ಚಿರತೆ ದತ್ತು ನವೀಕರಿಸಿದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾವನ ಎಂಬ ಚಿರತೆಯನ್ನು ಕಳೆದ ವರ್ಷ ಮಹಿಳಾ ಕ್ರಿಕೆಟರ್​ ವೇದಾ ಕೃಷ್ಣ ಮೂರ್ತಿ ದತ್ತು ಸ್ವೀಕರಿಸಿದ್ದರು.

G Hareeshkumar | news18
Updated:September 9, 2019, 11:06 AM IST
ಚಿರತೆ ದತ್ತು ನವೀಕರಿಸಿದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ
ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ
  • News18
  • Last Updated: September 9, 2019, 11:06 AM IST
  • Share this:
ಮೈಸೂರು ( ಸೆ.09 : ಭಾರತ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರು  ಮೃಗಾಲಯದ ಒಂದು ಚಿರತೆಯ ದತ್ತು ನವೀಕರಿಸಿದ್ದಾರೆ. ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾವನ ಎಂಬ ಚಿರತೆಯನ್ನು ಕಳೆದ ವರ್ಷ ದತ್ತು ಸ್ವೀಕರಿಸಿದ್ದರು.

ಇಂದು ಮೃಗಾಲಯಕ್ಕೆ ಆಗಮಿಸಿದ‌ ವೇದ ಕೃಷ್ಣಮೂರ್ತಿ 2019 ರಿಂದ 2020ರ ವರೆಗೆ  35ಸಾವಿರ ರೂ.ಚೆಕ್ ನೀಡಿ ದತ್ತುವನ್ನು ನವೀಕರಣ ಮಾಡಿಸಿಕೊಂಡಿದ್ದಾರೆ. ಮೃಗಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಲಕರ್ಣಿ ಅವರು ಚಿಕ್​​​ನ್ನು ವೇದಾ ಕೃಷ್ಣಮೂರ್ತಿ ನೀಡಿದರು.

ಇದನ್ನೂ ಓದಿ :  ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದ ಬಳ್ಳಾರಿ ಜನರಲ್ಲಿ ಭಾರೀ ಬದಲಾವಣೆ; ಅದಕ್ಕೆ ಕಾರಣ, ಏನು ಗೊತ್ತೆ?

ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರು, ಡರ್ಬಿಯಲ್ಲಿ ಇಂಗ್ಲೆಂಡ್​​ ತಂಡದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್​​ಗೆ ಪಾದಾರ್ಪಣೆ ಮಾಡಿದರು. ಇವರು ಬಲಗೈ ಬ್ಯಾಟ್ಸ್ ಮನ್ ಮತ್ತು ಎಡಗೈ ಬೌಲರ್ ಆಗಿದ್ದಾರೆ. ಏಕದಿನ ಪಂದ್ಯಗಳಲ್ಲಿ ಒಂದು ಒಂದು ಸಾವಿರ್​ ರನ್​ಗಳನ್ನು ಗಳಿಸಿದ ಭಾರತದ ಕಿರಿಯ ಮಹಿಳಾ ಆಟಗಾರ್ತಿಯಾಗಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾ ಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ

First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ