ICC World Cup 2019: ವಿಶ್ವಕಪ್​ ಗೆಲ್ಲುವಲ್ಲಿ ಧೋನಿ ಮಹತ್ತರ ಪಾತ್ರವಹಿಸಲಿದ್ದಾರೆ: ಕೋಚ್ ರವಿಶಾಸ್ತ್ರಿ

ಇತೀಚೆಗೆ ಮುಕ್ತಾಯಗೊಂಡ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನವನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ನೀಡಿದ್ದಾರೆ.

zahir | news18
Updated:May 23, 2019, 11:24 AM IST
ICC World Cup 2019: ವಿಶ್ವಕಪ್​ ಗೆಲ್ಲುವಲ್ಲಿ ಧೋನಿ ಮಹತ್ತರ ಪಾತ್ರವಹಿಸಲಿದ್ದಾರೆ: ಕೋಚ್ ರವಿಶಾಸ್ತ್ರಿ
@dnaindia.com
  • News18
  • Last Updated: May 23, 2019, 11:24 AM IST
  • Share this:
ಇಂಗ್ಲೆಂಡ್​​ನಲ್ಲಿ ನಡೆಯಲಿರುವ 2019ರ ವಿಶ್ವಕಪ್​ ಗೆಲುವಿನಲ್ಲಿ ಟೀಂ ಇಂಡಿಯಾದ ವಿಕೆಟ್​ ಕೀಪರ್ ಮಹತ್ತರ ಪಾತ್ರವಹಿಸಲಿದ್ದಾರೆ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಟೀಂ ಇಂಡಿಯಾದ ವಿಶ್ವಕಪ್​ ಪ್ರಯಾಣಕ್ಕೂ ಮುನ್ನ ನಡೆದ ಪ್ರತಿಕಾಕೋಷ್ಠಿಯಲ್ಲಿ ಮಾತನಾಡಿದ ರವಿಶಾಸ್ತ್ರಿ, ಏಕದಿನ ಮಾದರಿಯ ಕ್ರಿಕೆಟ್​ನಲ್ಲಿ ಧೋನಿಗಿಂತಲೂ ಉತ್ತಮ ಆಟಗಾರನಿಲ್ಲ ಎಂದು ತಿಳಿಸಿದರು.

ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿದ್ದರೆ, ಸಣ್ಣ ಪುಟ್ಟ ಸನ್ನಿವೇಶಗಳನ್ನೇ ಬಳಸಿ ಪಂದ್ಯದ ಗತಿಯನ್ನು ಬದಲಿಸುವ ಚಾಕಚಕ್ಯತೆ ಪ್ರದರ್ಶಿಸುತ್ತಾರೆ. ಹೀಗಾಗಿ ಈ ಬಾರಿ ವಲ್ಡ್​ಕಪ್​ನಲ್ಲಿ ಧೋನಿಯ ಪಾತ್ರ ಮಹತ್ತರವಾಗಿರಲಿದೆ ಎಂದು ರವಿ ಶಾಸ್ತ್ರಿ ತಿಳಿಸಿದರು.

ಇತೀಚೆಗೆ ಮುಕ್ತಾಯಗೊಂಡ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನವನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ನೀಡಿದ್ದಾರೆ. ಇದೇ ಫಾರ್ಮ್​ ಅನ್ನು ಧೋನಿ ವಿಶ್ವಕಪ್​ನಲ್ಲೂ ಮುಂದುವರೆಸಲಿದ್ದು, ಟೀಂ ಇಂಡಿಯಾ ಪಾಲಿನ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸುವ ವಿಶ್ವಾಸವಿದೆ ಎಂದು ಟೀಂ ಇಂಡಿಯಾ ಕೋಚ್ ಹೇಳಿದರು.

ಮಹೇಂದ್ರ ಸಿಂಗ್ ಧೋನಿಯ ಅನುಭವವು ಟೀಂ ಇಂಡಿಯಾ ಆಟಗಾರರ ನೆರವಿಗೆ ಬರಲಿದ್ದು, ಈ ಹಿಂದೆ 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ಧೋನಿ ಗೆಲ್ಲಿಸಿಕೊಟ್ಟಿದ್ದರು. ಇದೇ ತಂತ್ರಗಾರಿಕೆ ಹಾಗೂ ಸ್ಪೂರ್ತಿಯೊಂದಿಗೆ ಮತ್ತು ಶೇ.100 ರಷ್ಟು ಛಲದೊಂದಿಗೆ ಎಲ್ಲಾ ಆಟಗಾರು ಮೈದಾಕ್ಕಿಳಿಯಲಿದ್ದಾರೆ ಎಂದು ರವಿಶಾಸ್ತ್ರಿ ತಿಳಿಸಿದರು.

ಮೇ.30 ಇಂಗ್ಲೆಂಡ್ ಮತ್ತು ವೇಲ್ಸ್​ನಲ್ಲಿ ವಿಶ್ವಕಪ್ ಕ್ರಿಕೆಟ್ ಹಬ್ಬ ಆರಂಭವಾಗಲಿದ್ದು, ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

ICC World Cup 2019: ಈ ಬಾರಿಯ ವಿಶ್ವಕಪ್ ಅತ್ಯಂತ ದೊಡ್ಡ ಸವಾಲು: ವಿರಾಟ್ ಕೊಹ್ಲಿ

First published:May 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ