VIDEO: ಹೇಗಿತ್ತು ಭಾರತ-ವೆಸ್ಟ್​​ ಇಂಡೀಸ್​ ನಡುವಣ ಹಣಾಹಣಿ?; ಇಲ್ಲಿದೆ ಹೈಲೈಟ್ಸ್​​

ನಾಯಕ ವಿರಾಟ್ ಕೊಹ್ಲಿ 72 ರನ್ ಹಾಗೂ ಧೋನಿಯ ಸಮಯೋಚಿತ ಅರ್ಧಶತಕದ ನೆರವಿನಿಂದ ಭಾರತ ವಿಂಡೀಸ್​ಗೆ ಗೆಲ್ಲಲು 269 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಕೆರಿಬಿಯನ್ ಬ್ಯಾಟ್ಸ್​ಮನ್​ಗಳು ಭಾರತೀಯ ಬೌಲಿಂಗ್ ಬಿರುಗಾಳಿಗೆ ತರಗೆಲೆಯಂತೆ ಉರುಳಿದರು.

Rajesh Duggumane | news18
Updated:June 28, 2019, 7:48 AM IST
VIDEO: ಹೇಗಿತ್ತು ಭಾರತ-ವೆಸ್ಟ್​​ ಇಂಡೀಸ್​ ನಡುವಣ ಹಣಾಹಣಿ?; ಇಲ್ಲಿದೆ ಹೈಲೈಟ್ಸ್​​
ಟೀಂ ಇಂಡಿಯಾ ಆಟಗಾರರು
  • News18
  • Last Updated: June 28, 2019, 7:48 AM IST
  • Share this:
ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ 126 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕೊಹ್ಲಿ ಪಡೆ ಸೆಮಿಫೈನಲ್​ ಏರುವುದು ಬಹುತೇಕ ಖಚಿತವಾಗಿದೆ. ಟೀಂ ಇಂಡಿಯಾ ಬೌಲಿಂಗ್​ ದಾಳಿಗೆ ತತ್ತರಿಸಿದ ಕೆರಿಬಿಯನ್ ಪಡೆ ಕೇವಲ 143 ರನ್​ಗೆ ಆಲೌಟ್ ಆಗಿತ್ತು. ಹೀನಾಯ ಸೋಲು ಕಾಣುವ ಜೊತೆಗೆ ವಿಶ್ವಕಪ್​ನಿಂದ ವೆಸ್ಟ್​ ಇಂಡೀಸ್​ ಹೊರಬಿದ್ದಿದೆ.

ನಾಯಕ ವಿರಾಟ್ ಕೊಹ್ಲಿ 72 ರನ್ ಹಾಗೂ ಧೋನಿಯ ಸಮಯೋಚಿತ ಅರ್ಧಶತಕದ ನೆರವಿನಿಂದ ಭಾರತ ವಿಂಡೀಸ್​ಗೆ ಗೆಲ್ಲಲು 269 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಕೆರಿಬಿಯನ್ ಬ್ಯಾಟ್ಸ್​ಮನ್​ಗಳು ಭಾರತೀಯ ಬೌಲಿಂಗ್ ಬಿರುಗಾಳಿಗೆ ತರಗೆಲೆಯಂತೆ ಉರುಳಿದರು. ಆರಂಭದಲ್ಲೇ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಕ್ರಿಸ್ ಗೇಲ್ ಕೇವಲ 6 ರನ್​ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ಶಾಯ್ ಹೋಪ್ ಕೂಡ ಕೇವಲ 10 ರನ್​ಗೆ ಔಟ್ ಆದರೆ, ಚೊಚ್ಚಲ ವಿಶ್ವಕಪ್ ಆಡಿದ ಸುನೀಲ್ ಅಂಬ್ರಿಸ್ ಆಟ 31 ರನ್​ಗೆ ಅಂತ್ಯವಾಯಿತು. ನಂತರ ತರಗೆಲೆಗಳಂತೆ ವಿಕೆಟ್​ ಪತನವಾಯಿತು. ಅಂತಿಮವಾಗಿ ವೆಸ್ಟ್​ ಇಂಡೀಸ್ 34.2 ಓವರ್​​ನಲ್ಲಿ 143 ರನ್​ಗೆ ಸರ್ವಪತನ ಕಂಡಿತು. ಈ ಮ್ಯಾಚ್​ನ ಹೈಲೈಟ್ಸ್​ ಇಲ್ಲಿದೆ.

First published:June 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ