ಗಿಲ್​​ಕ್ರಿಸ್ಟ್​-ಹೇಡನ್​ ದಾಖಲೆ ಸರಿಗಟ್ಟಿದ ಭಾರತೀಯ ಓಪನರ್​ಗಳು; ಲೆಜೆಂಡ್ಸ್​​ ಹಾದಿಯಲ್ಲಿ ರೋಹಿತ್​-ಧವನ್​

Shikhar Dhawan - Rohit Sharma | ಸಚಿನ್-ಗಂಗೂಲಿ ಬಳಿಕ ಭಾರತ ಕ್ರಿಕೆಟ್ ಕಂಡ ಯಶಸ್ವಿ ಜೋಡಿ ಎನಿಸಿಕೊಂಡಿರುವ ರೋಹಿತ್ ಶರ್ಮಾ-ಶಿಖರ್ ಧವನ್, ​ಸದ್ಯ ನಡೆಯುತ್ತಿರುವ ಐಸಿಸಿ ವಿಶ್ವಕಪ್​ನಲ್ಲಿ ಭರ್ಜರಿ ಆಟವಾಡುತ್ತಿದ್ದಾರೆ.

Vinay Bhat | news18
Updated:June 10, 2019, 10:23 PM IST
ಗಿಲ್​​ಕ್ರಿಸ್ಟ್​-ಹೇಡನ್​ ದಾಖಲೆ ಸರಿಗಟ್ಟಿದ ಭಾರತೀಯ ಓಪನರ್​ಗಳು; ಲೆಜೆಂಡ್ಸ್​​ ಹಾದಿಯಲ್ಲಿ ರೋಹಿತ್​-ಧವನ್​
ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ
  • News18
  • Last Updated: June 10, 2019, 10:23 PM IST
  • Share this:
ಬೆಂಗಳೂರು (ಜೂ. 10): ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್​ಗಳ ರೋಚಕ ಜಯ ಸಾಧಿಸಿ ಮತ್ತಷ್ಟು ಬಲಿಷ್ಠವಾಗಿದೆ. ಬ್ಯಾಟ್ಸ್​ಮನ್​ಗಳ ಅಮೋಘ ಪ್ರದರ್ಶನ ಹಾಗೂ ಕೊನೆ ಹಂತದಲ್ಲಿ ಕಮ್​ಬ್ಯಾಕ್​ ಮಾಡಿದ ಬೌಲರ್​ಗಳ ನೆರವಿನಿಂದ ಭಾರತ ವಿಶ್ವಕಪ್​ನಲ್ಲಿ ಸತತ ಎರಡನೇ ಜಯ ಸಾಧಿಸಿದರೆ, ಆಸ್ಟ್ರೇಲಿಯಾ ಮೊದಲ ಸೋಲುಂಡಿದೆ.

ಭಾರತ ಬೃಹತ್ ಮೊತ್ತ ಕಲೆಹಾಕಲು ಪ್ರಮುಖ ಕಾರಣವಾಗಿದ್ದು ಈ ಭಲೇ ಜೋಡಿ. ಆಸೀಸ್ ಬೌಲರ್​​ಗಳನ್ನ ಬೆಂಡೆತ್ತಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾ ಹಾಗೂ ಗಬ್ಬರ್​ ಶಿಖರ್ ಧವನ್ ದಾಖಲೆಯ ಜೊತೆಯಾಟವಾಡಿದರು. ಈ ಮೂಲಕ ಸಚಿನ್​-ಗಂಗೂಲಿ ಬಳಿಕ, ಟೀಂ ಇಂಡಿಯಾದ ಬಲಿಷ್ಠ ಓಪನರ್​ಗಳಾಗಿ​ ಎಂಬ ದಾಖಲೆ ಬರೆದರು.

ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡದಲ್ಲಿದ್ದ ಆ್ಯಡಂ ಗಿಲ್​ಕ್ರಿಸ್ಟ್ ಹಾಗೂ ಮ್ಯಾಥ್ಯೂ ಹೇಡನ್ ಭರ್ಜರಿ ಆರಂಭ ನೀಡುವುದರಲ್ಲಿ ಎತ್ತಿದ ಕೈ​​. ಐಸಿಸಿ ಟೂರ್ನಮೆಂಟ್​​ನಲ್ಲಿ ಮಿಂಚುತ್ತಿದ್ದ ಈ ಜೋಡಿಯನ್ನ ಈಗ ಭಾರತದ ಓಪನರ್​ಗಳು ಸರಿಗಟ್ಟಿದ್ದಾರೆ.

Yo Yo Test: 'ಯೋ ಯೋ ಟೆಸ್ಟ್​ ಪಾಸ್​ ಮಾಡಿದರೂ ಅವಕಾಶ ಕೊಡಲಿಲ್ಲ, ಸಮಯ ಬಂದಾಗ ಮಾತಾಡ್ತೀನಿ'; ಯುವಿ

ಐಸಿಸಿ ಟೂರ್ನಮೆಂಟ್​ಗಳಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟ ಆಡಿದವರಲ್ಲಿ ಇದೀಗ ಟೀಂ ಇಂಡಿಯಾ ಓಪನರ್ಸ್​ ಮೊದಲ ಸ್ಥಾನ ಗಿಟ್ಟಿಸಿದ್ದಾರೆ. ರೋಹಿತ್ ಶರ್ಮಾ, ಶಿಖರ್ ಧವನ್​ 6 ಬಾರಿ ವಿಶ್ವಕಪ್ ಹಾಗೂ ಚಾಂಪಿಯನ್​ ಟ್ರೋಫಿಯಲ್ಲಿ ಶತಕದ ಜೊತೆಯಾಟವಾಡಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಗಿಲ್​ಕ್ರಿಸ್ಟ್ ಹಾಗೂ ಮ್ಯಾಥ್ಯೂ ಹೇಡನ್​ 6 ಬಾರಿ ಶತಕ ಜೊತೆಯಾಟವಾಡಿದ್ದರು. ಇವರ ನಂತರದಲ್ಲಿ ಲಂಕಾದ ದಿಲ್ಷಾನ್ ಹಾಗೂ ಸಂಗಕ್ಕಾರ 5 ಬಾರಿ, ದಕ್ಷಿಣ ಆಫ್ರಿಕಾದ ಹರ್ಷೆಲ್​ ಗಿಬ್ಸ್​ ಹಾಗೂ ಗ್ಯಾರಿ ಕಸ್ಟ್ರನ್​ 4 ಬಾರಿ ನೂರರ ಜೊತೆಯಾಟವಾಡಿದ್ದರು.

ಲೆಜೆಂಡ್ಸ್​​ ಹಾದಿಯಲ್ಲಿ ರೋಹಿತ್​-ಧವನ್

ಸಚಿನ್ ತೆಂಡೂಲ್ಕರ್ ಹಾಗೂ ಸೌರವ್​ ಗಂಗೂಲಿ ಭಾರತ ಕ್ರಿಕೆಟ್​ನ​​ ಧೃವ ನಕ್ಷತ್ರಗಳು. ಏಕದಿನ ಕ್ರಿಕೆಟ್​ನಲ್ಲಿ ಅಮೋಘ ದಾಖಲೆಯನ್ನ ಹೊಂದಿರುವ ಈ ಜೋಡಿ, ಆರಂಭಿಕರಾಗಿ ಕಣಕ್ಕಿಳಿದು ಅನೇಕ ದಾಖಲೆಯನ್ನೇ ಸೃಷ್ಟಿಸಿದ್ದಾರೆ.ಎದುರಾಳಿಗೆ ಸಿಂಹಸ್ವಪ್ನರಾಗಿದ್ದ ತೆಂಡೂಲ್ಕರ್–ದಾದಾ ಏಕದಿನ ಕ್ರಿಕೆಟ್​ನಲ್ಲಿ 21 ಬಾರಿ ಶತಕದ ಜೊತೆಯಾಟವಾಡಿದ್ದಾರೆ. ಇವರ ನಂತರದಲ್ಲಿ ಸ್ಥಾನದಲ್ಲಿ ಆಸ್ಟ್ರೇಲಿಯಾದ ಗಿಲ್​ಕ್ರಿಸ್ಟ್ ಹಾಗೂ ಮ್ಯಾಥ್ಯೂ ಹೇಡನ್​ ಸ್ಥಾನ ಪಡೆದಿದ್ದರು. ಆದರೆ ಈ ಜೋಡಿಯನ್ನ ಹಿಂದಿಕ್ಕಿರುವ ರೋಹಿತ್-ಧವನ್​​ 16ನೇ ಶತಕದ ಜೊತೆಯಾಟವಾಡಿ ಆಸೀಸ್​​​ ಬ್ಯಾಟ್ಸ್​​ಮನ್​ಗಳ ದಾಖಲೆಯನ್ನ ಪುಡಿಗಟ್ಟಿದ್ದಾರೆ.

Yuvraj Singh Retirement: ಕ್ರಿಕೆಟ್ ಲೋಕದಲ್ಲಿ 'ಯುವ ರಾಜ'ನಾಗಿ ಮೆರೆದ ಕಥೆ; 19 ವರ್ಷಗಳ ಕ್ರೀಡಾ ಪಯಣ ಅಂತ್ಯ!

ಹೀಗೆ ಸಚಿನ್-ಗಂಗೂಲಿ ಬಳಿಕ ಭಾರತ ಕ್ರಿಕೆಟ್ ಕಂಡ ಯಶಸ್ವಿ ಜೋಡಿ ಎನಿಸಿಕೊಂಡಿರುವ ರೋಹಿತ್ ಶರ್ಮಾ-ಶಿಖರ್ ಧವನ್, ​ಸದ್ಯ ನಡೆಯುತ್ತಿರುವ ಐಸಿಸಿ ವಿಶ್ವಕಪ್​ನಲ್ಲಿ ಭರ್ಜರಿ ಆಟವಾಡುತ್ತಿದ್ದಾರೆ. ಈ ಮೂಲಕ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ತಂದುಕೊಟ್ಟು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಈ ಭಲೇ ಜೋಡಿ.

First published:June 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ