ಮೊದಲ ಓವರ್​ನಲ್ಲೇ ಸ್ಪಿನ್​​; ವಿಶ್ವಕಪ್ ಇತಿಹಾಸದಲ್ಲೇ ಯಾರು ಮಾಡಿಲ್ಲ ಈ ದಾಖಲೆ!

ICC Cricket World Cup 2019, Imran Tahir: 40 ವರ್ಷವಾದರೂ 20 ವರ್ಷದ ಯುವಕರನ್ನ ನಾಚಿಸುವ ತಾಹಿರ್​ ಈ ಬಾರಿ ವಿಶ್ವಕಪ್​​ನಲ್ಲಿ ಆಡುತ್ತಿರುವ ಅತ್ಯಂತ ಹಿರಿಯ ಕ್ರಿಕೆಟಿಗ. ಇದೀಗ ವಿಶ್ವಕಪ್​​​ ಉದ್ಘಾಟನಾ ಪಂದ್ಯದಲ್ಲೇ ದಾಖಲೆ ಬರೆದಿರುವುದು ಮತ್ತೊಂದು ವಿಶೇಷ.

Vinay Bhat | news18
Updated:May 31, 2019, 3:13 PM IST
ಮೊದಲ ಓವರ್​ನಲ್ಲೇ ಸ್ಪಿನ್​​; ವಿಶ್ವಕಪ್ ಇತಿಹಾಸದಲ್ಲೇ ಯಾರು ಮಾಡಿಲ್ಲ ಈ ದಾಖಲೆ!
ಇಮ್ರಾನ್ ತಾಹಿರ್ (ದ. ಆಫ್ರಿಕಾ ತಂಡದ ಆಟಗಾರ)
  • News18
  • Last Updated: May 31, 2019, 3:13 PM IST
  • Share this:
ಬೆಂಗಳೂರು (ಮೇ. 31): ಈ ಬಾರಿಯ ಐಪಿಎಲ್​ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್​ ತಲುಪಿತ್ತು ಎಂದರೆ ಅದಕ್ಕೆ ಕಾರಣ ಇಮ್ರಾನ್ ತಾಹಿರ್ ಕೂಡ ಒಬ್ಬರು. ಎದುರಾಳಿ ಬ್ಯಾಟ್ಸ್​​​ಮನ್​ಗಳ ದಿಕ್ಕು ತಪ್ಪಿಸುತ್ತಿದ್ದ ತಾಹಿರ್ 17 ಪಂದ್ಯಗಳಲ್ಲಿ 26 ವಿಕೆಟ್​ಗಳನ್ನ ಬೇಟೆಯಾಡಿ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಿತ್ತ ಸಾಧನೆ ಮಾಡುದರಯ.

ತಾಹಿರ್​​ರ ಈ ಪ್ರದರ್ಶನ ಅವರ ವಯಸ್ಸನ್ನೇ ಮರೆಮಾಚಿತ್ತು. ತಾಹಿರ್​​ರ ಈ ಎನರ್ಜಿಯೇ ವಿಶ್ವಕಪ್​​ನಲ್ಲಿ ದಕ್ಷಿಣ ಆಫ್ರಿಕಾವನ್ನ ಪ್ರತಿನಿಧಿಸುವಂತಾಯಿತು. 40 ವರ್ಷವಾದರೂ 20 ವರ್ಷದ ಯುವಕರನ್ನ ನಾಚಿಸುವ ತಾಹಿರ್​ ಈ ಬಾರಿ ವಿಶ್ವಕಪ್​​ನಲ್ಲಿ ಆಡುತ್ತಿರುವ ಅತ್ಯಂತ ಹಿರಿಯ ಕ್ರಿಕೆಟಿಗ. ಇದೀಗ ವಿಶ್ವಕಪ್​​​ ಉದ್ಘಾಟನಾ ಪಂದ್ಯದಲ್ಲೇ ದಾಖಲೆ ಬರೆದಿರುವುದು ಮತ್ತೊಂದು ವಿಶೇಷ.

ಇದನ್ನೂ ಓದಿ: Cricket World Cup 2019, WI vs PAK: ಟಾಸ್ ಗೆದ್ದ ವೆಸ್ಟ್​ ಇಂಡೀಸ್ ಬೌಲಿಂಗ್ ಆಯ್ಕೆ

1975ರಂದು ವಿಶ್ವಕಪ್ ಆರಂಭವಾದಾಗಿನಿಂದಲೂ ಇಲ್ಲಿವರೆಗೆ 11 ವಿಶ್ವಕಪ್ ಟೂರ್ನಿಗಳು ನಡೆದಿವೆ. ಇದೀಗ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವುದು 12ನೇ ವಿಶ್ವಕಪ್​​​​​. ಇಷ್ಟು ದಶಕಗಳ ದೊಡ್ಡ ಇತಿಹಾಸವಿದ್ದರು ಹೊಸ​ ದಾಖಲೆಯೊಂದನ್ನ ಇಮ್ರಾನ್ ಸೃಷ್ಠಿಸಿದ್ದಾರೆ. ಇದಕ್ಕೆ ಕಾರಣ ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್.​

ಇಂಗ್ಲೆಂಡ್​ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಪಂದ್ಯದ ಮೊದಲ ಓವರ್​​​​​ನಲ್ಲೇ ಇಮ್ರಾನ್ ತಾಹಿರ್ ದಾಳಿಗಿಳಿದರು. ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್​​ ಎಂಬ ದಾಖಲೆ ಬರೆದ ಇಮ್ರಾನ್​​, ನಾಯಕನ ಆಯ್ಕೆಯನ್ನ ಸಮರ್ಥವಾಗಿ ನಿಭಾಯಿಸಿದರು.

ಮೊದಲ ಓವರ್​​ನ 2ನೇ ಎಸೆತದಲ್ಲೇ ಇಂಗ್ಲೆಂಡ್ ಓಪನರ್​  ಜಾನಿ ಬೈರ್​​ಸ್ಟೋ ವಿಕೆಟ್ ಕಬಳಿಸಿದರು. ಹೀಗೆ ಮೊದಲ ಪಂದ್ಯದಲ್ಲೇ ಒಟ್ಟಾರೆ 2 ವಿಕೆಟ್ ಕಬಳಿಸಿದ ಇಮ್ರಾನ್ ತಾಹಿರ್ ಅಪರೂಪದ ದಾಖಲೆಯ ಜೊತೆಗೆ ದಕ್ಷಿಣ ಆಫ್ರಿಕಾದ ಟ್ರಂಪ್​ಕಾರ್ಡ್ ಆಗಿ ಮಿಂಚಿದ್ದಾರೆ.

First published:May 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ