Vinay BhatVinay Bhat
|
news18 Updated:June 2, 2020, 3:59 PM IST
ಮನೀಶ್ ಪಾಂಡೆ
- News18
- Last Updated:
June 2, 2020, 3:59 PM IST
ಬೆಂಗಳೂರು (ಮೇ. 14): ಒಂದೂವರೆ ತಿಂಗಳುಗಳ ಕಾಲ ಅಭಿಮಾನಿಗಳನ್ನು ರಂಚಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಆವೃತ್ತಿ ಕೊನೆಗೊಂಡಿದೆ. ಮುಂಬೈ ಇಂಡಿಯನ್ಸ್ ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿ ಇತಿಹಾಸ ಬರೆದಿದೆ.
ಐಪಿಎಲ್ ಕದನದ ಬೆನ್ನಲ್ಲೇ ಬಹು ನಿರೀಕ್ಷಿತ ಐಸಿಸಿ 2019 ಏಕದಿನ ವಿಶ್ವಕಪ್ ಮಹಾಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 30 ರಿಂದ ಆರಂಭವಾಗುವ ಈ ಕ್ರೀಡಾ ಹಬ್ಬ ಜುಲೈ 14 ರವರೆಗೆ ನಡೆಯಲಿದ್ದು, ಎಲ್ಲ ತಂಡಗಳು ಅದಾಗಲೆ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿವೆ.
ಈ ಮಧ್ಯೆ ಟೀಂ ಇಂಡಿಯಾ ಆಲ್ರೌಂಟರ್ ಆಟಗಾರ ಕೇದರ್ ಜಾಧವ್ ಇಂಜುರಿಗೆ ತುತ್ತಾಗಿದ್ದು, ಇನ್ನೂ ಗುಣಮುಖರಾಗಿಲ್ಲ. ಐಪಿಎಲ್ನಲ್ಲಿ ಸಿಎಸ್ಕೆ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಜಾಧವ್ ಭುಜದ ನೋವಿನಿಂದ ಬಳಲುತ್ತಿದ್ದು, ಐಪಿಎಲ್ನ ಅಂತಿಮ ಹಂತದಲ್ಲಿ ಹೊರಗುಳಿದಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಚೆಂಡು ಬಡಿದ ಪರಿಣಾಮ ಎಡಭುಜದ ನೋವಿಗೆ ಒಳಗಾಗಿ ಜಾಧವ್ ಮೈದಾನ ತೊರೆದಿದ್ದರು.
ಇದನ್ನೂ ಓದಿ: ವಿಶ್ವಕಪ್ ಮಹಾಸಮರಕ್ಕೆ ಕ್ಷಣಗಣನೆ: ಎಷ್ಟು ತಂಡಗಳು?, ಯಾವ ಆಟಗಾರರು?; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಸದ್ಯ ಜಾಧವ್ ಅವರಿಗೆ ಮೇ 23ರ ಒಳಗಾಗಿ ಫಿಟ್ ಆದರೆ ಮಾತ್ರ ವಿಶ್ವಕಪ್ನಲ್ಲಿ ಆಡಬಹುದಾಗಿದೆ. ಐಸಿಸಿ ನಿಮಯದ ಪ್ರಕಾರ ಯಾವುದೇ ತಂಡ ಮೇ 23ರ ಒಳಗಾಗಿ ತನ್ನ ತಂಡದಲ್ಲಿ ಬದಲಾವಣೆ ತರಬಹುದಾಗಿದೆ. ಹೀಗಾಗಿ ಮೇ 23ರ ಮೊದಲು ಜಾಧವ್ ಫಿಟ್ ಆದರೆ ವಿಶ್ವಕಪ್ನಲ್ಲಿ ಆಡಬಹುದು. ಎಲ್ಲದರು ಗುಣಮುಖರಾಗಿಲ್ಲ ಎಂದಾದರೆ ಈ ಮೂವರಲ್ಲಿ ಒಬ್ಬ ಆಟಗಾರನನ್ನು ಬಿಸಿಸಿಐ ಆಯ್ಕೆ ಮಾಡುವ ಅಂದಾಜಿದೆ.
ಅಂಬಟಿ ರಾಯುಡು: ವಿಶ್ವಕಪ್ ತಂಡದಲ್ಲಿ ಬಹುತೇಕ ಸ್ಥಾನ ಪಡೆಯಲಿದ್ದಾರೆ ಎಂದೇ ಹೇಳಲಾಗಿದ್ದ ರಾಯುಡುಗೆ ಆಯ್ಕೆ ಸಮಿತಿ ಶಾಕ್ ನೀಡಿತ್ತು. 4ನೇ ಸ್ಥಾನಕ್ಕೆ ಹೇಳಿ ಮಾಡಿಸಿದ ಆಟಗಾರ ರಾಯುಡುಗೆ ಸ್ಥಾನ ನೀಡಲಾಗುತ್ತೆ ಎಂದು ನಂಬಲಾಗಿತ್ತು. ಆದರೆ ಫಾರ್ಮ್ ಫೈಫಲ್ಯದಿಂದ ಬಳಲುತ್ತಿರುವ ರಾಯುಡುಗೆ ಬಿಸಿಸಿಐ ಅವಕಾಶ ನೀಡಲಿಲ್ಲ. ಅಲ್ಲದೆ ಐಪಿಎಲ್ನಲ್ಲೂ ಈ ಬಾರಿ ರಾಯುಡು ಬ್ಯಾಟ್ ಸದ್ದು ಮಾಡಲಿಲ್ಲ. ಆದರೆ, ರಾಯುಡು ಅವರ ಅಂತರಾಷ್ಟ್ರೀಯ ಅಂಕಿಅಂಶಗಳನ್ನು ಗಮನಿಸಿದಾಗ ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಜಾಧವ್ ಸ್ಥಾನಕ್ಕೆ ರಾಯುಡು ಆಯ್ಕೆಯಾದರು ಅಚ್ಚರಿಯಿಲ್ಲ.
ರಿಷಭ್ ಪಂತ್: ಬಿಸಿಸಿಐ ಆಯ್ಕೆ ಸಮಿತಿ ಪಟ್ಟಿಯಲ್ಲಿರುವ ಮತ್ತೊಂದು ಹೆಸರು ರಿಷಭ್ ಪಂತ್. ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಕಮ್ಮಿ ಎಂಬ ವಿಚಾರಕ್ಕೆ ಈ ಹಿಂದೆ ವಿಶ್ವಕಪ್ ತಂಡದಲ್ಲಿ ಪಂತ್ಗೆ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ ಪಂತ್ ಬದಲು ದಿನೇಶ್ ಕಾರ್ತಿಕ್ಗೆ ಅವಕಾಶ ಕಲ್ಪಿಸಲಾಯಿತು. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಮ್ಯಾಚ್ ವಿನ್ನಿಂಗ್ ಆಟ ಪ್ರದರ್ಶಿಸಿದ ಪಂತ್ ಅವರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಿ ಎಂಬ ಕೂಗು ಈಗಲು ಕ್ರಿಕೆಟ್ ವಲಯದಿಂದ ಕೇಳಿ ಬರುತ್ತಿದೆ. ಹೀಗಾಗಿ ಪಂತ್ ಕೂಡ ಆಯ್ಕೆ ಆಗುವ ಸಂಬವವಿದೆ.
ಇದನ್ನೂ ಓದಿ: VIDEO: ಇಲ್ಲಿದೆ ಕ್ರಿಕೆಟ್ ಇತಿಹಾಸದಲ್ಲಿ ನಡೆದ 10 ಭಾವನಾತ್ಮಕ ಕ್ಷಣಗಳು
ಮನೀಶ್ ಪಾಂಡೆ: ಕಳೆದ ಕೆಲ ತಿಂಗಳ ಹಿಂದೆ ಮನೀಶ್ ಪಾಂಡೆ ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಯಾರು ಊಹಿಸಿರಲಿಲ್ಲ. ಕಳೆದ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೀರಿದ್ದ ಪಾಂಡೆ ಈ ಬಾರಿ ಕೂಡ ಸನ್ರೈಸರ್ಸ್ ಹೈದರಾಬಾದ್ ಪರ ಆಕರ್ಷಕ ಹೊಡೆತಗಳ ಮೂಲಕ ಎಲ್ಲ ಗಮನ ಸೆಳೆದರು. ಸಿಕ್ಕಿದ್ದು ಕೊಂಚ ಅವಕಾಶವಾದರು ಎಲ್ಲ ಪಂದ್ಯಗಳಲ್ಲಿ ಅಮೋಘ ಆಟ ಪ್ರದರ್ಶಿಸಿ ಮೂರು ಅರ್ಧಶತಕ ಸಿಡಿಸಿ ಮಿಂಚಿದ್ದರು. ಅಗಾಧ ಪ್ರತಿಭೆ ಹೊಂದಿರುವ ಪಾಂಡೆಗೆ ಬಾರತ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಕ್ಕಿದ್ದೇ ಕಮ್ಮಿ. ಹೀಗಾಗಿ ವಿಶ್ವಕಪ್ನಲ್ಲಾದರು ಜಾಧವ್ ಬದಲು ಪಾಂಡೆಯನ್ನು ಆಯ್ಕೆ ಮಾಡುತ್ತಾರ ಎಂಬುದು ಕುತೂಹಲ ಕೆರಳಿಸಿದೆ.
First published:
May 14, 2019, 3:46 PM IST