HOME » NEWS » Sports » CRICKET WORLD CUP 2019 POOR UMPIRING DECISIONS STOLE THE WEST INDIES GAME IN WORLD CUP MATCH AGAINST AUSTRALIA

Cricket World Cup 2019; ಅಂಪೈರ್ ಕೆಟ್ಟ ಪ್ರದರ್ಶನದಿಂದ ಆಸ್ಟ್ರೇಲಿಯಾಗೆ ಗೆಲುವು; ವಿಂಡೀಸ್ ದೈತ್ಯ ಗೇಲ್​ಗೆ ಅಂಪೈರ್ ಹೀಗಾ ಮಾಡೋದು?

ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಫೀಲ್ಡ್​ ಅಂಪೈರ್ ಅವರ ಕೆಟ್ಟ ಪ್ರದರ್ಶನದಿಂದಾಗಿ ಆಸ್ಟ್ರೇಲಿಯ ಗೆಲುವು ಸಾಧಿಸುವಂತಾಗಿದೆ. ಇಂತಹ ಕೆಟ್ಟ ಕ್ಷಣಕ್ಕೆ 2019ರ ವಿಶ್ವಕಪ್​ ಟೂರ್ನಿ ಸಾಕ್ಷಿಯಾಗಿದ್ದು ಮಾತ್ರ ವಿಪರ್ಯಾಸ.

MAshok Kumar | news18
Updated:June 7, 2019, 1:28 PM IST
Cricket World Cup 2019; ಅಂಪೈರ್ ಕೆಟ್ಟ ಪ್ರದರ್ಶನದಿಂದ ಆಸ್ಟ್ರೇಲಿಯಾಗೆ ಗೆಲುವು; ವಿಂಡೀಸ್ ದೈತ್ಯ ಗೇಲ್​ಗೆ ಅಂಪೈರ್ ಹೀಗಾ ಮಾಡೋದು?
ವೇಗಿ ಮಿಚೆಲ್ ಸ್ಟಾರ್ಕ್ ನೋಬಾಲ್ ಎಸೆದಿರುವುದು.
  • News18
  • Last Updated: June 7, 2019, 1:28 PM IST
  • Share this:
ಕ್ರಿಕೆಟ್​ನಲ್ಲಿ ಯಾವುದೇ ಪಂದ್ಯದ ಸೋಲು ಅಥವಾ ಗೆಲುವು ಆಯಾ ತಂಡದ ಆಟಗಾರರು ನೀಡುವ ಪ್ರದರ್ಶನದಿಂದ ನಿರ್ಧಾರವಾಗುತ್ತದೆ. ಆದರೆ, ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಫೀಲ್ಡ್​ ಅಂಪೈರ್ ಅವರ ಕೆಟ್ಟ ಪ್ರದರ್ಶನದಿಂದಾಗಿ ಆಸ್ಟ್ರೇಲಿಯ ಗೆಲುವು ಸಾಧಿಸುವಂತಾಗಿದೆ. ಇಂತಹ ಕೆಟ್ಟ ಕ್ಷಣಕ್ಕೆ 2019ರ ವಿಶ್ವಕಪ್​ ಟೂರ್ನಿ ಸಾಕ್ಷಿಯಾಗಿದ್ದು,  ವಿಶ್ವಕಪ್ ಇತಿಹಾಸದಲ್ಲಿ ಈ ಪಂದ್ಯ ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಆ ಅಂಪೈರ್ ಹೆಸರು ಕ್ರಿಸ್ ಗ್ಯಾಫನಿ ಹಾಗೂ ಆತ ಮಾಡಿದ್ದು ಮಾತ್ರ ಸತತ ಎಡವಟ್ಟು.

ಗುರುವಾರ ನಡೆದ ಆಸ್ಟ್ರೇಲಿಯ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕಾಂಗರೂ ಪಡೆ 49 ಓವರ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು 288 ರನ್ ಗಳಿಸಿತ್ತು. ಆದರೆ, ನಾಟಿಂಗ್ಹ್ಯಾಮ್ ಕ್ರೀಡಾಂಗಣದಲ್ಲಿ ಸುಲಭದ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್​ಗೆ ಬಿಡದಂತೆ ಕಾಡಿದ್ದು ಮಾತ್ರ ನ್ಯೂಜಿಲೆಂಡ್ ಮೂಲದ ಅಂಪೈರ್ ಕ್ರಿಸ್ ಗ್ಯಾಫನಿ.
ಇದನ್ನೂ ಓದಿ: ಸೇನೆಯ ಬಲಿದಾನ ನೆನೆದ ಧೋನಿಗೆ ಗ್ಲೌಸ್​ ಬದಲಿಸುವಂತೆ ಐಸಿಸಿ ತಾಕೀತು; ವಿಶ್ವಕಪ್​ನಿಂದ ಹಿಂದೆ ಸರಿಯಲಿದೆಯಾ ಭಾರತ?

ಕ್ರಿಸ್​ ಗೇಲ್​ಗೆ ಸತತ ತಪ್ಪು ನಿರ್ಣಯ, ನೋಬಾಲ್ ಕೊಡದೆ ಅಂಪೈರ್ ಎಡವಟ್ಟುವೆಸ್ಟ್ ಇಂಡೀಸ್​ನ  ಕ್ರಿಸ್ ಗೇಲ್ ವಿಶ್ವದ ದೊಡ್ಡ ಬಿಗ್ ಹಿಟರ್. ಯಾವುದೇ ಪಂದ್ಯದ ಗತಿಯನ್ನು ಬದಲಿಸುವ ತಾಕತ್ತಿರುವ ಆಟಗಾರನಾತ. ಆದರೆ, ಬುಧವಾರ ಮಾತ್ರ ಆತನ ನಸೀಬು ಕೆಟ್ಟಿತ್ತು. ಪರಿಣಾಮ ಅಂಪೈರ್ ಮಾಡಿದ ಸತತ ಎಡವಟ್ಟಿಗೆ ಬಲಿಯಾಗಬೇಕಾಗಿ ಬಂದಿತ್ತು.

ಅದು ಕೂಟದ ಐದನೇ ಓವರ್ ಮೊದಲನೇ ಎಸೆತ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ಗೇಲ್ ಬ್ಯಾಟಿಗೆ ತಾಕದೆ ಕೀಪರ್ ಕೈ ಸೇರಿತ್ತು. ಆದರೆ, ಅಂಪೈರ್ ಅದನ್ನು ಔಟ್ ಎಂದು ತೀರ್ಪು ನೀಡಿದ್ದರು. ತೀರ್ಪು ಪುನರ್ ಮರುಪರಿಶೀಲನೆ ವೇಳೆ ಅದು ನಾಟ್ಔಟ್ ಎಂಬುದು ಸಾಭೀತಾಗಿತ್ತು.

ಇನ್ನು ಅದೇ ಓವರ್​ನ 3ನೇ ಎಸೆತದಲ್ಲಿ ಲೆಗ್​ ಸ್ಟೆಂಪಿನಿಂದ ಆಚೆ ಹೋಗುತ್ತಿದ್ದ ಎಸೆತವನ್ನು ಅಂಪೈರ್ ಎಲ್ಬಿಡಬ್ಲ್ಯೂ ಎಂದು ತೀರ್ಪು ನೀಡಿದ್ದರು. ಈ ತೀರ್ಪು ಸಹ ನಂತರ ನಾಟ್ಔಟ್ ಎಂದು ತಿಳಿದುಬಂದಿತ್ತು. ಈ ಸಂದರ್ಭದಲ್ಲಿ ಸತತ ಅಂಪೈರ್ ಕೆಟ್ಟ ತೀರ್ಮಾನಗಳಿಂದ ಬೇಸತ್ತಿದ್ದ ಗೇಲ್ ಅಂಗಣದಲ್ಲೇ ಅಸಮಾಧಾನ ಹೊರಹಾಕಿದ್ರು. ಆಗಲೂ ಅಂಪೈರ್ ಸರಿಯಾಗಿ ಕಾರ್ಯನಿರ್ವಹಿಸಲು ಮುಂದಾಗಲೇ ಇಲ್ಲ. ಆತ ಮಾಡಿದ ಮತ್ತದೇ ಯಡವಟ್ಟು ಕೊನೆಗೂ ಗೇಲ್ ವಿಕೆಟ್ ಕಬಳಿಸಿತ್ತು.

Youtube Video


ಅದೇ ಐದನೇ ಓವರ್​ನ ನಾಲ್ಕನೇ ಎಸೆತ. ವೇಗಿ ಮಿಚೆಲ್ ಸ್ಟಾರ್ಕ್ ಈ ಎಸೆತವನ್ನು ನೋ ಬಾಲ್ ಹಾಕಿದ್ದರು. ಕ್ರೀಸ್​ನಿಂದ ಮಾರುದ್ದ ಹೆಜ್ಜೆ ಇಟ್ಟು ಚೆಂಡನ್ನು ಎಸೆದಿದ್ದರು. ಆದರೆ, ಅಂಪೈರ್ ಇದನ್ನು ಗಮನಿಸಿರಲಿಲ್ಲ. ಪರಿಣಾಮ ಮರು ಎಸೆತದಲ್ಲೇ ಗೇಲ್ ಮತ್ತೆ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರು. ಅಂಪೈರ್ ನಾಲ್ಕನೇ ಎಸೆತವನ್ನು ನೋ ಬಾಲ್ ಕೊಟ್ಟಿದ್ದರೆ ಐದನೇ ಎಸೆತದಲ್ಲಿ ಗೇಲ್​ಗೆ ಫ್ರೀ ಹಿಟ್ ಸಿಗುತ್ತಿತ್ತು. ಆದರೆ, ಅಂಪೈರ್ ಕೆಟ್ಟ ತೀರ್ಪು ಕೊನೆಗೂ ಗೇಲ್ ವಿಕೆಟ್ ಕಬಳಿಸಿತ್ತು. ಅಲ್ಲದೆ ವೆಸ್ಟ್ ಇಂಡೀಸ್ ಸೋಲಿಗೂ ಕಾರಣವಾಗಿದ್ದು ಮಾತ್ರ ವಿಪರ್ಯಾಸ.ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಜಾಸನ್​ ಹೋಲ್ಡರ್​ ಅಂಪೈರ್ ತೀರ್ಮಾನದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ ಅಂಪೈರ್ ವಿರುದ್ಧ ವಿಶ್ವದೆಲ್ಲೆಡೆ ಇರುವ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಯ ಸುರಿಮಳೆಗಳನ್ನೇ ಸುರಿಯುತ್ತಿದ್ದಾರೆ.

First published: June 7, 2019, 1:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories