ವಿಶ್ವಕಪ್ ಸೆಮೀಸ್​ನಲ್ಲಿ ಧೋನಿಗೆ 7ನೇ ಕ್ರಮಾಂಕ; ಇದು ನನ್ನೊಬ್ಬನ ನಿರ್ಧಾರವಲ್ಲ ಎಂದ ಬಂಗಾರ್

ದಿನೇಶ್​ ಕಾರ್ತಿಕ್​ ಹಾಗೂ ಹಾರ್ದಿಕ್​ ಪಾಂಡ್ಯ ಔಟ್ ಆದ ಬಳಿಕ ಮೈದಾನಕ್ಕಿಳಿದಿದ್ದ ಧೋನಿ, ಕೊನೆ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿದ್ದರು. ಬಳಿಕ ಧೋನಿಗೂ ಮುನ್ನ ಕಾರ್ತಿಕ್ ಹಾಗೂ ಪಾಂಡ್ಯ ಕಣಕ್ಕಿಳಿದ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು.

Vinay Bhat | news18
Updated:August 2, 2019, 5:59 PM IST
ವಿಶ್ವಕಪ್ ಸೆಮೀಸ್​ನಲ್ಲಿ ಧೋನಿಗೆ 7ನೇ ಕ್ರಮಾಂಕ; ಇದು ನನ್ನೊಬ್ಬನ ನಿರ್ಧಾರವಲ್ಲ ಎಂದ ಬಂಗಾರ್
ಎಂ ಎಸ್ ಧೋನಿ
  • News18
  • Last Updated: August 2, 2019, 5:59 PM IST
  • Share this:
ಬೆಂಗಳೂರು (ಆ. 02): ಇತ್ತೀಚೆಗಷ್ಟೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ನಲ್ಲಿ ಭಾರತ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಪರಿಣಾಮ ಮೂರನೇ ಬಾರಿ ವಿಶ್ವಕಪ್​​ ಗೆಲ್ಲುವ ಕನಸು ಕನಸಾಗಿಯೇ ಉಳಿದುಕೊಂಡಿತು.

ಮಳೆ ಬಾಧಿತ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತಕ್ಕೆ ಗೆಲ್ಲಲು 240 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿ ಕೊಹ್ಲಿ ಟೀಂ ಕೇವಲ 24 ರನ್ ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಏಳನೇ ವಿಕೆಟ್​ಗೆ ಜೊತೆಯಾದ ಎಂ ಎಸ್ ಧೋನಿ(50) ಹಾಗೂ ಜಡೇಜಾ(77) ಭಾರತದ ಗೆಲುವಿಗೆ ಎಲ್ಲಿಲ್ಲದ ಹೋರಾಟ ನಡೆಸಿದರು. ಆದರೆ, ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದ ಇವರು, ಪರಿಣಾಮ 18 ರನ್​ಗಳಿಂದ ಸೋಲುಣ್ಣಬೇಕಾಯಿತು.

ಈ ಪಂದ್ಯದಲ್ಲಿ ದಿನೇಶ್​ ಕಾರ್ತಿಕ್​ ಹಾಗೂ ಹಾರ್ದಿಕ್​ ಪಾಂಡ್ಯ ಔಟ್ ಆದ ಬಳಿಕ ಮೈದಾನಕ್ಕಿಳಿದಿದ್ದ ಧೋನಿ, ಕೊನೆ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿದ್ದರು. ಬಳಿಕ ಧೋನಿಗೂ ಮುನ್ನ ಕಾರ್ತಿಕ್ ಹಾಗೂ ಪಾಂಡ್ಯ ಕಣಕ್ಕಿಳಿದ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಸದ್ಯ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳುಹಿಸಿದ ನಿರ್ಧಾರ ನನ್ನದು ಮಾತ್ರವಲ್ಲ ಎಂದು ಹೇಳಿದ್ದಾರೆ.

ವಿಂಡೀಸ್ ವಿರುದ್ಧ ಮೊದಲ ಟಿ-20; 4ನೇ ಸ್ಥಾನಕ್ಕಾಗಿ ಕನ್ನಡಿಗರ ನಡುವೆಯೇ ಫೈಟ್?

Dhoni Batting at No 7 Against New Zealand Was a Team Decision: Bangar
ಸಂಜಯ್ ಬಂಗಾರ್, ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್


'ಸೆಮಿ ಫೈನಲ್ ಪಂದ್ಯದಲ್ಲಿ ನಾವು ಬಹುಬೇಗನೆ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿದ್ದೆವು. ಹೀಗಾಗಿ ಮೈದಾನದಲ್ಲಿ ನಿಂತು ಆಡುವ ಆಟಗಾರರ ಅವಶ್ಯಕತೆಯಿತ್ತು. ಅದಕ್ಕಾಗಿ ಮೊದಲು ದಿನೇಶ್ ಕಾರ್ತಿಕ್​​ರನ್ನು 5ನೇ ಕ್ರಮಾಂಕದಲ್ಲಿ ಕಳುಹಿಸಿ ಧೋನಿಯನ್ನು 7ನೇ ಸ್ಥಾನದಲ್ಲಿ ಇಳಿಸಲು ತೀರ್ಮಾನ ಮಾಡಿದ್ದರು'.

'ಇದು ನಾಯಕ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿಗೂ ತಿಳಿದಿರುವ ವಿಚಾರ. ಆದರೆ, ಜನರು ನಮ್ಮನ್ನು ಈ ರೀತಿಯಾಗಿ ನೋಡುತ್ತಿರುವುದು ಬೇಸರ ತಂದಿದೆ. ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನನಗಿಲ್ಲ' ಎಂದು ಬಂಗಾರ್ ಹೇಳಿದ್ದಾರೆ.
First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading