India vs New Zealand: ಭಾರತ-ನ್ಯೂಜಿಲೆಂಡ್​ ಸೆಮಿಫೈನಲ್: ಪಂದ್ಯ ಮುಂದುವರೆದೆ ಟೀಂ ಇಂಡಿಯಾಗೆ ಸಿಗುವ ಗುರಿ ಎಷ್ಟು ಗೊತ್ತೆ?

India vs New Zealand: ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡವು ಫೈನಲ್ ಪ್ರವೇಶಿಸಲಿದೆ. ಇದು ಭಾರತ ತಂಡಕ್ಕೆ ವರವಾಗಲಿದೆ. ಏಕೆಂದರೆ 8 ಪಂದ್ಯಗಳಲ್ಲಿ ಟೀಂ ಇಂಡಿಯಾ 7 ರಲ್ಲಿ ಗೆದ್ದು 15 ಪಾಯಿಂಟ್​ಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

zahir | news18
Updated:July 9, 2019, 10:28 PM IST
India vs New Zealand: ಭಾರತ-ನ್ಯೂಜಿಲೆಂಡ್​ ಸೆಮಿಫೈನಲ್: ಪಂದ್ಯ ಮುಂದುವರೆದೆ ಟೀಂ ಇಂಡಿಯಾಗೆ ಸಿಗುವ ಗುರಿ ಎಷ್ಟು ಗೊತ್ತೆ?
World Cup 2019 semifinal
  • News18
  • Last Updated: July 9, 2019, 10:28 PM IST
  • Share this:
ಮ್ಯಾಂಚೆಸ್ಟರ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್​ ಮೊದಲ ಸೆಮಿ ಫೈನಲ್​ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಮೊದಲ ಇನಿಂಗ್ಸ್​ನ 46.1 ಓವರ್​ ವೇಳೆ ಮಳೆ ಮಳೆ ಸುರಿದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.

ಇತ್ತೀಚಿನ ಮಾಹಿತಿ ಪ್ರಕಾರ ವರುಣನ ಅಬ್ಬರ ನಿಲ್ಲುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಹೀಗಾಗಿ ಪಂದ್ಯದ ಆರಂಭವೂ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಲೀಗ್ ಹಂತದ ಪಂದ್ಯವು ಮಳೆಗೆ ಅಹುತಿಯಾದ ಕಾರಣ ಉಭಯ ತಂಡಗಳು ತಲಾ 1 ಅಂಕಗಳನ್ನು ಹಂಚಿಕೊಂಡಿದ್ದರು. ಇದೀಗ ಇದೇ ತಂಡಗಳಿಗೆ ಪ್ರತಿಕೂಲ ಹವಾಮಾನದ ಸಮಸ್ಯೆ ಎದುರಾಗಿದೆ. ಆದರೆ ಸೆಮಿ ಫೈನಲ್​ ವರುಣನ ಅಡ್ಡಿಯಾದರೆ ಉಭಯ ತಂಡಗಳಿಗೆ ಅಂಕಗಳನ್ನು ಹಂಚಲಾಗುವುದಿಲ್ಲ. ಬದಲಾಗಿ ಡಕ್​ವರ್ಥ್​ ಲೆವಿಸ್ ನಿಯಮದ ಪ್ರಕಾರ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಅಂದರೆ ನ್ಯೂಜಿಲೆಂಡ್ ಮೊತ್ತದ ಸರಾಸರಿ ಅನುಗುಣವಾಗಿ ಭಾರತಕ್ಕೆ ಗುರಿ ನೀಡಲಾಗುತ್ತದೆ.

ಡೆಕ್​ವರ್ಥ್​ ನಿಯಮದ ಅನುಸಾರ ಏಕದಿನ ಕ್ರಿಕೆಟ್​ನಲ್ಲಿ ಅತೀ ಕಡಿಮೆ ಎಂದರೆ 20 ಓವರ್​ಗಳನ್ನು ಉಭಯ ತಂಡಗಳು ಎಸೆಯಬೇಕು. ಇಲ್ಲಿ ಈಗಾಗಲೇ ಟೀಂ ಇಂಡಿಯಾ 46.1 ಓವರ್​ ಮಾಡಿರುವುದರಿಂದ ಮಳೆ ನಿಂತರೆ ನ್ಯೂಜಿಲೆಂಡ್​ಗೆ​ ಮತ್ತೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗುವುದು ಅನುಮಾನ.

ಡಿಎಲ್​ಎಸ್​ ನಿಯಮದ ಪ್ರಕಾರ ನ್ಯೂಜಿಲೆಂಡ್​ನ ಪ್ರಸ್ತುತ ಸ್ಕೋರ್, ರನ್​ರೇಟ್ ಮತ್ತು ಭಾರತದ ಓವರ್​ಗಳನ್ನು ಪರಿಗಣನೆಗೆ ತೆಗೆದು ನಿರ್ದಿಷ್ಟ ಗುರಿಯನ್ನು ಟೀಂ ಇಂಡಿಯಾಗೆ ನೀಡಲಾಗುತ್ತದೆ. ತಜ್ಙರ ಅಂಕಿ ಅಂಶಗಳ ಪ್ರಕಾರ ಇಲ್ಲಿ ಪಂದ್ಯ ಮುಂದುವರೆದರೆ ನ್ಯೂಜಿಲೆಂಡ್​ನ ರನ್​ರೇಟ್​ ಅನುಸಾರ ಭಾರತಕ್ಕೆ 46 ಓವರುಗಳಲ್ಲಿ 237 ರನ್​ಗಳ ಗುರಿ ನೀಡಲಾಗುತ್ತದೆ. ಇನ್ನು ಓವರುಗಳನ್ನು ಕಡಿತಗೊಳಿಸಿದರೆ 40 ಓವರ್​ಗಳಲ್ಲಿ ಭಾರತ 223 ರನ್​ಗಳ ಗುರಿ ಪಡೆಯಲಿದೆ. ಹಾಗೆಯೇ 35 ಓವರ್​ಗಳಲ್ಲಾದರೆ 209 ರನ್​ಗಳ ಟಾರ್ಗೆಟ್ ಸಿಗಲಿದೆ.

ಇನ್ನು ತಡವಾದರೆ ಪಂದ್ಯವನ್ನು 30 ಓವರುಗಳಿಗೆ ಸೀಮಿತಗೊಳಿಸಲಾಗುತ್ತದೆ. ಆ ವೇಳೆ ಭಾರತಕ್ಕೆ ಸಿಗುವ ಟಾರ್ಗೆಟ್ 30 ಓವರ್​ಗಳಲ್ಲಿ 192 ರನ್​ಗಳು. ಇನ್ನು 25 ಓವರುಗಳಿಗೆ ಪಂದ್ಯವನ್ನು ಇಳಿಸಿದರೆ 172 ರನ್​ಗಳ ಗುರಿ ಟೀಂ ಇಂಡಿಯಾ ಮುಂದಿರಲಿದೆ. ಹಾಗೆಯೇ ಪಂದ್ಯವು ಮತ್ತಷ್ಟು ತಡವಾದರೆ ಪಂದ್ಯವನ್ನು 20 ಓವರುಗಳಿಗೆ ಸೀಮಿತಗೊಳಿಸಲಾಗುತ್ತದೆ. ಈ ವೇಳೆ ಭಾರತಕ್ಕೆ 120 ಎಸೆತಗಳಲ್ಲಿ 148 ರನ್​ಗಳ ಗುರಿ ನೀಡಲಾಗುತ್ತದೆ ಎಂದು ತಿಳಿಸಿದೆ. ಹಾಗೆಯೇ ಈ ಅಂಕಿ ಅಂಶಗಳಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗುವ ಸಾಧ್ಯತೆಯಿದೆ.

ಇದರ ಹೊರತಾಗಿ ಪಂದ್ಯ ನಡೆಯದಿದ್ದರೆ ಇದೇ ಪಂದ್ಯವನ್ನು ನಾಳೆಗೆ ಮುಂದೂಡಲಾಗುತ್ತದೆ. ಈ ಹಿಂದೆ 1999ರ ವಿಶ್ವಕಪ್​ ವೇಳೆ ಮೀಸಲು ದಿನದ ಪ್ರಯೋಗವನ್ನು ಐಸಿಸಿ ಮಾಡಿತ್ತು. ಅದರಂತೆ ಮಂಗಳವಾರ ಪಂದ್ಯ ನಡೆಯದಿದ್ದರೆ ಬುಧವಾರ ಸದ್ಯ ನ್ಯೂಜಿಲೆಂಡ್ ಗಳಿಸಿರುವ (46.1 ಓವರ್​ 211 ರನ್​) ಮೊತ್ತದಿಂದ ಪಂದ್ಯ ಆರಂಭವಾಗಲಿದೆ. ಅದಾಗ್ಯೂ ಪಂದ್ಯವನ್ನು ನಡೆಸಲಾಗದಿದ್ದರೆ ಲೀಗ್ ಹಂತದ ಪಾಯಿಂಟ್​ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡವು ಫೈನಲ್ ಪ್ರವೇಶಿಸಲಿದೆ. ಇದು ಭಾರತ ತಂಡಕ್ಕೆ ವರವಾಗಲಿದೆ. ಏಕೆಂದರೆ 8 ಪಂದ್ಯಗಳಲ್ಲಿ ಟೀಂ ಇಂಡಿಯಾ 7 ರಲ್ಲಿ ಗೆದ್ದು 15 ಪಾಯಿಂಟ್​ಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ನ್ಯೂಜಿಲೆಂಡ್ ಕೇವಲ 5 ಮಾತ್ರ ಜಯಿಸಿ ಪಾಯಿಂಟ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಹೀಗಾಗಿ ಪಂದ್ಯವು ಮಳೆಗೆ ಅಹುತಿಯಾದರೆ ಟೀಂ ಇಂಡಿಯಾ ನಿರಾಂತಕವಾಗಿ ಫೈನಲ್ ಪ್ರವೇಶಿಸಲಿದೆ.ಈ ಬಗ್ಗೆ ಪಂದ್ಯದ  ರೆಫರಿ ನಿರ್ಧಾರ ಕೈಗೊಳ್ಳಲಿದ್ದಾರೆ. ರೆಫರಿ ಡೇವಿಡ್ ಬೂನ್ ಅವರು ಇದೀಗ ಪಂದ್ಯದ ನಿಗದಿತ ಸಮಯವನ್ನು ಒಂದು ಗಂಟೆಗಳ ಕಾಲ ಮುಂದೂಡಿದ್ದಾರೆ. ಆ ಮೂಲಕ ದಿನದ ಕೊನೆಯ ಗಂಟೆಯವರೆಗೂ ಕಾದು ನೋಡಲು ನಿರ್ಧರಿಸಿದ್ದಾರೆ.  ಇದರ ಹೊರತಾಗಿಯು ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ.

46 ಓವರ್​ಗಳಲ್ಲಿ 237 ಗುರಿ
40 ಓವರ್​ಗಳಲ್ಲಿ  223 ಗುರಿ 
35 ಓವರ್​ಗಳಲ್ಲಿ 209 ಗುರಿ
30 ಓವರ್​ಗಳಲ್ಲಿ 192 ಗುರಿ
25 ಓವರ್​ಗಳಲ್ಲಿ 172 ಗುರಿ
20 ಓವರ್​ಗಳಲ್ಲಿ 148 ಗುರಿ

ಇದನ್ನೂ ಓದಿ: IND vs NZ: ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲಿದ್ದಾರಾ ರೋಹಿತ್ ಶರ್ಮಾ..!

First published:July 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading