Team India: ಟೀಂ ಇಂಡಿಯಾ ಆಟಗಾರರಿಗೆ ವರ್ಕ್ ಫ್ರಂ ಹೋಂ; ಬಿಸಿಸಿಐಯಿಂದ ಹೊಸ ಆ್ಯಪ್

ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಈ ಆ್ಯಪ್ ಮೂಲಕ ಪ್ರತಿಯೊಬ್ಬ ಆಟಗಾರರ ಜೊತೆ ಸಂಪರ್ಕದಲ್ಲಿರುತ್ತಾರೆ. ಹಾಗೇ ಆಟಗಾರರ ವಿಡಿಯೋಗಳನ್ನ ನೋಡುತ್ತಾ, ಸರಿ ತಪ್ಪುಗಳ ಮೇಲೆ ವರ್ಕ್ಔಟ್ ಮಾಡಲಿದ್ದಾರೆ.

ಟೀಂ ಇಂಡಿಯಾ ಆಟಗಾರರು.

ಟೀಂ ಇಂಡಿಯಾ ಆಟಗಾರರು.

  • Share this:
    ಲಾಕ್​ಡೌನ್​ನಿಂದಾಗಿ ಟೀಂ ಇಂಡಿಯಾ ಆಟಗಾರರು ಮನೆಯಲ್ಲೇ ಸಮಯ ಕಳೆಯುತ್ತಿದ್ದು, ಬಿಸಿಸಿಐ ವಿಸ್ತೃತವಾದ ಯೋಜನೆಯೊಂದನ್ನು ರೂಪಿಸಿದೆ. ಕೊಹ್ಲಿ ಪಡೆಗೆ ಬಿಸಿಸಿಐ ವರ್ಕ್ ಫ್ರಂ ಹೋಂ ಪ್ರಾರಂಭಿಸಿದೆ. ಈ ಕಾರ್ಯಕ್ಕಾಗಿ ಪ್ರತ್ಯೇಕ ಆ್ಯಪ್ ಕೂಡ ಸಿದ್ಧಪಡಿಸಲಾಗಿದ್ದು, ಆಟಗಾರರಿಗೆ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದೆ.

    ಆಟಗಾರರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್ ಆಗಿರುವಂತೆ ನೋಡಿಕೊಳ್ಳುವುದು ಬಿಸಿಸಿಐ ಗುರಿಯಾಗಿದೆ. ಇನ್ನೂ ಇದರಲ್ಲಿ ಆನ್​ಲೈನ್ ತರಬೇತಿ ಸೆಷನ್ಸ್, ಚಾಟ್ ರೂಮ್ ಹಾಗೂ ನಾಲ್ಕು ಹಂತಗಳ ಯೋಜನೆಯೊಂದಿಗೆ ಪ್ರಶ್ನಾವಳಿಯನ್ನು ಒದಗಿಸಲಾಗಿದೆ. ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ನೆರವು ನೀಡಲು ಅಪ್ಲಿಕೇಶನ್ ಸಹಾಯಕವಾಗಲಿದೆ. ಇಲ್ಲಿ ಆಟಗಾರರ ವೈಯಕ್ತಿಕ ಮತ್ತು ತಂಡದ ಪ್ರದರ್ಶನ, ಕೌಶಲ್ಯ ಹಾಗೂ ಗಾಯದ ಸಮಸ್ಯೆ ಸೇರಿದಂತೆ ಇತರೆ ಮಾಹಿತಿ ನೀಡಲಾಗಿರುತ್ತದೆ.

    ಪಾಕ್ ಹಿಂದೂಗಳ ನೆರವಿಗೆ ನಿಂತ ಖ್ಯಾತ ಕ್ರಿಕೆಟಿಗ..!

    ಈ ಆ್ಯಪ್ ಕಾರ್ಯನಿರ್ವಹಣೆ ಕುರಿತು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಮಾಹಿತಿ ನೀಡಿದ್ದು, ಇದು ಹಂತ ಹಂತದ ಪ್ರಕ್ರಿಯೆಯಾಗಿದೆ. ಇದನ್ನು ಬಿಸಿಸಿಐ ಕಾರ್ಯದರ್ಶಿಗಳು ಪ್ರತಿದಿನ ಪರಿಶೀಲನೆ ನಡೆಸಿ ಪ್ರಗತಿಯನ್ನು ಗಮನಿಸುತ್ತಾರೆ. ಆಟಗಾರರ ದೈಹಿಕ-ಮಾನಸಿಕ ಆರೋಗ್ಯ, ಆನ್​ಲೈನ್ ವೃತ್ತಿಪರ ನೆರವು, ಆಹಾರ ಪದ್ಧತಿ, ಫಿಟ್ನೆಸ್ ಸೆಷನ್ಸ್ ಗಳನ್ನು ಪ್ರತಿದಿನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಇನ್ನು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಈ ಆ್ಯಪ್ ಮೂಲಕ ಪ್ರತಿಯೊಬ್ಬ ಆಟಗಾರರ ಜೊತೆ ಸಂಪರ್ಕದಲ್ಲಿರುತ್ತಾರೆ. ಹಾಗೇ ಆಟಗಾರರ ವಿಡಿಯೋಗಳನ್ನ ನೋಡುತ್ತಾ, ಸರಿ ತಪ್ಪುಗಳ ಮೇಲೆ ವರ್ಕ್ಔಟ್ ಮಾಡಲಿದ್ದಾರೆ. ಇನ್ನು ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಕೂಡ ಆಟಗಾರರ ಅಭಿಪ್ರಾಯಗಳನ್ನ ಸಂಗ್ರಹಿಸಲಿದ್ದಾರೆ ಎಂದು ಹೇಳಿದ್ದಾರೆ.

    ಶತಕ ಸಿಡಿಸಿದರೂ ತಂಡದಿಂದ ಕೈಬಿಟ್ಟಿದ್ದೇಕೆ ಎಂದು ಧೋನಿಯನ್ನು ಪ್ರಶ್ನಿಸಬೇಕು..!

    ಮತ್ತೊಂದೆಡೆ ಬಿಸಿಸಿಐ, ಟೀಂ ಇಂಡಿಯಾ ಆಟಗಾರರನ್ನ ಕ್ರಿಕೆಟ್ ಫೀಲ್ಡ್​ಗೆ ಇಳಿಸಲು ತುದಿಗಾಲಲ್ಲಿ ನಿಂತಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ. ಪರಿಸ್ಥಿತಿ ಅನುಮತಿಸಿದಾಗ, ಸ್ಥಳೀಯ ಕ್ರೀಡಾಂಗಣಗಳಲ್ಲಿ ಟ್ರೈನಿಂಗ್ ಆರಂಭಿಸಲು ಪ್ಲಾನ್ ಮಾಡಿಕೊಂಡಿದೆ. ಇದರಿಂದ ಆಟಗಾರರು, ಮತ್ತೆ ಕ್ರಿಕೆಟ್ ಶುರುವಾದಾಗ ಫಿಟ್ ಆಗಿರಬಹುದು ಅಂತ ಮಂಡಳಿ ಅಭಿಪ್ರಾಯವಾಗಿದೆ.

    First published: