ICC Cricket World Cup 2019: ವಿಶ್ವಕಪ್​ನಲ್ಲಿ ಸುರಿಯುತ್ತಿದೆ ಸಿಕ್ಸರ್​ಗಳ ಮಳೆ; ಯಾರಾಗಲಿದ್ದಾರೆ ಸಿಕ್ಸರ್ ಕಿಂಗ್!

ICC Cricket World Cup 2019: ಈ ಸಲದ ಬಹುತೇಕ ತಂಡಗಳಲ್ಲಿ ಬಿಗ್​​ ಹಿಟ್ಟರ್​​ಗಲೇ ಇದ್ದಾರೆ. ಅದರಲ್ಲೂ ವೆಸ್ಟ್​ ಇಂಡೀಸ್​​, ಆಸ್ಟ್ರೇಲಿಯಾ, ಭಾರತದ ಬಹುತೇಕ ಆಟಗಾರರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಬಲ್ಲರು.

Vinay Bhat | news18
Updated:June 13, 2019, 10:39 PM IST
ICC Cricket World Cup 2019: ವಿಶ್ವಕಪ್​ನಲ್ಲಿ ಸುರಿಯುತ್ತಿದೆ ಸಿಕ್ಸರ್​ಗಳ ಮಳೆ; ಯಾರಾಗಲಿದ್ದಾರೆ ಸಿಕ್ಸರ್ ಕಿಂಗ್!
ರೋಹಿತ್ ಶರ್ಮಾ ಹಾಗೂ ಕ್ರಿಸ್ ಗೇಲ್
  • News18
  • Last Updated: June 13, 2019, 10:39 PM IST
  • Share this:
ಬೆಂಗಳೂರು (ಜೂ. 13): ಈ ಬಾರಿಯ ಐಸಿಸಿ ವಿಶ್ವಕಪ್​ನಲ್ಲಿ ರನ್​ ಹೊಳೆಯೇ ಹರಿಯುತ್ತಿದೆ. ಇಂಗ್ಲೆಂಡ್​​ನ ಬಹುತೇಕ ಪಿಚ್​ಗಳು ಬ್ಯಾಟಿಂಗ್​ಗೆ ಸಹಕಾರಿಯಾಗಿವೆ. ಸ್ಕೋರ್​ ಬೋರ್ಡ್​​ 300ರ ಗಡಿ ದಾಟುತ್ತಿವೆ. ಈ ಬಾರಿ 500 ರನ್ ದಾಖಲಾದರೂ ದಾಖಲಾಗಬಹುದು ಎಂದೇ ಹೇಳಲಾಗುತ್ತಿದೆ. ಯಾಕಂದರೆ ಬ್ಯಾಟ್ಸ್​​ಮನ್​ಗಳು ಟಿ-20 ಮಾದರಿಯಲ್ಲಿ ಬ್ಯಾಟ್ ಬೀಸುತ್ತಿದ್ದು, ಸಿಕ್ಸರ್​ಗಳ ಮೇಲೆ ಸಿಕ್ಸರ್ ಸಿಡಿಸುತ್ತಿದ್ದಾರೆ.

ಈ ಸಲದ ಬಹುತೇಕ ತಂಡಗಳಲ್ಲಿ ಬಿಗ್​​ ಹಿಟ್ಟರ್​​ಗಲೇ ಇದ್ದಾರೆ. ಅದರಲ್ಲೂ ವೆಸ್ಟ್​ ಇಂಡೀಸ್​​, ಆಸ್ಟ್ರೇಲಿಯಾ, ಭಾರತದ ಬಹುತೇಕ ಆಟಗಾರರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಬಲ್ಲರು. ಇಂಥ ಘಟಾನುಘಟಿಗಳು ಇದ್ದಮೇಲೆ ಸಿಕ್ಸರ್​​ಗೇನು ಕೊರತೆ. ಅದಕ್ಕಾಗಿಯೆ ಈ ಸಲ ವಿಶ್ವಕಪ್​ನಲ್ಲಿ ಯಾರು ಅತಿ ಹೆಚ್ಚು ಸಿಕ್ಸರ್​ ಹೊಡೆಯುತ್ತಾರೆ ಎಂಬ  ಚರ್ಚೆ ಶುರುವಾಗಿದೆ. ಹೀಗಾಗೆ ಕ್ರಿಕೆಟ್ ಪಂಡಿತರು ಎಲ್ಲಾ ಆಟಗಾರರನ್ನ ಅಳೆದುತೂಗಿ 4 ಆಟಗಾರರ ಒಂದು ಪಟ್ಟಿ ಸಹ ಸಿದ್ಧಪಡಿಸಿದ್ದಾರೆ.

4. ಇಯಾನ್ ಮಾರ್ಗನ್-ಇಂಗ್ಲೆಂಡ್

ಅತಿ ಹೆಚ್ಚು ಸಿಕ್ಸರ್​ ಸಿಡಿಸುವ 4 ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್​​ ನಾಯಕ ಇಯಾನ್ ಮಾರ್ಗನ್ 4ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದಲ್ಲಿ​ ಆಧಾರಸ್ತಂಭವಾಗಿರುವ ಮಾರ್ಗನ್​ ಸ್ಫೋಟಕ ಬ್ಯಾಟಿಂಗ್​​​​ ಕೂಡ ಪ್ರದರ್ಶಿಸಬಲ್ಲರು.  ಸದ್ಯ ಅದ್ಭುತ ಫಾರ್ಮ್​ನಲ್ಲಿರುವ ಮಾರ್ಗನ್, ಯಾವುದೇ ಆರ್ಡರ್​ನಲ್ಲಿ ಬೇಕಾದರೂ ಬ್ಯಾಟ್​ ಬೀಸಬಲ್ಲರಂತೆ. ಕೇವಲ 21 ಬಾಲ್​ಗೆ 50 ರನ್​ ಹೊಡೆಯುವ ಮೂಲಕ ಫಾಸ್ಟೆಸ್ಟ್​ ಫಿಫ್ಟಿ ಹೊಡೆದ ಇಂಗ್ಲೆಂಡ್​ ಬ್ಯಾಟ್ಸ್​​ಮನ್ ಎನಿಸಿಕೊಂಡಿದ್ದಾರೆ.

India vs Australia: ಪ್ರ್ಯಾಕ್ಟೀಸ್ ಬಿಟ್ಟು ಮೈದಾನದಿಂದ ಹೊರ ನಡೆದ ಟೀಂ ಇಂಡಿಯಾ ಆಟಗಾರರು

3. ಮಾರ್ಟಿನ್ ಗಪ್ಟಿಲ್-ನ್ಯೂಜಿಲೆಂಡ್

ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್​ನ ಸ್ಫೋಟಕ ಬ್ಯಾಟ್ಸ್​​ಮನ್ ಮಾರ್ಟಿನ್ ಗುಪ್ಟಿಲ್ ಇದ್ದಾರೆ.  2015ರಿಂದಲೂ ನ್ಯೂಜಿಲೆಂಡ್​ ಪರವಾಗಿ ಅತಿ ಹೆಚ್ಚು ರನ್ ಸ್ಕೋರ್​ ಮಾಡಿದ್ದಾರೆ. ಗಪ್ಟಿಲ್​ಗೆ ಸುದೀರ್ಘ ಇನ್ನಿಂಗ್ಸ್​ ಆಡುವ ಸಾಮರ್ಥ್ಯ ಇದೆ. ಅಲ್ಲದೆ ಕಳೆದ ವಿಶ್ವಕಪ್​​ನಲ್ಲಿ ದ್ವಿಶತಕ ಸಿಡಿಸಿದ ದಾಖಲೆ​ ಇವರ ಹೆಸರಲ್ಲಿದೆ.2. ಕ್ರೀಸ್ ಗೇಲ್ - ವೆಸ್ಟ್ ಇಂಡೀಸ್

ಎರಡನೇ ಸ್ಥಾನದಲ್ಲಿ ಕ್ರಿಕೆಟ್​ ಲೋಕದ ದೈತ್ಯ ಬ್ಯಾಟ್ಸ್​​ಮನ್​ ಕ್ರೀಸ್​ ಗೇಲ್​​​ ಇದ್ದಾರೆ. ಈ ವರ್ಷ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಸ್ಫೋಟಕ ಆಟವಾಡಿದ್ದ ಗೇಲ್​, ಇತ್ತೀಚೆಗಷ್ಟೇ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ಆಟಗಾರನೆಂಬ ದಾಖಲೆ ಕೂಡ ಮಾಡಿದರು. ಹೀಗಾಗಿ  ಈ ಬಾರಿ ವಿಶ್ವಕಪ್​​ನಲ್ಲಿ ಮತ್ತಷ್ಟು ಅಬ್ಬರಿಸಬಹುದೆಂದು ನಿರೀಕ್ಷೆ ಮಾಡಲಾಗಿದೆ.

'ಧೋನಿ ಗ್ಲೌಸ್​ ವಿಚಾರ ಬಿಟ್ಟು ಐಸಿಸಿ ಅಂಪೈರ್​​​ಗಳ ಕೆಟ್ಟ ತೀರ್ಪಿನ ಬಗ್ಗೆ ಚಿಂತಿಸಲಿ'!

1. ರೋಹಿತ್ ಶರ್ಮಾ- ಭಾರತ

ಟೀಂ​ ಇಂಡಿಯಾದ ಹಿಟ್​ ಮ್ಯಾನ್​ ಎಂದೇ  ಖ್ಯಾತಿಯ ರೋಹಿತ್​ ಶರ್ಮಾ ಏಕದಿನ ಕ್ರಿಕೆಟ್​​ನ ಅದ್ಭುತ ಆಟಗಾರರಲ್ಲಿ ಒಬ್ಬ.  ಟೀಂ ಇಂಡಿಯಾದ ಆರಂಭಿಕ ಆಟಗಾರನಾಗಿ​ ಅನೇಕ ದಾಖಲೆ ಬರೆದಿದ್ದಾರೆ. 3 ಬಾರಿ 200ಕ್ಕೂ ಹೆಚ್ಚು ರನ್​ ಗಳಿಸಿರುವ ರೋಹಿತ್, ಒಂದೇ ಇನ್ನಿಂಗ್ಸ್​​ನಲ್ಲಿ ಸಿಕ್ಸರ್​ಗಳು ಸುರಿಮಳೆಯನ್ನೇ ಹರಿಸುತ್ತಾರೆ. 2015ರಿಂದ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ದಾಖಲೆ​ ಸದ್ಯ ರೋಹಿತ್​ ಹೆಸರಿನಲ್ಲಿದೆ.

206 ಪಂದ್ಯವಾನ್ನಾಡಿರುವ ರೋಹಿತ್, ಒಟ್ಟು 218 ಸಿಕ್ಸರ್​ ಸಿಡಿಸಿದ್ದಾರೆ. ಅದುಕೂಡ 87.95ರ ಸ್ಟ್ರೈಕ್​ ರೇಟ್​ನಲ್ಲಿ. ಹೀಗಾಗಿ ಈ ವಿಶ್ವಕಪ್​ನಲ್ಲಿ ರೋಹಿತ್​ ಬ್ಯಾಟ್​ನಿಂದ ಸಿಕ್ಸರ್​ ಮಳೆ ಸಿಡಿಯಬಹುದೆಂದು ನಿರೀಕ್ಷೆ ಮಾಡಲಾಗಿದೆ.

First published:June 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ