HOME » NEWS » Sports » CRICKET WORLD CUP 2019 YUVRAJ SINGH NEWS

ವಿಶ್ವಕಪ್ 2019: ಯುವರಾಜ್ ಸಿಂಗ್ ಇಲ್ಲದೆ ಭಾರತ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ

Is It The End Of Career For Yuvraj Singh? | ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಯುವರಾಜ್​​ರ ಸಾಧನೆಯನ್ನು ನೋಡಿ ಅನೇಕ ಕ್ರಿಕೆಟ್ ದಿಗ್ಗಜರು ವಿಶ್ವಕಪ್​ ತಂಡದಲ್ಲಿ ಯುವರಾಜ್ ಹೆಸರು ಇರಲಿದೆ ಎಂದು ಹೇಳುತ್ತಿದ್ದರು. ಆದರೆ ಬ್ಯಾಡ್ ಫಾರ್ಮ್​​ನಲ್ಲಿರುವ ಕಾರಣ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಯುವಿಯನ್ನು ಕೈಬಿಟ್ಟಿದ್ದಾರೆ.

Vinay Bhat | news18
Updated:May 2, 2019, 3:18 PM IST
ವಿಶ್ವಕಪ್ 2019: ಯುವರಾಜ್ ಸಿಂಗ್ ಇಲ್ಲದೆ ಭಾರತ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ
ವಿಶ್ವಕಪ್ನಲ್ಲಿ ಶತಕ ಬಾರಿಸಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ, ನಾನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಕಾರಣ ಸಾಧ್ಯವಾಗುತ್ತಿರಲಿಲ್ಲ. ಆದರೆ, ವಿಂಡೀಶ್ ವಿರುದ್ಧ ವೀರು ಅಲಭ್ಯರಾಗಿದ್ದ ಕಾರಣ ನಾನು ದೊಡ್ಡ ಇನ್ನಿಂಗ್ಸ್ ಕಟ್ಟಲು ಮುಂದಾದೆ. ಏನಾದರೂ ಆಗಲಿ, ನಾನು ಸತ್ತರೂ ಸರಿಯೇ, ಭಾರತ ಈ ಬಾರಿ ವಿಶ್ವಕಪ್ ಗೆಲ್ಲಲೇ ಬೇಕೆಂದಯ ದೇವರಲ್ಲಿ ಪ್ರಾರ್ಥಿಸಿದೆ ಎಂದು ಯುವರಾಜ್ ಹೇಳುತ್ತಾರೆ.
  • News18
  • Last Updated: May 2, 2019, 3:18 PM IST
  • Share this:

ಬೆಂಗಳೂರು (ಏ. 16): ಮೇ 30 ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್​​ಗೆ ಭಾರತ ಕ್ರಿಕೆಟ್ ತಂಡವನ್ನು ನಿನ್ನೆ ಬಿಸಿಸಿಐ ಪ್ರಕಟಿಸಿದೆ. ಆದರೆ, 2007 ಟಿ-20 ಹಾಗೂ 2011ರ ವಿಶ್ವಕಪ್​​ ಅನ್ನು ಭಾರತಕ್ಕೆ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್​​​ಗೆ ಭಾರಿ ನಿರಾಸೆಯಾಗಿದೆ. ನಿವೃತ್ತಿಗೂ ಮುನ್ನ ಕೊನೆಯ ಬಾರಿ ಟೀಂ ಇಂಡಿಯಾ ಜೆರ್ಸಿ ಧರಿಸಿ ವಿಶ್ವಕಪ್​​ನಲ್ಲಿ ಆಡಬೇಕು ಎಂದು ಕನಸು ತೊಟ್ಟಿದ್ದ ಯುವಿ ಕನಸು ಕನಸಾಗಿಯೆ ಉಳಿದಿದೆ.


ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಯುವರಾಜ್​​ರ ಸಾಧನೆಯನ್ನು ನೋಡಿ ಅನೇಕ ಕ್ರಿಕೆಟ್ ದಿಗ್ಗಜರು ವಿಶ್ವಕಪ್​ ತಂಡದಲ್ಲಿ ಯುವರಾಜ್ ಹೆಸರು ಇರಲಿದೆ ಎಂದು ಹೇಳುತ್ತಿದ್ದರು. ಆದರೆ ಬ್ಯಾಡ್ ಫಾರ್ಮ್​​ನಲ್ಲಿರುವ ಕಾರಣ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಯುವಿಯನ್ನು ಕೈಬಿಟ್ಟಿದ್ದಾರೆ. ಇದರಿಂದ ಯುವಿ ಅಭಿಮಾನಿಗಳಿ ಸಿಟ್ಟಿಗೆದ್ದಿದ್ದು, 2019 ವಿಶ್ವಕಪ್ ತಂಡದಲ್ಲಿ ಯುವರಾಜ್ ಇಲ್ಲವಾದರೆ ಭಾರತ ತಂಡ ವಿಶ್ವಕಪ್ ಗೆಲ್ಲಲು ಸಾಧ್ಯವಿನಲ್ಲ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.ಇದನ್ನೂ ಓದಿ: ಹಾಡುಹಗಲೇ ರಾಷ್ಟ್ರೀಯ ರಗ್ಬಿ ಆಟಗಾರನ ಗುಂಡಿಕ್ಕಿ ಹತ್ಯೆ

 

ಕ್ಯಾನ್ಸರ್ನಿಂದ ಗುಣಮುಖರಾದ ಬಳಿಕ ಟೀಂ ಇಂಡಿಯಾ ಪರ ಕೆಲ ಪಂದ್ಯಗಳನ್ನು ಆಡಿದ್ದರಾದರು ಹೇಳಿಕೊಳ್ಳುವಂತಹ ಪ್ರದರ್ಶನ ಯುವಿ ಬ್ಯಾಟ್​​ನಿಂದ ಬಂದಿಲ್ಲ. ಇದರಿಂದ ಯುವರಾಜ್ರನ್ನು 2014 ರಿಂದ 2016 ವರೆಗೆ ಭಾರತ ತಂಡದಿಂದ ಹೊರಗಿಡಲಾಯಿತು. 2017 ಜೂನ್ನಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿದ ಯುವರಾಜ್, ಇನ್ನು ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳುವುದು ಅನುಮಾನ. ಅಲ್ಲದೆ ಯುವರಾಜ್ ಸಿಂಗ್ ನಿವೃತ್ತಿ ದಿನವೂ ಹತ್ತಿರವಾಗುತ್ತಿದೆ. ಯುವರಾಜ್ ಈವರೆಗೆ 304 ಏಕದಿನ ಪಂದ್ಯಗಳನ್ನು ಆಡಿದ್ದು 8701 ರನ್ಗಳಿಸಿದ್ದಾರೆ. ಇದರಲ್ಲಿ ಗರಿಷ್ಠ ಸ್ಕೋರ್ 150 ಆಗಿದ್ದು, 14 ಶತಕ ಹಾಗೂ 54 ಅರ್ಧಶತಕ ಸಿಡಿಸಿದ್ದಾರೆ. ಜೊತೆಗೆ 111 ವಿಕೆಟ್ ಕಬಳಿಸಿದ್ದಾರೆ.


ಇದನ್ನೂ ಓದಿ: ICC World Cup 2019: ವಿಶ್ವಕಪ್​​ಗೆ ಟೀಂ ಇಂಡಿಯಾ ಪ್ರಕಟ; 15 ಆಟಗಾರರ ಹೆಸರು ಇಲ್ಲಿದೆ ನೋಡಿ!

ಯುವರಾಜ್ ಜೊತೆ ವಿಶ್ವಕಪ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದ, ಸುರೇಶ್ ರೈನಾ, ಅಜಿಂಕ್ಯ ರಹಾನೆ, ಆರ್ ಅಶ್ವಿನ್ ಆಸೆಗೂ ಬಿಸಿಸಿಐ ತಣ್ಣೀರೆಚಿದೆ.


ಯುವರಾಜ್ ಸಿಂಗ್ ವಿಶ್ವಕಪ್​ಗೆ ಆಯ್ಕೆಯಾಗದ ಹಿನ್ನಲೆಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಟ್ವಿಟ್ಟರ್​​ನಲ್ಲಿ ಕಿಡಿ ಕಾರಿದ ಅಭಿಮಾನಿಗಳು.


 ಇದನ್ನೂ ಓದಿ: 2019 ವಿಶ್ವಕಪ್​​ನಲ್ಲಿ ಏಕೈಕ ಕನ್ನಡಿಗ; ಮೊದಲ ಬಾರಿ ವಿಶ್ವಕಪ್​​ನಲ್ಲಿ ಮಿಂಚಲು ರಾಹುಲ್ ರೆಡಿ!

First published: April 16, 2019, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories