ICC Cricket World Cup 2019: ಪಾಕಿಸ್ತಾನಕ್ಕಿಂತ ಆರ್​​ಸಿಬಿ ತಂಡವೇ ಬಲಿಷ್ಠ!

ಪಾಕಿಸ್ತಾನ ಈರೀತಿ ಹೀನಾಯ ಸೋಲು ಕಂಡ ಬೆನ್ನಲ್ಲೆ ಸಾಮಾಜಿಕ ತಾಣಗಳಲ್ಲಿ ಟ್ರೋಲುಗಳ ಮಳೆ ಸುರಿದಿದೆ. ಭಾರತೀಯ ಅಭಿಮಾನಿಗಳಂತು ಟ್ವಿಟ್ಟರ್​​​ನಲ್ಲಿ ಪಾಕ್ ಕೆಟ್ಟ ಪ್ರದರ್ಶನದ ಬಗ್ಗೆ ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.

Vinay Bhat | news18
Updated:June 1, 2019, 4:00 PM IST
ICC Cricket World Cup 2019: ಪಾಕಿಸ್ತಾನಕ್ಕಿಂತ ಆರ್​​ಸಿಬಿ ತಂಡವೇ ಬಲಿಷ್ಠ!
ಸಾಂದರ್ಭಿಕ ಚಿತ್ರ
Vinay Bhat | news18
Updated: June 1, 2019, 4:00 PM IST
ಬೆಂಗಳೂರು (ಜೂ. 01): ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ವಿಶ್ವಕಪ್​ನ ಆರಂಭದಲ್ಲೇ ಮುಗ್ಗರಿಸಿದೆ. ನಿನ್ನೆ ನಾಟಿಂಗ್​ಹ್ಯಾಮ್​ನ ಟ್ರೆಂಟ್​ಬ್ರಿಡ್ಜ್​​ ಮೈದಾನದಲ್ಲಿ ನಡೆದ 2ನೇ ಪಂದ್ಯದಲ್ಲಿ ಪಾಕಿಸ್ತಾನ ಇಷ್ಟು ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತೆ ಎಂದು ಯಾರೊಬ್ಬರು ಊಹಿಸಿರಲಿಲ್ಲ.

ಕೆರಿಬಿಯನ್​ ದಾಳಿಗೆ ತರಗೆಲೆಯಂತೆ ಉದುರಿದ ಪಾಕ್​​ನ ಬ್ಯಾಟ್ಸ್​ಮನ್​ಗಳು​​​​​​​ ಏಕದಿನ ಪಂದ್ಯವನ್ನೇ ಮರೆತಂತೆ ಬ್ಯಾಟ್​ ಬೀಸಿದರು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಕಂಡರು. 78 ರನ್​ಗೆ 7 ವಿಕೆಟ್ ಕಳೆದುಕೊಂಡಿದ್ದ ಪಾಕ್​ ಪಡೆ, 21.5 ಓವರ್​​ಗಳಲ್ಲೇ 105 ರನ್​ಗಳಿಗೆ ಮುಕ್ತಾಯ ಹಾಡಿತು.

ಪಾಕಿಸ್ತಾನ ಈರೀತಿ ಹೀನಾಯ ಸೋಲು ಕಂಡ ಬೆನ್ನಲ್ಲೆ ಸಾಮಾಜಿಕ ತಾಣಗಳಲ್ಲಿ ಟ್ರೋಲುಗಳ ಮಳೆ ಸುರಿದಿದೆ. ಭಾರತೀಯ ಅಭಿಮಾನಿಗಳಂತು ಟ್ವಿಟ್ಟರ್​​​ನಲ್ಲಿ ಪಾಕ್ ಕೆಟ್ಟ ಪ್ರದರ್ಶನದ ಬಗ್ಗೆ ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ನಿಟ್ಟುಸಿರು ಬಿಟ್ಟ ಟೀಂ ಇಂಡಿಯಾ; ತಂಡದಲ್ಲಿ ಕಾಡುತ್ತಿದ್ದ ಸಮಸ್ಯೆಗೆ ಕನ್ನಡಿಗನಿಂದ ಪರಿಹಾರ

ಅದರಲ್ಲು ಈ ಬಾರಿಯ ಐಪಿಎಲ್​​ನಲ್ಲಿ ಕಳಪೆ ಆಟ ತೋರಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದು, ಪಾಕಿಸ್ತಾನಕ್ಕಿಂತ ಆರ್​ಸಿಬಿ ತಂಡವೇ ಉತ್ತಮವಾಗಿದೆ ಎಂದು ಬರೆದುಕೊಂಡಿದ್ದಾರೆ.

 























First published:June 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...