2022ರ ಕಾಮನ್​ವೆಲ್ತ್​​ ಗೇಮ್ಸ್​ಗೆ ಮಹಿಳಾ ಟಿ-20 ಕ್ರಿಕೆಟ್ ಸೇರ್ಪಡೆ; 2028ರ ಒಲಿಂಪಿಕ್ಸ್​ ಮೇಲೂ ಕಣ್ಣು

ಐಸಿಸಿ ಮಹಿಳೆಯರ ರ್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್ 8 ತಂಡಗಳು 2022ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾಗವಹಿಸಲಿವೆ. ಎಲ್ಲಾ ಪಂದ್ಯಗಳು ಇಂಗ್ಲೆಂಡ್​ನ ಎಡ್​ಬಸ್ಟನ್​ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಐಸಿಸಿ ಹೇಳಿದೆ.

Vinay Bhat | news18
Updated:August 13, 2019, 3:30 PM IST
2022ರ ಕಾಮನ್​ವೆಲ್ತ್​​ ಗೇಮ್ಸ್​ಗೆ ಮಹಿಳಾ ಟಿ-20 ಕ್ರಿಕೆಟ್ ಸೇರ್ಪಡೆ; 2028ರ ಒಲಿಂಪಿಕ್ಸ್​ ಮೇಲೂ ಕಣ್ಣು
ಭಾರತ ಮಹಿಳಾ ಕ್ರಿಕೆಟ್ ತಂಡ
Vinay Bhat | news18
Updated: August 13, 2019, 3:30 PM IST
ಬೆಂಗಳೂರು (ಆ. 13): 2022ರಲ್ಲಿ ಇಂಗ್ಲೆಂಡ್‍ನ ಬರ್ಮಿಂಗ್‍ಹ್ಯಾಂನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್​ಗೆ ಮಹಿಳಾ ಕ್ರಿಕೆಟ್ ಸೇರ್ಪಡೆಯಾಗಿದೆ. ಈ ಬಗ್ಗೆ ಐಸಿಸಿ ಹಾಗೂ ಕಾಮನ್ ವೆಲ್ತ್ ಒಕ್ಕೂಟ ಖಚಿತ ಪಡಿಸಿದೆ.

ಕಾಮನ್‍ವೆಲ್ತ್ ಕ್ರಿಕೆಟ್ ಗೇಮ್ಸ್​ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆ ಮಾಡಲು ಐಸಿಸಿ ಕಳೆದ ವರ್ಷ ಕಾಮನ್​ವೆಲ್ತ್ ಗೇಮ್ಸ್ ಆಯೋಜಕರಿಗೆ ಮನವಿ ಸಲ್ಲಿಸಿಕೆ ಮಾಡಿತ್ತು. ಮಹಿಳಾ ಕ್ರಿಕೆಟ್‍ಗೆ ಜಾಗತಿಕ ಮನ್ನಣೆ ಕಲ್ಪಿಸಲು ಐಸಿಸಿ ಮತ್ತು ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಕ್ರಮಕ್ಕೆ ಮುಂದಾಗಿತ್ತು. ಇದಕ್ಕೆ ಈಗ ಮನ್ನಣೆ ಸಿಕ್ಕಿದೆ.

ಐಸಿಸಿ ಮಹಿಳೆಯರ ರ್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್ 8 ತಂಡಗಳು 2022ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾಗವಹಿಸಲಿವೆ. ಭಾರತ, ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ಹಾಗೂ ವೆಸ್ಟ್​ ಇಂಡೀಸ್​ ತಂಡಗಳು ಇದರಲ್ಲಿ ಭಾಗವಹಿಸಲಿದ್ದು, ಎಲ್ಲಾ ಪಂದ್ಯಗಳು ಇಂಗ್ಲೆಂಡ್​ನ ಎಡ್​ಬಸ್ಟನ್​ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಐಸಿಸಿ ಹೇಳಿದೆ.

ವೆಸ್ಟ್​ ಇಂಡೀಸ್ ಆಟಗಾರರ ಜೊತೆ ಬೋಟ್​ನಲ್ಲಿ ಕಾಣಿಸಿಕೊಂಡ ರೋಹಿತ್, ಧವನ್, ಐಯರ್!

 'ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಮಹಿಳಾ ಕ್ರಿಕೆಟ್​ ಹಾಗೂ ಗ್ಲೋಬಲ್ ಮಹಿಳಾ ಕ್ರಿಕೆಟ್​ ಕಮ್ಯುನಿಟಿ ಜಂಟಿಯಾಗಿ ಬಿಡ್​​ನಲ್ಲಿ ಸಹಕರಿಸಿವೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ ಸಾಕಷ್ಟು ಪ್ರಸಿದ್ದಿ ಪಡೆಯುತ್ತಿದೆ. ಕಾಮನ್​ವೆಲ್ತ್​ನಂತಹ ಗೌರವಾನ್ವಿತ ಕ್ರೀಡಾಕೂಟದಲ್ಲಿ ಕ್ರಿಕೆಟ್​ ಸೇರ್ಪಡೆಯಾಗಿರುವುದು ಸಂತಸ ತಂದಿದೆ' ಎಂದು ಐಸಿಸಿ ಸಿಇಒ ಮನು ಸಾಹ್ನಿ ಹೇಳಿದರು.

Virat Kohli: ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ 50ನೇ ಶತಕ ಯಾವಾಗ?; ಇಲ್ಲಿದೆ ಉತ್ತರ

'ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಟಿ-20 ಮಾದರಿಯ ಪಂದ್ಯ ನಡೆಯಲಿದೆ. 2028ರ ಒಲಿಂಪಿಕ್​ನಲ್ಲೂ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸುವ ಅಲೋಚನೆಯಲ್ಲಿದ್ದೇವೆ. ಇದರ ಕಾರ್ಯ ಪ್ರಗತಿಯಲ್ಲಿದೆಯಷ್ಟೆ. ಬಿಸಿಸಿಐ ಜೊತೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಸದ್ಯ ಕ್ರಿಕೆಟ್ ಮತ್ತು ಕಾಮನ್ ವೆಲ್ತ್ ಗೇಮ್ಸ್ ಉತ್ತಮ ಸಂಬಂಧವನ್ನು ಹೊಂದಿದೆ. ಎರಡು ಒಂದಾಗುವುದರಿಂದ ಕಾಮನ್ ವೆಲ್ತ್ ಸದಸ್ಯ ರಾಷ್ಟ್ರಗಳಲ್ಲಿ ಇರುವ ಅನೇಕ ಕ್ರಿಕೆಟ್ ಅಭಿಮಾನಿಗಳನ್ನು ಟೂರ್ನಿಯತ್ತ ಆಕರ್ಷಿಸಲು ನೆರವಾಗಲಿದೆ' ಎಂದು ಸಾಹ್ನಿ ತಿಳಿಸಿದ್ದಾರೆ.

ಇದಕ್ಕೂ ಮೊದಲು 1998 ರಲ್ಲಿ ಕ್ರಿಕೆಟ್ ಅನ್ನು ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಸೇರ್ಪಡೆ ಮಾಡಲಾಗಿತ್ತು. ಆದರೆ ಆ ವೇಳೆ ಕೇವಲ ಪುರುಷ ತಂಡಗಳು ಮಾತ್ರ ಟೂರ್ನಿಯಲ್ಲಿ ಭಾಗವಹಿಸಿದ್ದವು. ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪ್ರಶಸ್ತಿ ಬಾಜಿಕೊಂಡಿತ್ತು.

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...