ಭಾರತ ಸೋಲುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ ರೋಹಿತ್ ಶರ್ಮಾ: ಮನಕಲಕುವ ವಿಡಿಯೋ ವೈರಲ್

Rohit Sharma: 2003ರ ವಿಶ್ವಕಪ್​ ವೇಳೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ ನಿರ್ಮಿಸಿರುವ ರನ್​ ದಾಖಲೆಯನ್ನು ಅಳಿಸಿ ಹಾಕಲು ರೋಹಿತ್​ಗೆ ಬೇಕಾಗಿದದ್ದು ಕೇವಲ 27 ರನ್​ಗಳು ಮಾತ್ರ. ಅದಾಗಲೇ ಹಿಟ್​ಮ್ಯಾನ್  ಐದು ಶತಕ ಹಾಗೂ ಒಂದು ಅರ್ಧಶತಕದೊಂದಿಗೆ 647 ರನ್​ ಕಲೆ ಹಾಕಿ ಟೂರ್ನಿಯಲ್ಲೇ ಅತ್ಯಧಿಕ ರನ್​ ಬಾರಿಸಿದ ಆಟಗಾರರನಾಗಿ ಅಗ್ರಸ್ಥಾನದಲ್ಲಿದ್ದರು.

zahir | news18
Updated:July 11, 2019, 9:42 PM IST
ಭಾರತ ಸೋಲುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ ರೋಹಿತ್ ಶರ್ಮಾ: ಮನಕಲಕುವ ವಿಡಿಯೋ ವೈರಲ್
Rohit sharma
 • News18
 • Last Updated: July 11, 2019, 9:42 PM IST
 • Share this:
5 ಶತಕ, ಒಂದು ಅರ್ಧಶತಕ...ವಿಶ್ವಕಪ್ 2019 ಟೂರ್ನಿಯಲ್ಲೇ ಅತ್ಯಧಿಕ ರನ್​ ಬಾರಿಸಿದ ಸರದಾರ...ಹೀಗೆ ಹಲವು ದಾಖಲೆಗಳನ್ನು ಒಂದು ವಿಶ್ವಕಪ್​ನಲ್ಲಿ ಸೃಷ್ಟಿಸಿದ್ದ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅಳುತಿದ್ದರು.

ನಿರ್ಣಾಯಕ ಪಂದ್ಯದಲ್ಲಿ ಕೇವಲ 1 ರನ್​ಗಳಿಸಿ ಔಟಾಗಿರುವುದು ಹಿಟ್​ ಮ್ಯಾನ್​ನನ್ನು ಹೈರಾಣರನ್ನಾಗಿಸಿತು. ಅಗ್ರ ಕ್ರಮಾಂಕದ ದಾಂಡಿಗರ ಪೆವಿಲಿಯನ್ ಯಾತ್ರೆಯನ್ನು ನೋಡಿದ ರೋಹಿತ್ ಕಪ್ ಕೈ ತಪ್ಪಿತು ಎಂದೇ ಭಾವಿಸಿದ್ದರು. ಆದರೆ ಕೊನೆಯಲ್ಲಿ ರವೀಂದ್ರ ಜಡೇಜ ಹಾಗೂ ಧೋನಿ ವಿರೋಚಿತ ಹೋರಾಟ ರೋಹಿತ್​ರ ಆಸೆ ಮತ್ತೆ ಚಿಗುರುವಂತೆ ಮಾಡಿತ್ತು.

ಇದರ ನಡುವೆ ಜಡೇಜರಿಗೆ ಸನ್ನೆಗಳ ಮೂಲಕವೇ ಹಿಟ್​ಮ್ಯಾನ್ ಆತ್ಮ ವಿಶ್ವಾಸ ತುಂಬಿದರು. ಒಂದೆಡೆ ಜಡ್ಡುರ ಅಬ್ಬರ ಮತ್ತೊಂದೆಡೆ ಧೋನಿಯ ಅನುಭವ ಪಂದ್ಯವನ್ನು ಭಾರತದ ಕಡೆ ವಾಲುವಂತೆ ಮಾಡಿತ್ತು. ಆದರೆ ಕೊನೆಯ ಹಂತದಲ್ಲಿ ಜಡೇಜ ಕ್ಯಾಚ್ ನೀಡಿ ನಿರ್ಗಮಿಸಿದರು.

ಆದರೂ ಪೆವಿಲಿಯನ್​ನಲ್ಲಿ ನಿಂತಿದ್ದ ರೋಹಿತ್ ಗೆಲುವು ನಮ್ಮದೇ ಅನ್ನುವ ಆಶಾಭಾವನೆಯಲ್ಲಿದ್ದರು. ಆದರೆ ಧೋನಿಯ ಆ ರನೌಟ್​ ವಿಶ್ವಕಪ್​ನಿಂದ ಟೀಂ ಇಂಡಿಯಾವನ್ನು ಹೊರಗಟ್ಟಿತ್ತು. ಇದನ್ನು ನೋಡುತ್ತಾ ನಿಂತಿದ್ಧ ಹಿಟ್​ಮ್ಯಾನ್ ಸಣ್ಣ ಮಗುವಂತೆ ಬಿಕ್ಕಿ ಅಳುತ್ತಿದ್ದರು.

ಈ ದೃಶ್ಯ ಎಂತವರ  ಮನವನ್ನು ಕಲಕುವಂತಿತ್ತು. ಟೀಂ ಇಂಡಿಯಾವನ್ನು ಅಬ್ಬರ ಬ್ಯಾಟಿಂಗ್​ ಮೂಲಕ ಸೆಮಿ ಫೈನಲ್​ವರೆಗೆ ಮುನ್ನಡೆಸಿದ್ದ ಶ್ರೇಷ್ಠ ಆಟಗಾರ ಅಸಹಾಯಕರಾಗಿ ಅಳುತ್ತಾ ನಿಂತಿದ್ದರು. ಕಣ್ಣೀರು ಸುರಿಸುತ್ತಾ ನಿಂತಿದ್ದ ರೋಹಿತ್​ರ ಮನಕಲುಕುವ ವಿಡಿಯೋ ವೈರಲ್ ಆಗಿದೆ. ಚಾಂಪಿಯನ್ ಪಟ್ಟಕ್ಕಾಗಿ ಅಸಲಿ ಚಾಂಪಿಯನ್ ರೀತಿ ಬ್ಯಾಟ್ ಬೀಸಿದ ಹಿಟ್​ಮ್ಯಾನ್​ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಮಾಧಾನ ಹೇಳುತ್ತಿದ್ದಾರೆ.ಸರ್ವಶ್ರೇಷ್ಠ ದಾಖಲೆಯನ್ನು ಮಿಸ್ ಮಾಡಿಕೊಂಡ ಹಿಟ್​ಮ್ಯಾನ್:ಐಸಿಸಿ ವಿಶ್ವಕಪ್ 2019ರ ಟೂರ್ನಿಯ ಮೊದಲ ಸೆಮಿ ಫೈನಲ್​ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 18 ರನ್​ಗಳಿಂದ ಸೋಲನುಭವಿಸಿದೆ. ಈ ಮೂಲಕ ವರ್ಲ್ಡ್​ಕಪ್ ಗೆಲ್ಲುವ ನೆಚ್ಚಿನ ತಂಡವೊಂದು ಟೂರ್ನಿಯಿಂದ ಹೊರ ಬಿದ್ದಿದೆ. ಲೀಗ್​ ಹಂತದಲ್ಲಿ ಶತಕಗಳ ಮೂಲಕ ಸಂಚಲನ ಸೃಷ್ಟಿಸಿದ್ದ ರೋಹಿತ್ ಶರ್ಮಾ ಕಿವೀಸ್ ವಿರುದ್ಧ ವಿಫಲರಾಗಿರುವುದು ಸೋಲಿಗೆ ಮತ್ತೊಂದು ಕಾರಣ ಎನ್ನಬಹುದು.ಪ್ರತಿ ಪಂದ್ಯದಲ್ಲೂ ಅದ್ಭುತ ಆರಂಭ ಒದಗಿಸಿದ್ದ ರೋಹಿತ್ ಸೆಮಿಯಲ್ಲಿ ಮೊದಲಿಗರಾಗಿ ನಿರ್ಗಮಿಸಿದ್ದರು. ಕೇವಲ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದ ಹಿಟ್​ಮ್ಯಾನ್ ಇದೇ ಪಂದ್ಯದ ಮೂಲಕ ಕ್ರಿಕೆಟ್​ ಇತಿಹಾಸದಲ್ಲೇ ಯಾರೂ ಮಾಡಲಾಗದಂತಹ ದಾಖಲೆಯನ್ನು ಕೈಚೆಲ್ಲಿಕೊಂಡರು.

ವರ್ಲ್ಡ್​ಕಪ್ ಇತಿಹಾಸದಲ್ಲೇ ಸರ್ವಶ್ರೇಷ್ಠ ದಾಖಲೆ ಎನ್ನಲಾಗಿರುವ 673 ರನ್​ಗಳ ರೆಕಾರ್ಡ್​ ಮುರಿಯುವ ಅವಕಾಶವೊಂದು ಸೆಮಿ ಫೈನಲ್​ನಲ್ಲಿ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಅವರ ಮುಂದಿತ್ತು.

2003ರ ವಿಶ್ವಕಪ್​ ವೇಳೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ ನಿರ್ಮಿಸಿರುವ ರನ್​ ದಾಖಲೆಯನ್ನು ಅಳಿಸಿ ಹಾಕಲು ರೋಹಿತ್​ಗೆ ಬೇಕಾಗಿದದ್ದು ಕೇವಲ 27 ರನ್​ಗಳು ಮಾತ್ರ. ಅದಾಗಲೇ ಹಿಟ್​ಮ್ಯಾನ್  ಐದು ಶತಕ ಹಾಗೂ ಒಂದು ಅರ್ಧಶತಕದೊಂದಿಗೆ 647 ರನ್​ ಕಲೆ ಹಾಕಿ ಟೂರ್ನಿಯಲ್ಲೇ ಅತ್ಯಧಿಕ ರನ್​ ಬಾರಿಸಿದ ಆಟಗಾರರನಾಗಿ ಅಗ್ರಸ್ಥಾನದಲ್ಲಿದ್ದರು.

ಇದನ್ನೂ ಓದಿ: #ThankYouMSD: ಕಣ್ಣೀರಿಡುತ್ತಾ ಮೈದಾನದಿಂದ ಭಾರದ ಹೆಜ್ಜೆಯಿಟ್ಟ ಧೋನಿ..! ವಿಡಿಯೋ ವೈರಲ್

ಇನ್ನು ಕಿವೀಸ್ ವಿರುದ್ಧ 12 ರನ್​ ಕಲೆ ಹಾಕಿದರೆ ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಪಟ್ಟಿಯಲ್ಲಿ ರೋಹಿತ್ ಶರ್ಮಾ ದ್ವಿತೀಯ ಸ್ಥಾನಕ್ಕೇರುತ್ತಿದ್ದರು. ಈ ಹಿಂದೆ ಆಸ್ಟ್ರೇಲಿಯಾ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್  659 ರನ್​ಗಳನ್ನು ಬಾರಿಸಿ ದ್ವಿತೀಯ ಎರಡನೇ ಸ್ಥಾನವನ್ನು ಅಲಂಕರಿಸಿದ್ದರು.

ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್​ನಿಂದ 27 ರನ್​ಗಳು ಸಿಡಿದರೆ ಸಚಿನ್​ರ 673ರನ್ ದಾಖಲೆ ನಿರ್ನಾಮವಾಗಲಿದೆ ಎಂದೇ ಹೇಳಲಾಗಿತ್ತು. ಈ ಮೂಲಕ ಭಾರತದ ಪರ ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಹಿಟ್​ಮ್ಯಾನ್ ಪಾತ್ರವಾಗಲಿದ್ದಾರೆ ಎನ್ನಲಾಗಿತ್ತು.

ಆದರೆ ಮ್ಯಾಟ್ ಹೆನ್ರಿ ಎಸೆತದಲ್ಲಿ ವಿಕೆಟ್​ ಕೀಪರ್​ ಲಾಥಮ್​ಗೆ ಕ್ಯಾಚ್ ನೀಡಿ ರೋಹಿತ್ ಕೇವಲ 1 ರನ್​ಗೆ ನಿರ್ಗಮಿಸಿದರು. ಈ ಮೂಲಕ ಸಚಿನ್ ದಾಖಲೆಯನ್ನು ಅಳಿಸಿ ಹಾಕುವ ಅವಕಾಶವನ್ನು ಮಿಸ್ ಮಾಡಿಕೊಂಡರು.

ಅದೇ ರೀತಿ ಈ ಪಂದ್ಯದಲ್ಲಿ ರೋಹಿತ್ 53 ರನ್​ಗಳನ್ನು ಹಾಕಿದ್ದರೆ ಕ್ರಿಕೆಟ್​ ಇತಿಹಾಸದಲ್ಲೇ ಟೂರ್ನಿಯೊಂದರಲ್ಲಿ 700 ರನ್​ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಾಣವಾಗುತ್ತಿತ್ತು. ಆದರೆ ಸೆಮಿ ಫೈನಲ್​ನಲ್ಲಿ ಮುಗ್ಗರಿಸುವ ಮೂಲಕ ಟೀಂ ಇಂಡಿಯಾದ ಆಟಗಾರ ಅಂತಹದೊಂದು ಸರ್ವಶ್ರೇಷ್ಠ ದಾಖಲೆಯನ್ನು ಕೈಚೆಲ್ಲಿಕೊಂಡಿದ್ದಾರೆ. ಅಲ್ಲದೆ ಟೂರ್ನಿಯುದ್ದಕ್ಕೂ ರನ್​ ಮಳೆ ಸುರಿಸಿ ಸೋಲಿನೊಂದಿಗೆ ವಿಶ್ವಕಪ್ 2019ಗೆ ವಿದಾಯ ಹೇಳಿದ್ದಾರೆ.

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres