ಸಚಿನ್ ಸಾರ್ವಕಾಲಿಕ ದಾಖಲೆ: ರೋಹಿತ್-ವಾರ್ನರ್ ವಿಫಲ: ಎಲ್ಲರ ಚಿತ್ತ ವಿಲಿಯಮ್ಸನ್-ರೂಟ್​ರತ್ತ..!

England vs New Zealand: ಆದರೆ ಸೆಮಿ ಫೈನಲ್​ನಲ್ಲಿ ರೋಹಿತ್ ಶರ್ಮಾ ಕೇವಲ 1 ರನ್​ಗಳಿಸಿ ಔಟಾಗಿದ್ದರು. ಹಾಗೆಯೇ 2ನೇ ಸೆಮಿಯಲ್ಲಿ ಇಂಗ್ಲೆಂಡ್ ವಿರುದ್ಧ ವಾರ್ನರ್ 9 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಶ್ರೇಷ್ಠ ದಾಖಲೆಯೊಂದನ್ನು ಕೈ ತಪ್ಪಿಸಿಕೊಂಡಿದ್ದರು.

zahir | news18
Updated:July 14, 2019, 4:54 PM IST
ಸಚಿನ್ ಸಾರ್ವಕಾಲಿಕ ದಾಖಲೆ: ರೋಹಿತ್-ವಾರ್ನರ್ ವಿಫಲ: ಎಲ್ಲರ ಚಿತ್ತ ವಿಲಿಯಮ್ಸನ್-ರೂಟ್​ರತ್ತ..!
England vs New Zealand
  • News18
  • Last Updated: July 14, 2019, 4:54 PM IST
  • Share this:
ವಿಶ್ವಕಪ್​ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಬರೆದ 673 ರನ್​ಗಳ ಸಾರ್ವಕಾಲಿಕ ದಾಖಲೆ ಹಾಗೆಯೇ ಹಚ್ಚಲಿಯದೆ ಉಳಿದಿದೆ. ಈ ಶ್ರೇಷ್ಠ ದಾಖಲೆ ಅಳಿಸಿ ಹಾಕುವ ಅವಕಾಶ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್​ಗೆ ಇತ್ತಾದರೂ, ಸೆಮಿ ಫೈನಲ್​ನಲ್ಲಿ ಉಭಯ ತಂಡಗಳು ಮುಗ್ಗರಿಸುವ ದಾಖಲೆಯನ್ನು ಕೈ ತಪ್ಪಿಸಿಕೊಂಡರು.

ಟೀಂ ಇಂಡಿಯಾದ ಸ್ಪೋಟಕ ಆರಂಭಿಕ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾ ತಂಡದ ಡೇಂಜರಸ್ ಓಪನರ್ ಡೇವಿಡ್ ವಾರ್ನರ್ ಈ ಬಾರಿಯ ವಿಶ್ವಕಪ್​ನಲ್ಲಿ ರನ್​ ಮಳೆ ಸುರಿಸಿದ್ದರು. ಹಿಟ್​ಮ್ಯಾನ್ ರೋಹಿತ್ ಐದು ಶತಕ ಹಾಗೂ ಒಂದು ಅರ್ಧಶತಕದೊಂದಿಗೆ 648 ರನ್​ ಕಲೆ ಹಾಕಿ ಟೂರ್ನಿಯಲ್ಲೇ ಅತ್ಯಧಿಕ ರನ್​ ಬಾರಿಸಿದ ಆಟಗಾರರನಾಗಿ ಅಗ್ರಸ್ಥಾನದಲ್ಲಿದ್ದಾರೆ. ಅದೇ ರೀತಿ ಡೇವಿಡ್​ ವಾರ್ನರ್​ ತಾನೇಕೆ ವಿಶ್ವದ ಅಗ್ರಮಾನ್ಯ ಎಡಗೈ ದಾಂಡಿಗ ಎಂಬುದನ್ನು ಈ ವಿಶ್ವಕಪ್​ ಮೂಲಕ ಮತ್ತೊಮ್ಮೆ ವಿಶ್ವದ ಮುಂದೆ ಸಾರಿದ್ದಾರೆ. ಮೂರು ಶತಕ ಹಾಗೂ 3 ಅರ್ಧಶತಕ ಸಿಡಿಸಿರುವ ವಾರ್ನರ್​ 647 ರನ್​ ಬಾರಿಸಿ ಟೂರ್ನಿಯಿಂದ ಹೊರ ನಡೆದಿದ್ದಾರೆ.


ಈ ಇಬ್ಬರು ಬಲಿಷ್ಠ ದಾಂಡಿಗರಿಗೆ 2003 ರಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟ್​ನಿಂದ ಸುರಿದ ರನ್​ ದಾಖಲೆಯನ್ನು ಅಳಿಸಿ ಹಾಕುವಂತಹ ಅವಕಾಶ ಲಭಿಸಿತ್ತು. ಇನ್ನು ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ (659 ರನ್​) ಅವರ ದಾಖಲೆಯನ್ನು ದಾಟಲು ರೋಹಿತ್ ಶರ್ಮಾ ಹಾಗೂ ವಾರ್ನರ್​ ಚಾನ್ಸ್ ಇತ್ತು.

ಆದರೆ ಸೆಮಿ ಫೈನಲ್​ನಲ್ಲಿ ರೋಹಿತ್ ಶರ್ಮಾ ಕೇವಲ 1 ರನ್​ಗಳಿಸಿ ಔಟಾಗಿದ್ದರು. ಹಾಗೆಯೇ 2ನೇ ಸೆಮಿಯಲ್ಲಿ ಇಂಗ್ಲೆಂಡ್ ವಿರುದ್ಧ ವಾರ್ನರ್ 9 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಶ್ರೇಷ್ಠ ದಾಖಲೆಯೊಂದನ್ನು ಕೈ ತಪ್ಪಿಸಿಕೊಂಡಿದ್ದರು.

ಇನ್ನು ಫೈನಲ್​ ಪಂದ್ಯ ಆಡುತ್ತಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಇಂಗ್ಲೆಂಡ್ ಆಟಗಾರ ಜೋ ರೂಟ್​ಗೆ ರೋಹಿತ್ ಶರ್ಮಾ ಹಾಗೂ ವಾರ್ನರ್ ದಾಖಲೆಯನ್ನು ಮುರಿಯುವ ಅವಕಾಶವಿದೆ. ಈ ಇಬ್ಬರು ಆಟಗಾರರು ಫೈನಲ್​ನಲ್ಲಿ ಶತಕ ಸಿಡಿಸಿದರೆ ಈ ಬಾರಿಯ ಟೂರ್ನಿಯಲ್ಲೇ ಅತ್ಯಧಿಕ ರನ್ ಬಾರಿಸಿ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.

ಸದ್ಯ ಕೇನ್ ವಿಲಿಯಮ್ಸನ್ 550+ ರನ್​ಗಳೊಂದಿಗೆ ರನ್​ ಸರದಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, 549 ರನ್​ಗಳೊಂದಿಗೆ ಜೋ ರೂಟ್ 5ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಸೆಂಚುರಿ ಮೇಲೆ ಅದ್ಭುತ ಆಟ ಮೂಡಿ ಬಂದರೆ ಸಚಿನ್ ತೆಂಡೂಲ್ಕರ್ ಅವರ 673 ರನ್​ಗಳ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವ ಅವಕಾಶ ಈ ಇಬ್ಬರು ದಾಂಡಿಗರಿಗಿದೆ.
First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ