ICC Cricket World Cup 2019: ವಿಶ್ವಕಪ್​​ನಲ್ಲಿ ಇಂದು ಎರಡು ಪಂದ್ಯ; ವಾರ್ನರ್-ಸ್ಮಿತ್ ಮೇಲೆ ಎಲ್ಲರ ಕಣ್ಣು!

CWC 2019: ಹೊಸ ಹುರುಪಿನೊಂದಿಗೆ ವಿಶ್ವಕಪ್​ನಲ್ಲಿ ಆಡಲು ಸಿದ್ದವಾಗಿರುವ ಲಂಕಾಗೆ ಅಭ್ಯಾಸ ಪಂದ್ಯದಲ್ಲಿ ಹಿನ್ನಡೆಯಾಗಿತ್ತು. ದಿಮುತ್ ಕರುಣರತ್ನೆ ನಾಯಕತ್ವದ ಮೇಲೆ ಸಾಕಷ್ಟು ನಂಬಿಕೆಯಿದ್ದು, ಇಂದಿನ ಪಂದ್ಯ ಕುತೂಹಲ ಕೆರಳಿಸಿದೆ.

Vinay Bhat | news18
Updated:June 1, 2019, 7:39 AM IST
ICC Cricket World Cup 2019: ವಿಶ್ವಕಪ್​​ನಲ್ಲಿ ಇಂದು ಎರಡು ಪಂದ್ಯ; ವಾರ್ನರ್-ಸ್ಮಿತ್ ಮೇಲೆ ಎಲ್ಲರ ಕಣ್ಣು!
ಡೇವಿಡ್ ವಾರ್ನರ್
  • News18
  • Last Updated: June 1, 2019, 7:39 AM IST
  • Share this:
ಬೆಂಗಳೂರು (ಜೂ. 01): ವಿಶ್ವಕಪ್​​ನಲ್ಲಿಂದು ಎರಡು ಪ್ರಮುಖ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡ ಮುಖಾಮುಖಿ ಆದರೆ, ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬಲಿಷ್ಠ ಆಸ್ಟ್ರೇಲಿಯಾಕ್ಕೆ ಸವಾಲೊಡ್ಡಲಿದೆ.

ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಕಿವೀಸ್ ಪಡೆ ಬ್ಯಾಟಿಂಗ್ ಜೊತೆಗೆ ಬೌಲಿಂಗ್​ನಲ್ಲೂ ಬಲಿಷ್ಠವಾಗಿದೆ. ಹೆಚ್ಚು ಅನುಭವಿಗಳಿಂದಲೇ ಕೂಡಿರುವ ಕೇನ್ ಟೀಂ ನಲ್ಲಿ ರಾಸ್ ಟೇಲರ್, ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬೌಲಿಂಗ್​ನಲ್ಲೂ ಟ್ರೆಂಟ್ ಬೌಲ್ಟ್​ ಹಾಗೂ ಟಿಮ್ ಸೌಧಿ ಸ್ವಿಂಗ್ ಮೂಲಕ ಎದುರಾಳಿಯ ನಿದ್ದೆ ಕದ್ದಿದ್ದಿದ್ದಾರೆ.

ಇತ್ತ ಹೊಸ ಹುರುಪಿನೊಂದಿಗೆ ವಿಶ್ವಕಪ್​ನಲ್ಲಿ ಆಡಲು ಸಿದ್ದವಾಗಿರುವ ಲಂಕಾಗೆ ಅಭ್ಯಾಸ ಪಂದ್ಯದಲ್ಲಿ ಹಿನ್ನಡೆಯಾಗಿತ್ತು. ದಿಮುತ್ ಕರುಣರತ್ನೆ ನಾಯಕತ್ವದ ಮೇಲೆ ಸಾಕಷ್ಟು ನಂಬಿಕೆಯಿದ್ದು, ಇಂದಿನ ಪಂದ್ಯ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ನಿಟ್ಟುಸಿರು ಬಿಟ್ಟ ಟೀಂ ಇಂಡಿಯಾ; ತಂಡದಲ್ಲಿ ಕಾಡುತ್ತಿದ್ದ ಸಮಸ್ಯೆಗೆ ಕನ್ನಡಿಗನಿಂದ ಪರಿಹಾರ

ಇನ್ನು ಇಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡ ಮುಖಾಮುಖಿ ಆಗುತ್ತಿದೆ. ಇಂಜುರಿಗೆ ತುತ್ತಾಗಿದ್ದ ಡೇವಿಡ್ ವಾರ್ನರ್ ಗುಣಮುಖರಾಗಿದ್ದು, ಇಂದಿನ ಪಂದ್ಯಕ್ಕೆ ಲಭ್ಯರಿದ್ದಾರೆಂದು ನಾಯಕ ಆ್ಯರೋನ್ ಫಿಂಚ್ ಹೇಳಿದ್ದಾರೆ. ನಿಷೇಧಕ್ಕೆ ಒಳಗಾದ ಬಳಿಕ ಮಹಾ ಟೂರ್ನಿಯಲ್ಲಿ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದ್ದು, ಇವರಿಬ್ಬರ ಆಟ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇತ್ತ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ್ದ ಅಫ್ಘಾನಿಸ್ತಾನ ತಂಡವನ್ನು ಕಡೆಗಣಿಸುವಂತಿಲ್ಲ.

ಪಂದ್ಯ: ನ್ಯೂಜಿಲೆಂಡ್ vs ಶ್ರೀಲಂಕಾ

ಸಮಯ: 3PMಮೈದಾನ: ಕಾರ್ಡಿಫ್​

ಪಂದ್ಯ: ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ

ಸಮಯ: 6PM

ಮೈದಾನ:ಬ್ರಿಸ್ಟಾಲ್

First published:June 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ