ಸೆಮಿ ಫೈನಲ್​ ಕಾದಾಟಕ್ಕೆ ವೇದಿಕೆ ಸಜ್ಜು; ನ್ಯೂಜಿಲೆಂಡ್​ ವಿರುದ್ಧ ಸೆಣಸಲಿದೆ ಭಾರತ

ICC Cricket World cup 2019: ವಿಶ್ವಕಪ್​ ಲೆಕ್ಕಾಚಾರದ ಪ್ರಕಾರ ಸೆಮಿ ಫೈನಲ್​ನಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವವರು ನಾಲ್ಕನೇ ಸ್ಥಾನದಲ್ಲಿರುವ ತಂಡದ ಜೊತೆ ಸೆಣಸಬೇಕು. ಹಾಗಾಗಿ ಭಾರತ-ನ್ಯೂಜಿಲೆಂಡ್​ ನಡುವೆ ಮಂಗಳವಾರ ಮೊದಲ ಸೆಮಿ ಫೈನಲ್​ ನಡೆಯಲಿದೆ.

Rajesh Duggumane | news18
Updated:July 7, 2019, 9:56 AM IST
ಸೆಮಿ ಫೈನಲ್​ ಕಾದಾಟಕ್ಕೆ ವೇದಿಕೆ ಸಜ್ಜು; ನ್ಯೂಜಿಲೆಂಡ್​ ವಿರುದ್ಧ ಸೆಣಸಲಿದೆ ಭಾರತ
ಟೀಂ ಇಂಡಿಯಾ ಆಟಗಾರರು
  • News18
  • Last Updated: July 7, 2019, 9:56 AM IST
  • Share this:
ವಿಶ್ವಕಪ್​ ಲೀಗ್​ ಹಂತದ ಪಂದ್ಯಗಳು ಮುಗಿದಿದ್ದು, ಮಂಗಳವಾರ ಸೆಮಿ ಫೈನಲ್​ ಆರಂಭಗೊಳ್ಳಲಿದೆ. ಸೆಮೀಸ್​ನಲ್ಲಿ ಭಾರತ ಯಾವ ತಂಡದ ವಿರುದ್ಧ ಸೆಣಸಲಿದೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಜು.9ರಂದು ಮ್ಯಾಂಚೆಸ್ಟರ್​ನಲ್ಲಿ ಭಾರತ-ನ್ಯೂಜಿಲೆಂಡ್​ ಮೊದಲ ಬಾರಿಗೆ ಮುಖಾಮುಖಿ ಆಗುತ್ತಿವೆ.

ಲೀಗ್​ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತ ಸೆಣೆಸಬೇಕಿತ್ತು. ಆದರೆ ಮಳೆ ಬಂದ ಕಾರಣ ಪಂದ್ಯ ರದ್ದಾಗಿತ್ತು. ಈಗ ಸೆಮಿ ಫೈನಲ್​ನಲ್ಲಿ ಎರಡೂ ತಂಡಗಳು ಮುಖಾಮುಖಿ ಆಗುತ್ತಿದ್ದು, ಕ್ರೀಡಾಭಿಮಾನಿಗಳು ಈ ದಿನಕ್ಕಾಗಿ ಕಾದು ಕೂತಿದ್ದಾರೆ.

ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್​ ತಂಡಗಳು ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದವು. ಆದರೆ ಸೆಮೀಸ್​ನಲ್ಲಿ ಭಾರತ ಯಾವ ತಂಡವನ್ನು ಎದುರಿಸಲಿದೆ ಎಂಬುದು ಕೊನೆಯ ಕ್ಷಣದವರೆಗೂ ಪ್ರಶ್ನೆಯಾಗಿಯೇ ಉಳಿದಿತ್ತು. ಶ್ರೀಲಂಕಾ ವಿರುದ್ಧ ಭಾರತ ಗೆಲ್ಲುವ ಮೂಲಕ 15 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು, ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದರಿಂದ ರ್ಯಾಂಕಿಂಗ್​​ನಲ್ಲಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.ವಿಶ್ವಕಪ್​ ಲೆಕ್ಕಾಚಾರದ ಪ್ರಕಾರ ಸೆಮಿ ಫೈನಲ್​ನಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವವರು ನಾಲ್ಕನೇ ಸ್ಥಾನದಲ್ಲಿರುವ ತಂಡದ ಜೊತೆ ಸೆಣಸಬೇಕು.  ಹಾಗಾಗಿ ಭಾರತ-ನ್ಯೂಜಿಲೆಂಡ್​ ನಡುವೆ ಮಂಗಳವಾರ ಮೊದಲ ಸೆಮಿ ಫೈನಲ್​ ನಡೆಯಲಿದೆ. ಗುರುವಾರ ನಡೆಯಲಿರುವ ಸೆಮಿ ಫೈನಲ್​ನಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್​ ಸೆಣೆಸಲಿದೆ.

First published: July 7, 2019, 9:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading