರನ್​ಗಳ ಅಂತರದಲ್ಲಿ ಮಣಿಸಿತ್ತು.

ಸ್ಥಳ: ನ್ಯಾಟಿಂಗ್​​ಹ್ಯಾಮ್​​, ಇಂಗ್ಲೆಂಡ್​

ಸಮಯ: ಮಧ್ಯಾಹ್ನ 3 ಗಂಟೆ
First published: June 13, 2019, 7:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories