ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಬೆತ್ತಲೆಯಾಗಿ ಓಡಲು ಮಹಿಳೆಯೊಬ್ಬರು ಯತ್ನಿಸಿದ ಘಟನೆ ನಡೆದಿದೆ. ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಲು ಮಹಿಳೆಯೊಬ್ಬರು ಬೆತ್ತಲೆಯಾಗಿ ಮೈದಾನಕ್ಕಿಳಿಯಲು ಪ್ರಯತ್ನಿಸಿದರು. ಈ ವೇಳೆ ಭದ್ರತಾ ಸಿಬ್ಬಂದಿಗಳು ಆಕೆಯನ್ನು ಬಂಧಿಸಿ ಮುಜುಗರವನ್ನು ತಪ್ಪಿಸಿದರು.
ಈ ಮಹಿಳೆಯನ್ನು ಎಲೆನಾ ವುಲಿಟ್ಸ್ಕಿ ಎಂದು ಗುರುತಿಸಲಾಗಿದ್ದು, ಈ ಹಿಂದೆ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯದ ವೇಳೆ ಬೆತ್ತಲೆಯಾಗಿ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು. ಇನ್ನು ಎಲೆನಾ ಅವರ ಮಗ ವಯಸ್ಕರ ವೆಬ್ಸೈಟ್ವೊಂದನ್ನು ನಡೆಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
ಈ ಹಿಂದೆ ಫುಟ್ಬಾಲ್ ಪಂದ್ಯದ ವೇಳೆಯ ನಗ್ನ ವಿಡಿಯೋ ಭಾರೀ ವೈರಲ್ ಆಗಿತ್ತು. ಹಾಗಾಗಿ ಅದೇ ರೀತಿಯ ಹುಚ್ಚುತನಕ್ಕಾಗಿ ಮತ್ತೊಮ್ಮೆ ಕ್ರಿಕೆಟ್ ಮೈದಾನದಲ್ಲಿ ಬೆತ್ತಲೆಯಾಗಿ ಓಡಲು ಎಲೆನಾ ಮುಂದಾಗಿದ್ದರು ಎಂದು ಹೇಳಲಾಗಿದೆ.
Cricket World Cup final streaker is X-rated website owner's MUM! Elena Vulitsky, 47, grabbed by quick-thinking steward as she tries to emulate her son's girlfriend's success at the Champions League final pic.twitter.com/hUcigAFHPP
— Lilian Chan (@bestgug) July 14, 2019
Naked Woman Runs into Pitch during #UCLFinal Match 🤦♂️ 😂 #Date360 pic.twitter.com/YG5ogN2Skw
— Samuel 360 (@360Updating) June 1, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ