HOME » NEWS » Sports » CRICKET WORLD CUP 2019 JASON ROY HITS 9TH HUNDRED AND KNOCKS DOWN UMPIRE JOEL WILSON

Cricket World Cup 2019, ENG vs BAN: ಬಾಂಗ್ಲಾ ವಿರುದ್ಧ ರಾಯ್ ಭರ್ಜರಿ ಶತಕ: ಸೆಂಚುರಿ ಸಂಭ್ರಮಕ್ಕೆ ಅಡ್ಡಿಯಾದ ಅಂಪೈರ್..!

ಇನ್ನೊಂದೆಡೆ ತಮ್ಮ ಅನುಭವವನ್ನು ಧಾರೆಯೆರೆದು ಬ್ಯಾಟ್ ಬೀಸಿದ ರಾಯ್ 92 ಎಸೆತಗಳಲ್ಲಿ ಶತಕ ಪೂರೈಸಿದರು.

zahir | news18
Updated:June 8, 2019, 5:55 PM IST
Cricket World Cup 2019, ENG vs BAN: ಬಾಂಗ್ಲಾ ವಿರುದ್ಧ ರಾಯ್ ಭರ್ಜರಿ ಶತಕ: ಸೆಂಚುರಿ ಸಂಭ್ರಮಕ್ಕೆ ಅಡ್ಡಿಯಾದ ಅಂಪೈರ್..!
ಜೇಸನ್ ರಾಯ್
  • News18
  • Last Updated: June 8, 2019, 5:55 PM IST
  • Share this:
ಕಾರ್ಡಿಫ್‌ನ ಸೋಫಿಯಾ ಗಾರ್ಡನ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್​ನ 12ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಆರಂಭಿಕ ಆಟಗಾರ ಜೇಸನ್ ರಾಯ್ ಭರ್ಜರಿ ಶತಕ ಸಿಡಿಸಿದ್ದಾರೆ. ಟಾಸ್​ ಸೋತು ಬ್ಯಾಟಿಂಗ್ ಆಯ್ಕೆ ಅವಕಾಶ ಪಡೆದ ಆಂಗ್ಲರ ತಂಡಕ್ಕೆ ಜಾನಿ ಬೈರ್​ಸ್ಟೋ ಹಾಗೂ ರಾಯ್ ಉತ್ತಮ ಆರಂಭ ಒದಗಿಸಿದರು.

ಮೊದಲ ಹತ್ತು ಓವರ್​ಗಳಲ್ಲಿ ತಾಳ್ಮೆಯ ಆಟ ಪ್ರದರ್ಶಿಸಿದ ಆರಂಭಿಕರು ಯಾವುದೇ ವಿಕೆಟ್ ನಷ್ಟವಿಲ್ಲದೆ 67 ರನ್​ ಬಾರಿಸಿ ಭದ್ರ ಅಡಿಪಾಯ ಹಾಕಿದರು. 10 ಓವರ್​ಗಳ ಮುಕ್ತಾಯ ಬೆನ್ನಲ್ಲೇ ಅಬ್ಬರಿಸಲು ಆರಂಭಿಸಿದ ರಾಯ್ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇನ್ನು ಹೊಡಿ ಬಡಿ ಆಟವನ್ನು ನಿಯಂತ್ರಣದಲ್ಲಿಟ್ಟು ಇನಿಂಗ್ಸ್​ ಕಟ್ಟಿದ ಬೈರ್​ಸ್ಟೋ 48 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದರು.

ಅರ್ಧಶತಕದ ಬೆನ್ನಲ್ಲೇ ಮೊರ್ತಾಜಾ ಎಸೆತದಲ್ಲಿ ಮೆಹದಿ ಹಸನ್​ಗೆ ಕ್ಯಾಚ್​ ನೀಡಿದ ಬೈರ್​ಸ್ಟೋ 51 ರನ್​​ಗಳಿಗೆ ತಮ್ಮ ಇನಿಂಗ್ಸ್​ ಸೀಮಿತಗೊಳಿಸಿದರು. ಅಷ್ಟರಲ್ಲಾಗಲೇ ಮೊದಲ ವಿಕೆಟ್​ ರಾಯ್​-ಬೈರ್​ಸ್ಟೋ ಜೋಡಿ 128 ರನ್​ಗಳ ಜೊತೆಯಾಟ ನೀಡಿದ್ದರು.

ಇನ್ನೊಂದೆಡೆ ತಮ್ಮ ಅನುಭವವನ್ನು ಧಾರೆಯೆರೆದು ಬ್ಯಾಟ್ ಬೀಸಿದ ರಾಯ್ 92 ಎಸೆತಗಳಲ್ಲಿ ಶತಕ ಪೂರೈಸಿದರು. ಆಕ್ರಮಣಕಾರಿ ಆಟದೊಂದಿಗೆ ಬಾಂಗ್ಲಾ ಬೌಲರ್​ಗಳನ್ನು ಕಾಡಿದ್ದ ರಾಯ್ ಏಕದಿನ ಕ್ರಿಕೆಟ್​ನಲ್ಲಿ 9ನೇ ಶತಕದ ಸಾಧನೆ ಮಾಡಿದರು.

ಶತಕ ಸಂಭ್ರಮಕ್ಕೆ ಅಡ್ಡಿಯಾದ ಅಂಪೈರ್:
ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಬೇಕಿದ್ದ ಜೇಸನ್ ರಾಯ್​ಗೆ ಅಂಪೈರ್ ಅಡ್ಡಿಯಾಗಿದ್ದರು. ಎಡಗೈ ವೇಗಿ ಮುಸ್ತಫಿಜುರ್ ಎಸೆತದಲ್ಲಿ ಚೆಂಡನ್ನು ಲೆಗ್​ ಸೈಡ್​ಗಟ್ಟಿದ್ದ ರಾಯ್ ರನ್​ ಕದಿಯುವ ಆತುರದಲ್ಲಿದ್ದರು. ಅತ್ತ ಫೀಲ್ಡರನ್ನು ವಂಚಿಸಿ ಚೆಂಡು ಬೌಂಡರಿಯತ್ತ ಸಾಗುತ್ತಿತ್ತು. ಇತ್ತ ಚೆಂಡನ್ನು ನೋಡುವಲ್ಲಿ ನಿರತರಾಗಿದ್ದ ಅಂಪೈರ್ ಜೋಯ್ ವಿಲ್ಸನ್ ನಿಧಾನಕ್ಕೆ ರಾಯ್ ಓಡಿ ಬರುತ್ತಿದ್ದ ಕಡೆಗೆ ಸಾಗಿದ್ದರು.

ತಮ್ಮ ಸೆಂಚುರಿಯನ್ನು ಪೂರೈಸುವ ಆತುರದಲ್ಲಿದ್ದ ಜೇಸನ್ ರಾಯ್ ಅಂಪೈರ್​ರನ್ನು ಗಮನಿಸಲಿಲ್ಲ. ಇನ್ನು ಜೋಯ್ ವಿಲ್ಸನ್ ಸಹ ಬ್ಯಾಟ್ಸ್​ಮನ್​ ಬರುತ್ತಿರುವುದು ನೋಡಿರಲಿಲ್ಲ. ನೇರವಾಗಿ ಬಂದು ಅಂಪೈರ್​ರನ್ನು ಗುದ್ದಿ ಕೆಳಗೆ ಬೀಸಿದರು. ಅಂಪೈರ್ ಬಿದ್ದ ರಭಸಕ್ಕೆ ಎಲ್ಲರೂ ನಿಬ್ಬೆರಗಾದರು. ಇದರಿಂದ ಆಟಗಾರರು ಅಂಪೈರತ್ತ ಧಾವಿಸಿದ್ದರು. ಇನ್ನು ಜೇಸನ್ ರಾಯ್ ಖುದ್ದು ಅಂಪೈರನ್ನು ಮೇಲೆಕ್ಕೆತ್ತಿದರು. ಇವೆಲ್ಲದರ ನಡುವೆ ಜೇಸನ್ ರಾಯ್ ತಮ್ಮ ಶತಕದ ಸಂಭ್ರಮವನ್ನೇ ಮರೆತಿದ್ದರು.ಸಂಕ್ಷಿಪ್ತ ಸ್ಕೋರ್(ಇತ್ತೀಚಿನ ಮಾಹಿತಿ)

ಇಂಗ್ಲೆಂಡ್- 235/3 (35 ಓವರ್)
ಮೋರ್ಗನ್- 1*
ಜೋಸ್ ಬಟ್ಲರ್- 5*

ಜೇಸನ್ ರಾಯ್- 153(121)

ಮುಶರಫೆ ಮೊರ್ತಜಾ- 42/1

ಇದನ್ನೂ ಓದಿ: ಸ್ಯಾಂಡಲ್​ವುಡ್ ನಟಿಯೊಂದಿಗೆ ಟೀಂ ಇಂಡಿಯಾ ವೇಗಿ ಬುಮ್ರಾ ಲವ್ವಿ-ಡವ್ವಿ​?

First published: June 8, 2019, 5:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories