World cup: 1992 ಮತ್ತು 2019ರ ವಿಶ್ವಕಪ್​ ಸಾಮ್ಯತೆ: ಈ ಬಾರಿ ಕೂಡ ಫೈನಲ್​ ಪ್ರವೇಶಿಸಲಿದೆಯಾ ಪಾಕ್?

ಇಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದವರ ಹೆಸರು ಮತ್ತು ಬ್ಯಾಟಿಂಗ್ ಶೈಲಿ. ಹೌದು, 1992 ರಲ್ಲಿ ಪ್ರಬಲ ತಂಡವಾಗಿದ್ದ ಆಸ್ಟ್ರೇಲಿಯಾ ವಿರುದ್ಧ ಪಾಕ್ 48 ರನ್​ಗಳಿಂದ ಗೆಲುವು ಸಾಧಿಸಿತ್ತು

zahir | news18
Updated:June 27, 2019, 4:12 PM IST
World cup: 1992 ಮತ್ತು 2019ರ ವಿಶ್ವಕಪ್​ ಸಾಮ್ಯತೆ: ಈ ಬಾರಿ ಕೂಡ ಫೈನಲ್​ ಪ್ರವೇಶಿಸಲಿದೆಯಾ ಪಾಕ್?
@DM
  • News18
  • Last Updated: June 27, 2019, 4:12 PM IST
  • Share this:
ವಿಶ್ವ ಕ್ರಿಕೆಟ್​ನಲ್ಲಿ ಪಾಕಿಸ್ತಾನ ತಂಡವನ್ನು ಯಾವತ್ತೂ ಹಗುರವಾಗಿ ಪರಿಗಣಿಸಲಾಗುವುದಿಲ್ಲ. ಇದಕ್ಕೆ ಪಾಕ್ ಕ್ರಿಕೆಟ್ ಇತಿಹಾಸವೇ ಸಾಕ್ಷಿ. ಜಯಗಳಿಸುವ ಮ್ಯಾಚನ್ನು ಕೈಚೆಲ್ಲುವುದು ಮತ್ತು ಸೋಲುವ ಪಂದ್ಯವನ್ನು ಗೆದ್ದು ಸಂಭ್ರಮಿಸಿದ ಅನೇಕ ಉದಾಹರಣೆಗಳು ಕಣ್ಮುಂದೆಯೇ ಇದೆ. ವಿಶ್ವಕಪ್​ 2019ನಲ್ಲೂ  ಸರ್ಫರಾಜ್ ಪಡೆ ಅದೇ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

1992ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟಿದ್ದರು. ಇದೀಗ ಎರಡನೇ ವಿಶ್ವಕಪ್ ಕಿರೀಟದ ಕನಸಿನಲ್ಲಿರುವ ಪಾಕ್​ ಪಡೆಯ ಆಟವನ್ನು ಗಮನಿಸಿದರೆ ಮತ್ತೊಮ್ಮೆ ಫೈನಲ್ ಪ್ರವೇಶಿಸುವುದನ್ನು ತಳ್ಳಿ ಹಾಕುವಂತಿಲ್ಲ. ಇದಕ್ಕೆ ಮುಖ್ಯ ಕಾರಣ 27 ವರ್ಷಗಳ ಹಿಂದಿನ ಅಂಕಿ ಅಂಶ.

ಹೌದು, 1992ರ ವಿಶ್ವಕಪ್​ನಲ್ಲಿ ಸೋತು ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ್ದ ಪಾಕ್​ನ ಆಟದ ನಾಗಾಲೋಟ ಈ ಬಾರಿಯ ವಿಶ್ವಕಪ್​ಗೂ ಸಾಮ್ಯತೆಯನ್ನು ಹೊಂದಿರುವುದು ಕುತೂಹಲಕಾರಿ. ಇಮ್ರಾನ್ ಖಾನ್ ಮುನ್ನಡೆಸಿದ ಅಂದಿನ ಪಾಕ್ ತಂಡ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಕೊನೆಯಲ್ಲಿ ಕಂಬ್ಯಾಕ್ ಮಾಡುವ ಮೂಲಕ ಚೊಚ್ಚಲ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು.

ರೌಂಡ್​ ರಾಬಿನ್ ಮಾದರಿಯಲ್ಲಿ ನಡೆದಿದ್ದ ಅಂದಿನ ಪಂದ್ಯದಲ್ಲಿ ಇಮ್ರಾನ್ ಖಾನ್ ಬಳಗ ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋತಿತ್ತು. ಆದರೆ ಎರಡನೇ ಪಂದ್ಯದ ಮೂಲಕ ಜಯದ ಲಯಕ್ಕೆ ಮರಳಿದ್ದರು. ಮೂರನೇ ಪಂದ್ಯದಲ್ಲಿ ಫಲಿತಾಂಶ ಹೊರಬರಲಿಲ್ಲ. ನಾಲ್ಕು ಮತ್ತು ಐದನೇ ಪಂದ್ಯದಲ್ಲಿ ಸೋತು ಸುಣ್ಣವಾಗಿತ್ತು. ಆದರೆ ಆರನೇ ಮತ್ತು ಏಳನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಗೆಲುವಿನ ಲಯಕ್ಕೆ ಮರಳಿದ್ದರು.

ಈ ಬಾರಿಯ ವಿಶ್ವಕಪ್​ನಲ್ಲೂ ಪಾಕ್ ತಂಡ ಸೋಲು-ಗೆಲುವಿನ ಆಟ ಇದೇ ಮಾದರಿಯಲ್ಲಿ ಮುಂದುವರೆದಿದೆ. ಪ್ರಥಮ ಪಂದ್ಯದಲ್ಲಿ ಸೋಲನುಭವಿಸಿದ ಸರ್ಫರಾಜ್ ಪಡೆ ದ್ವಿತೀಯ ಮ್ಯಾಚ್​ನ್ನು ಗೆದ್ದು ಬೀಗಿದ್ದರು. ಇದಾದ ಬಳಿಕ ಮೂರನೇ ಪಂದ್ಯವು ಮಳೆಗೆ ಆಹುತಿಯಾಯಿತು. ನಾಲ್ಕನೇ , ಐದನೇ ಪಂದ್ಯವನ್ನು ಹೀನಾಯವಾಗಿ ಸೋತರು. ಇದೀಗ 6ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು 7ನೇ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಪಾಕ್ ಬಗ್ಗು ಬಡಿದಿದೆ.

ಇಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದವರ ಹೆಸರು ಮತ್ತು ಬ್ಯಾಟಿಂಗ್ ಶೈಲಿ. ಹೌದು, 1992 ರಲ್ಲಿ ಪ್ರಬಲ ತಂಡವಾಗಿದ್ದ ಆಸ್ಟ್ರೇಲಿಯಾ ವಿರುದ್ಧ ಪಾಕ್ 48 ರನ್​ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಪಾಕ್​ ತಂಡ ಎಡಗೈ ದಾಂಡಿಗ ಅಮೀರ್ ಸೊಹೈಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಇದೀಗ 2019 ರ ವಿಶ್ವಕಪ್​ನ ಆರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಪಾಕ್ 49 ರನ್​ಗಳಿಂದ ವಿಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಮ್ಯಾನ್ ಆಫ್​ ದಿ ಮ್ಯಾಚ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿರುವುದು ಹ್ಯಾರಿಸ್ ಸೊಹೈಲ್.

ಈ ಇಬ್ಬರೂ ಪಂದ್ಯ ಶ್ರೇಷ್ಠ ಪುರಸ್ಕೃತರು ಎಡಗೈ ದಾಂಡಿಗರಾಗಿದ್ದರು ಎಂಬುದು ಮತ್ತೊಂದು ವಿಶೇಷ. ಅಷ್ಟೇ ಅಲ್ಲದೆ ಇಬ್ಬರ ಹೆಸರಿನಲ್ಲೂ ಸೊಹೈಲ್ ಇರುವುದು ಅಚ್ಚರಿ ಮೂಡಿಸಿದೆ.
Loading...



ಈ ಅಂಕಿ ಅಂಶಗಳನ್ನು ಮುಂದಿಟ್ಟು ಈ ಬಾರಿ ಕೂಡ ಪಾಕ್ ಪಡೆಗಳು ಫೈನಲ್ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ ಉಳಿದ ಮೂರು ಪಂದ್ಯಗಳಲ್ಲಿ ಗೆದ್ದರೆ ಸೆಮಿಫೈನಲ್‌ಗೆ ಪ್ರವೇಶಿಸಲಿದೆ.

ಇದನ್ನೂ ಓದಿ: ಮದುವೆಯಾದ ಮೂರನೇ ದಿನದಲ್ಲೇ ಗೊತ್ತಾಯ್ತು ಹೆಂಡತಿಯ ಅಸಲಿಯತ್ತು..!

First published:June 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...