Vinay BhatVinay Bhat
|
news18 Updated:May 24, 2019, 7:50 PM IST
ರೋಹಿತ್ ಶರ್ಮಾ
- News18
- Last Updated:
May 24, 2019, 7:50 PM IST
ಬೆಂಗಳೂರು (ಮೇ. 24): ಟೀಂ ಇಂಡಿಯಾ ಆಟಗಾರರು ವಿಶ್ವಕಪ್ಗಾಗಿ ಈಗಾಗಲೇ ಆಂಗ್ಲರ ನಾಡಿಗೆ ಕಾಲಿಟ್ಟಿದ್ದು, ಭರ್ಜರಿ ತಯಾರಿಯಲ್ಲಿದ್ದಾರೆ. ನಾಳೆ ನ್ಯೂಜಿಲೆಂಡ್ ವಿರುದ್ಧ ಭಾರತ ಮೊದಲ ಅಭ್ಯಾಸ ಪಂದ್ಯವನ್ನಾಡಲಿದೆ. ಈ ಮಧ್ಯೆ ತಂಡದ ಉಪ ನಾಯಕ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ.
'ವಿರಾಟ್ ಕೊಹ್ಲಿ ಒಬ್ಬ ಅತ್ಯುತ್ತಮ ನಾಯಕ. ಕಳೆದ ಕೆಲ ವರ್ಷಗಳಿಂದ ನಾಯಕನಾಗಿ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಕೊಹ್ಲಿ ಬಲಿಷ್ಠ ತಂಡವನ್ನು ಹೊಂದಿದ್ದಾರೆ. ನಾನು ಟೀಂ ಇಂಡಿಯಾದ ಉಪ ನಾಯಕನಾಗಿರುವುದು ಸಂತಸವಿದೆ. ಕೊಹ್ಲಿಗೆ ನನ್ನ ಅವಶ್ಯಕತೆಯಿದ್ದಾಗ ಸಹಾಯ ಮಾಡುವೆ. ಅದರಲ್ಲಿ ನನಗೆ ಖುಷಿಯಿದೆ. ನನಗೆ ನನ್ನ ತಂಡವೇ ಮುಖ್ಯ' ಎಂದಿದ್ದಾರೆ.
ಇದನ್ನೂ ಓದಿ: VIDEO: ಆಂಡ್ರೆ ರಸೆಲ್ ಭಯಂಕರ ಬೌನ್ಸರ್: ವಿಶ್ವಕಪ್ನಿಂದ ಉಸ್ಮಾನ್ ಖ್ವಾಜಾ ಔಟ್?
ಇನ್ನು ಹಾರ್ದಿಕ್ ಪಾಂಡ್ಯ ಬಗ್ಗೆ ಮಾತನಾಡಿದ ರೋಹಿತ್, 'ಹಾರ್ದಿಕ್ಗೆ ಇದು ಮೊದಲ ವಿಶ್ವಕಪ್. ಪಾಂಡ್ಯ ಸದ್ಯ ಉತ್ತಮ ಲಯದಲ್ಲಿದ್ದು, ಚಾಲೆಂಜ್ ಅನ್ನು ಇಷ್ಟ ಪಡುವಂತಹ ವ್ಯಕ್ತಿ. ಐಪಿಎಲ್ನಲ್ಲಿ ಅದ್ಭುತ ಆಟ ಪ್ರದರ್ಶಿಸಿರುವ ಹಾರ್ದಿಕ್ ವಿಶ್ವಕಪ್ನಲ್ಲು ಮಿಂಚಲಿದ್ದಾರೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಮಡದಲ್ಲಿ ಭಾರತ ಪ್ರಮುಖವಾಗಿದ್ದು ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಭಾರತ ಎರಡು ಅಭ್ಯಾಸ ಪಂದ್ಯವನ್ನು ಆಡಲಿದ್ದು, ಮೇ. 25 ರಂದು ನ್ಯೂಜಿಲೆಂಡ್ ವಿರುದ್ಧ ಹಾಗೂ ಮೇ. 29 ರಂದು ಬಾಂಗ್ಲಾದೇಶ ವಿರುದ್ಧ ವಾರ್ಮ್ಅಪ್ ಪಂದ್ಯವನ್ನಾಡಲಿದೆ.
First published:
May 24, 2019, 7:40 PM IST