Jasprit Bumrah: ಎದುರಾಳಿಯನ್ನು ಕಟ್ಟಿಹಾಕಲು ಟೀಂ ಇಂಡಿಯಾದ ಈ ಬೌಲರ್​​​ ಅಬ್ಬರಿಸಲೇಬೇಕು!

Jasprit Bumrah: ವಿಶ್ವದ ಟಾಪ್​​ 3 ಬೌಲರ್​ಗಳಲ್ಲಿ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಇವರ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ್ದೇ ಆದಲ್ಲಿ ಬುಮ್ರಾವನ್ನ ಕಟ್ಟಿಹಾಕುವ ಬ್ಯಾಟ್ಸ್​ಮನ್​ ಎದುರಾಳಿ ಪಾಳಯದಲ್ಲೇ ಇರೋದಿಲ್ಲ.

ಜಸ್​ಪ್ರೀತ್ ಬುಮ್ರಾ

ಜಸ್​ಪ್ರೀತ್ ಬುಮ್ರಾ

  • News18
  • Last Updated :
  • Share this:
ಬೆಂಗಳೂರು (ಮೇ. 25): ವಿಶ್ವಕಪ್ ಆರಂಭಕ್ಕೆ ಇನ್ನು ಜಾಸ್ತಿ ದಿನ ಬಾಕಿ ಉಳಿದಿಲ್ಲ. ಇಂದು ಭಾರತ ಕೂಡ ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ ಆಡುತ್ತಿದೆ. ಅಲ್ಲದೆ  ಜೂನ್​ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇಂಗ್ಲೆಂಡ್​ ಪಿಚ್​ಗಳಲ್ಲಿ ರನ್​ಗಳಂತೂ ಹರಿದು ಬರುವುದರಲ್ಲಿ ಅನುಮಾನವಿಲ್ಲ. ಹೀಗಿರುವಾಗ ಎದುರಾಳಿಯನ್ನು ಕಡಿವಾಣ ಹಾಕಬೇಕೆಂದರೆ ಟೀಂ ಇಂಡಿಯಾದ ಈ ಬೌಲರ್​​​ ಅಬ್ಬರಿಸಲೇಬೇಕು.

ಇಂಗ್ಲೆಂಡ್​ ಪಿಚ್​ನಲ್ಲಿ ಮಿಂಚುವ ಬೌಲರ್​​ ಮತ್ಯಾರು ಅಲ್ಲ. ಟೀಂ ಇಂಡಿಯಾ ವೇಗಿ ಜಸ್​ಪ್ರೀತ್​ ಬುಮ್ರಾ! ಇತ್ತೀಚೆಗಷ್ಟೇ ಯುವರಾಜ್​ ಸಿಂಗ್​ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೇಳಿದ್ದ ಮಾತು ಅಕ್ಷರಶಃ ನಿಜ. ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಬೇಕು ಅಂದರೆ ಈ ಬ್ರಹ್ಮಾಸ್ತ್ರ ಎದುರಾಳಿಯನ್ನ ಕಾಡಲೇಬೇಕು.

ಸದ್ಯ ಅಗ್ರ ಕ್ರಮಾಂಕದಲ್ಲಿ ರಾರಾಜಿಸುತ್ತಿರುವ ಬುಮ್ರಾ ಅವರ ಏಕದಿನ ದಾಖಲೆ ನೋಡುವುದಾದರೆ..

ಇದನ್ನೂ ಓದಿ: ICC World Cup 2019: ವಿಶ್ವಕಪ್​ನಲ್ಲಿ ಆರೆಂಜ್​ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಟೀಂ ಇಂಡಿಯಾ?ಪಂದ್ಯವಿಕೆಟ್ಬೆಸ್ಟ್ಎಕಾನಮಿ
49855/274.51

ಡೆತ್ ಓವರ್ ಸ್ಪೆಷಲಿಸ್ಟ್ ಆಗಿರುವ ಬುಮ್ರಾ ತಾನಾಡಿರುವ ಕೆಲವೇ ಪಂದ್ಯಗಳಲ್ಲಿ ಪ್ರಮುಖ ಬೌಲರ್​ ಆಗಿ ಮಿಂಚಿದ್ದಾರೆ. 49 ಏಕದಿನ ಪಂದ್ಯಗಳಲ್ಲಿ 85 ವಿಕೆಟ್ ಕಬಳಿಸಿರುವ ಬುಮ್ರಾ ಕೇವಲ 4.51 ಎಕಾನಮಿ ಹೊಂದಿದ್ದಾರೆ.

ಇನ್ನು ಬುಮ್ರಾ ಬೌಲಿಂಗ್ ಸ್ಪೆಷಾಲಿಟಿ ಅಂದರೆ ಸೂಪರ್ ಸ್ಪೀಡ್, ಪಕ್ಕಾ ಲೈನ್ ಅಂಡ್ ಲೆಂಥ್ ಹಾಗೂ ಅಷ್ಟೇ ನಿಖರವಾದ ಯಾರ್ಕರ್ ಎಸೆತಗಳು. ಯಾರ್ಕರ್​ ಹಾಕುವುದರಲ್ಲಿ ವೆರಿಯೇಷನ್ ಹೊಂದಿರುವ ಬುಮ್ರಾ ತನ್ನ ವಿಭಿನ್ನ ಬೌಲಿಂಗ್ ಆ್ಯಕ್ಷನ್​​ನಿಂದಲೇ ಪ್ರಬಲ ಬ್ಯಾಟ್ಸ್​​ಮನ್​ಗಳನ್ನೂ ದಿಕ್ಕೆಡಿಸಿ ಬಿಡುತ್ತಾರೆ.

ಇದನ್ನೂ ಓದಿIndia vs New Zealand: ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದ ಭಾರತ; 179ಕ್ಕೆ ಆಲೌಟ್

ಸದ್ಯ ವಿಶ್ವದ ಟಾಪ್​​ 3 ಬೌಲರ್​ಗಳಲ್ಲಿ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಇವರ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ್ದೇ ಆದಲ್ಲಿ ಬುಮ್ರಾರನ್ನ ಕಟ್ಟಿಹಾಕುವ ಬ್ಯಾಟ್ಸ್​ಮನ್​ ಎದುರಾಳಿ ಪಾಳಯದಲ್ಲೇ ಇರುವುದಿಲ್ಲ. ಹೀಗಾಗಿ ಬುಮ್ರಾ ಟೀಂ ಇಂಡಿಯಾದ ಬ್ರಹ್ಮಾಸ್ತ್ರ ಎಂದೇ ಹೇಳಲಾಗುತ್ತಿದೆ.

First published: