World Cup 2019: ಬೌಲ್ಡ್​ ಆದರೂ ಬ್ಯಾಟ್ಸ್​ಮನ್​ ನಾಟೌಟ್: ಝಿಂಗ್ ಬೇಲ್ಸ್ ವಿವಾದಕ್ಕೆ ಐಸಿಸಿ ಸ್ಪಷ್ಟನೆ

ಅದೇ ರೀತಿ  ಶ್ರೀಲಂಕಾ ತಂಡದ ದಿಮುತ್ ಕರುಣರತ್ನೆ ಕೂಡ ಜೀವದಾನ ಪಡೆದಿದ್ದರು. ನ್ಯೂಜಿಲೆಂಡ್​ ತಂಡದ ವೇಗಿ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಲಂಕಾ ಆಟಗಾರ ಕರುಣರತ್ನೆ  ಬೌಲ್ಡ್ ಆಗಿದ್ದರು.  ಆದರೆ ಅದೃಷ್ಟವಶಾತ್ ಬೇಲ್ಸ್ ಬಿದ್ದಿರಲಿಲ್ಲ.

zahir
Updated:June 12, 2019, 3:03 PM IST
World Cup 2019: ಬೌಲ್ಡ್​ ಆದರೂ ಬ್ಯಾಟ್ಸ್​ಮನ್​ ನಾಟೌಟ್: ಝಿಂಗ್ ಬೇಲ್ಸ್ ವಿವಾದಕ್ಕೆ ಐಸಿಸಿ ಸ್ಪಷ್ಟನೆ
@Cricket Australia
zahir
Updated: June 12, 2019, 3:03 PM IST
ಈ ಬಾರಿಯ ವಿಶ್ವಕಪ್​ ಕ್ರಿಕೆಟ್​ನಲ್ಲಿ ಭಾರೀ ಚರ್ಚಗೆ ಗ್ರಾಸವಾಗಿದ್ದು ಝಿಂಗ್ ಬೇಲ್ಸ್. ಆದರೆ ಇದೇ ಬೇಲ್ಸ್​ ಅನ್ನು ಮುಂದುವರಿಸುವುದಾಗಿ ಇದೀಗ ಐಸಿಸಿ ಸ್ಪಷ್ಟನೆ ನೀಡಿದೆ. ಚೆಂಡು ವಿಕೆಟ್​ಗೆ ತಗುಲಿದರೂ ಬೇಲ್ಸ್​ ಬೀಳದೆ ಆಟಗಾರರಿಗೆ  ಜೀವದಾನ ಲಭಿಸಿತ್ತು. ಈ ಬಗ್ಗೆ ವ್ಯಾಪಕ ಚರ್ಚೆ ಮತ್ತು ಪರ ವಿರೋಧಗಳು ವ್ಯಕ್ತವಾಗಿದ್ದವು.

ಈ ಹಿನ್ನೆಲೆಯಲ್ಲಿ ಝಿಂಗ್ ಬೇಲ್ಸ್ ಬೇಲ್ಸ್ ಬದಲಿಸುವಂತೆ ಕೆಲ ಮಾಜಿ ಆಟಗಾರರು ಇಂಟರ್​ನ್ಯಾಷನಲ್ ಕ್ರಿಕೆಟ್​ ಮಂಡಳಿಗೆ ಸಲಹೆಗಳನ್ನು ನೀಡಿದ್ದರು. ಆದರೀಗ ತನ್ನ ನಿಲುವು ಸ್ಪಷ್ಟಪಡಿಸಿರುವ ಐಸಿಸಿ, ಟೂರ್ನಿಯ ಮಧ್ಯದಲ್ಲಿ ನಾವು ಏನನ್ನೂ ಬದಲಿಸಲಾಗುವುದಿಲ್ಲ. ಈ ಬೇಲ್ಸ್ ಎಲ್ಲ ತಂಡಗಳಿಗೂ ಅನ್ವಯವಾಗುತ್ತದೆ. ಚೆಂಡು ವಿಕೆಟ್​ಗೆ ವೇಗವಾಗಿ ಬಡಿಯದಿದ್ದರೆ ಮಾತ್ರ ಬೀಳುವುದಿಲ್ಲ ಎಂದು ತಿಳಿಸಿದೆ.

ಕಳೆದ 13 ಪಂದ್ಯಗಳಲ್ಲಿ ಬೇಲ್ಸ್ ಬೀಳದೆ ಐದು ಬಾರಿ ಆಟಗಾರರು ಜೀವದಾನ ಪಡೆದಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಎಸೆತದಲ್ಲಿ ಡೇವಿಡ್ ವಾರ್ನರ್ ಬೌಲ್ಡ್ ಆಗಿದ್ದರು. ಆದರೆ ಬೇಲ್ಸ್ ಬಿದ್ದಿರಲಿಲ್ಲ. ಈ ನಾಟೌಟ್ ಪ್ರರಕಣ ಭಾರೀ ಚರ್ಚೆಯನ್ನು ಹುಟ್ಟುಹಾಕಿತು.

ಇದಕ್ಕೂ ಮುನ್ನ  ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಆದಿಲ್ ರಶೀದ್ ಬೌಲಿಂಗ್​ನಲ್ಲಿ  ಕ್ವಿಂಟನ್ ಡಿ ಕಾಕ್ ಬೌಲ್ಡ್ ಆಗಿದ್ದರು. ಆದರೆ ಬೇಲ್ಸ್ ಮಾತ್ರ ಅಲುಗಾಡಿರಲಿಲ್ಲ. ಇದರಿಂದ ಬ್ಯಾಟಿಂಗ್ ಮುಂದುವರೆಸುವ ಅವಕಾಶ ಡಿ ಕಾಕ್​ಗೆ ಲಭಿಸಿತ್ತು.

ಅದೇ ರೀತಿ  ಶ್ರೀಲಂಕಾ ತಂಡದ ದಿಮುತ್ ಕರುಣರತ್ನೆ ಕೂಡ ಜೀವದಾನ ಪಡೆದಿದ್ದರು. ನ್ಯೂಜಿಲೆಂಡ್​ ತಂಡದ ವೇಗಿ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಲಂಕಾ ಆಟಗಾರ ಕರುಣರತ್ನೆ  ಬೌಲ್ಡ್ ಆಗಿದ್ದರು.  ಆದರೆ ಅದೃಷ್ಟವಶಾತ್ ಬೇಲ್ಸ್ ಬಿದ್ದಿರಲಿಲ್ಲ.

ಇನ್ನು ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಕ್ರಿಸ್ ಗೇಯ್ಲ್​ ಸಹ ಔಟಾಗುವುದರಿಂದ ಪಾರಾಗಿದ್ದರು. ಮಿಚೆಲ್ ಸ್ಟಾರ್ಕ್​ ಎಸೆತದಲ್ಲಿ ವಿಕೆಟ್​ ಅನ್ನು ಸವರಿ ಚೆಂಡು ಕೀಪರ್ ಕೈ ಸೇರಿತ್ತು. ಚೆಂಡು 140 ವೇಗದಲ್ಲಿದ್ದರೂ ಬೇಲ್ಸ್ ಬೀಳದೆ ಗೇಯ್ಲ್​ಗೆ ಜೀವದಾನ ಲಭಿಸಿತ್ತು. ಹಾಗೆಯೇ ಬಾಂಗ್ಲಾ ಆಟಗಾರ ಸೈಫುದ್ದೀನ್ ಸಹ ಬೌಲ್ಡ್ ಆದರೂ ಔಟಾಗದೆ ನಿಟ್ಟುಸಿರು ಬಿಟ್ಟಿದ್ದರು. ಬೆನ್ ಸ್ಟೋಕ್ಸ್ ಎಸೆದ ಬಾಲ್ ವಿಕೆಟ್​ಗೆ ತಗುಲಿದರೂ  ಬೇಲ್ಸ್ ಮಾತ್ರ ಎಗರಿರಲಿಲ್ಲ.

ಹೀಗಾಗಿ ಝಿಂಗ್ ಬೇಲ್ಸ್  ಬಗ್ಗೆ ಅಪಸ್ವರಗಳು ಎದ್ದಿದ್ದವು. ಆದರೆ ಈ ಹಿಂದೆ ಬಳಸಿದಂತಹ ವಿಕೆಟ್​ಗಳನ್ನು ಮತ್ತು ಝಿಂಗ್ ಬೇಲ್ಸ್ ಬೇಲ್ಸ್​ಗಳನ್ನು ಮುಂದುವರೆಸಿರುವುದಾಗಿ ಐಸಿಸಿ ಸ್ಪಷ್ಟಪಡಿಸಿದೆ. ಹೀಗಾಗಿ ವಿಶ್ವಕಪ್ ಪಂದ್ಯಗಳ ಮಧ್ಯೆ ಮತ್ತೆ ಹಳೆಯ ಬೇಲ್ಸ್ ಅನ್ನು ಬಳಸಲು ಇಚ್ಛಿಸುವುದಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ:  'ರಾಬರ್ಟ್'​ ಚಿತ್ರಕ್ಕೆ ಸಂಗೀತ ನಿರ್ದೇಶಕ ಫಿಕ್ಸ್: ಈ ಬಾರಿ ಹರಿಕೃಷ್ಣ ಅಲ್ವಂತೆ..!
First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...