ICC World cup 2019: ರಾಯುಡು ಬದಲಿಗೆ ಮಯಾಂಕ್: ಕನ್ನಡಿಗನ ಆಯ್ಕೆ ಹಿಂದಿರುವುದು ಇವರೇ..!

ICC World cup 2019: ಇನ್ನು ಭಾರತ ಎ ತಂಡದ ಇಂಗ್ಲೆಂಡ್​ ಸರಣಿಯಲ್ಲಿ ನಾಲ್ಕು ಇನಿಂಗ್ಸ್​ನಲ್ಲಿ ಮಯಾಂಕ್ ಬ್ಯಾಟ್​ನಿಂದ ಹರಿದು ಬಂದಿರುವುದು 287 ರನ್​ಗಳು. ಹಾಗೆಯೇ ಲೈಸ್ಟರ್​ಶೈರ್ ಎದುರು 151 ರನ್​ಗಳ ಭರ್ಜರಿ ಇನಿಂಗ್ಸ್​ ಆಡಿದ್ದರು.

zahir | news18
Updated:July 3, 2019, 9:46 PM IST
ICC World cup 2019: ರಾಯುಡು ಬದಲಿಗೆ ಮಯಾಂಕ್: ಕನ್ನಡಿಗನ ಆಯ್ಕೆ ಹಿಂದಿರುವುದು ಇವರೇ..!
ಮಯಾಂಕ್ ಅಗರ್ವಾಲ್
  • News18
  • Last Updated: July 3, 2019, 9:46 PM IST
  • Share this:
ವಿಶ್ವಕಪ್​ ತಂಡದಲ್ಲಿ ಅವಕಾಶ ವಂಚಿತರಾಗಿರುವ ಬಲಗೈ ದಾಂಡಿಗ ಅಂಬಾಟಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡಗ್ ಬೈ ಹೇಳಿದ್ದಾರೆ. ಇದೇ ವೇಳೆ ಅನುಭವಿ ಆಗಿರುವ ರಾಯುಡು ಬದಲಾಗಿ ಯುವ ಆಟಗಾರ ಮಯಾಂಕ್ ಅಗರ್​ವಾಲ್​ಗೆ ಸ್ಥಾನ ನೀಡಿರುವುದು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

ಶಿಖರ್​ ಧವನ್​ ಗಾಯಾಳುವಾಗಿ ವಿಶ್ವಕಪ್​ನಿಂದ ಹೊರಬಿದ್ದಾಗ ರಾಯುಡು ಆಯ್ಕೆ ಆಗಲಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಈ ಹಿಂದೆ ಆಯ್ಕೆ ಸಮಿತಿ ಪ್ರಕಟಿಸಿದ್ದ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ರಾಯುಡು ಹೆಸರು ಮುಂಚೂಣಿಯಲ್ಲಿದಿರುವುದು. ಆದರೆ ಆಂಧ್ರ ಮೂಲದ ಆಟಗಾರನ ಬದಲು ರಿಷಭ್​​ ಪಂತ್​​ಗೆ ಅವಕಾಶ ನೀಡಲಾಯಿತು. ನಂತರ ವಿಜಯ್​ ಶಂಕರ್​ ಕೂಡ ಗಾಯಾಳುವಾಗಿ ವಿಶ್ವಕಪ್​ನಿಂದ ಹೊರಬಿದ್ದರು. ಈ ಬಾರಿ ತಂಡದಲ್ಲಿ ಅವಕಾಶ ಸಿಗಲಿದೆ ಎಂದೇ ರಾಯುಡು ಭಾವಿಸಿದ್ದರು.

ಆದರೆ ಅಂಬಾಟಿ ರಾಯುಡು ಬದಲಾಗಿ ಟೀಮ್ ಮ್ಯಾನೇಜ್​ಮೆಂಟ್ ಕರ್ನಾಟಕದ ಆಟಗಾರ ಮಯಾಂಕ್​ ಅಗರ್​ವಾಲ್​ಗೆ ಮಣೆ ಹಾಕಿದರು. ಇದರಿಂದ ಆಯ್ಕೆ ಸಮಿತಿಯ ನಡೆಯ ಬಗ್ಗೆ ಅನುಮಾನಗಳು ಮೂಡಿ ಬಂದಿದ್ದವು. ಆದರೆ ವರ್ಲ್ಡ್​ ಕಪ್ ಎಂಬ ಮಹಾ ಅಭಿಯಾನದಲ್ಲಿರುವ ಟೀಂ ಇಂಡಿಯಾಗೆ ಹೊಸ ಆಟಗಾರರ ಬೇಡಿಕೆಯಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಪ್ರಮುಖ ಪಾತ್ರವಹಿಸಿದ್ದರು ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

ಇಲ್ಲಿ ರಾಯುಡು ಅವರನ್ನು ಕೈ ಬಿಟ್ಟು ಮಯಾಂಕ್​ಗೆ ಅವಕಾಶ ನೀಡಿರುವುದು ಐದು ಮಂದಿ ಆಯ್ಕೆ ಸಮಿತಿಯ ಸದಸ್ಯರಲ್ಲ. ಬದಲಾಗಿ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಂಡದ ಆಯ್ಕೆ ಪಟ್ಟಿಯಲ್ಲಿ ಅಂಬಾಟಿ ಹೆಸರು ಮುಂಚೂಣಿಯಲ್ಲಿದ್ದರೂ, ವಿಜಯ್ ಶಂಕರ್ ಬದಲಾಗಿ ಮಯಾಂಕ್ ಅವರನ್ನು ಕಳುಹಿಸಿಕೊಡುವಂತೆ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಹೇಳಿತ್ತು. ಇಲ್ಲಿ ಯುವ ಆಟಗಾರನ ಬೇಡಿಕೆಯಿಟ್ಟಿರುವುದು ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಎಂಬುದು ಈ ಮೂಲಕ ಬಹಿರಂಗವಾಗಿದೆ.

ಮಯಾಂಕ್ ಅಗರ್​ವಾಲ್ ಆಯ್ಕೆ ಹಿಂದಿರುವುದು ಕೂಡ ಅವರ ಸಾಮರ್ಥ್ಯ ಎಂಬುದನ್ನು ಅಲ್ಲೆಗೆಳೆಯುವಂತಿಲ್ಲ. ಏಕೆಂದರೆ ಈ ವರ್ಷದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಟೆಸ್ಟ್​ ತಂಡವನ್ನು ಅಗರ್​ವಾಲ್ ಪ್ರತಿನಿಧಿಸಿದ್ದರು. ಅಲ್ಲದೆ ಆಸೀಸ್ ವೇಗಿಗಳ ವಿರುದ್ದ 2 ಅರ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು. ಅದರಲ್ಲೂ ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್ ಸ್ವಿಂಗ್ ಬೌಲಿಂಗ್​ ಅನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ್ದರು.

ಇನ್ನು ಭಾರತ ಎ ತಂಡದ ಇಂಗ್ಲೆಂಡ್​ ಸರಣಿಯಲ್ಲಿ ನಾಲ್ಕು ಇನಿಂಗ್ಸ್​ನಲ್ಲಿ ಮಯಾಂಕ್ ಬ್ಯಾಟ್​ನಿಂದ ಹರಿದು ಬಂದಿರುವುದು 287 ರನ್​ಗಳು. ಹಾಗೆಯೇ ಲೈಸ್ಟರ್​ಶೈರ್ ಎದುರು 151 ರನ್​ಗಳ ಭರ್ಜರಿ ಇನಿಂಗ್ಸ್​ ಆಡಿದ್ದರು. ಈ ಪಂದ್ಯವು ಜುಲೈ ಮತ್ತು ಆಗಸ್ಟ್​ ಅವಧಿಯಲ್ಲಿ ನಡೆದಿರುವುದು ಕೂಡ ಮಯಾಂಕ್​ಗೆ ಅದೃಷ್ಟ ಬಾಗಿಲು ತೆರೆಯುವಂತೆ ಮಾಡಿತು. ಏಕೆಂದರೆ ಇಂಗ್ಲೆಂಡ್​ನ ಹವಾಮಾನಕ್ಕೆ ಹೊಂದಿಕೊಳ್ಳಲು ಇದು ಕನ್ನಡಿಗನಿಗೆ ನೆರವಾಗಲಿದೆ ಎಂಬುದನ್ನು ಮ್ಯಾನೇಜ್​ಮೆಂಟ್ ಗಣನೆಗೆ ತೆಗೆದುಕೊಂಡಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಯಾಂಕ್ ಅಗರ್​ವಾಲ್​ರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಹಾಗೆಯೇ ಟೀಂ ಇಂಡಿಯಾ ಆರಂಭಿಕರಾಗಿ ಪ್ರಸ್ತುತ ಟೂರ್ನಿಯಲ್ಲಿ ರೋಹಿತ್ ಶರ್ಮಾ ಜೊತೆ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಆದರೆ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಿದ್ದು, 4ನೇ ಕ್ರಮಾಂಕದಲ್ಲಿ ಬಲಿಷ್ಠ ಆಟಗಾರನನ್ನು ಕಣಕ್ಕಿಳಿಸಲು ಕೊಹ್ಲಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ಕೆಎಲ್ ರಾಹುಲ್​ಗೆ 4ನೇ ಕ್ರಮಾಂಕದ ಜವಾಬ್ದಾರಿ ನೀಡಿ ಮಯಾಂಕ್​ರನ್ನು ಆರಂಭಿಕರಾಗಿ ಕಣಕ್ಕಿಳಿಸುವ ಯೋಜನೆಯನ್ನು ಟೀಂ ಮ್ಯಾನೇಜ್​ಮೆಂಟ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಇಂತಹದೊಂದು ಯೋಜನೆಯನ್ನು ರೂಪಿಸಿಯೇ ಕ್ಯಾಪ್ಟನ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಮಯಾಂಕ್​ ಅಗರ್​ವಾಲ್​ ಆಯ್ಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ICC World Cup: ವಿಶ್ವಕಪ್​ ಸೆಮಿ ಫೈನಲ್​ನಲ್ಲಿ ಟೀಂ ಇಂಡಿಯಾ ಎದುರಾಳಿ ಪಾಕಿಸ್ತಾನ..?
First published: July 3, 2019, 9:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading