• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Dutee Chand: ಒಲಂಪಿಕ್ ಸಿದ್ಧತೆಗೆ ಹಣವಿಲ್ಲದೆ ಬಿಎಂಡಬ್ಲ್ಯು ಕಾರು ಮಾರಲು ಮುಂದಾದ ದ್ಯುತಿ ಚಾಂದ್

Dutee Chand: ಒಲಂಪಿಕ್ ಸಿದ್ಧತೆಗೆ ಹಣವಿಲ್ಲದೆ ಬಿಎಂಡಬ್ಲ್ಯು ಕಾರು ಮಾರಲು ಮುಂದಾದ ದ್ಯುತಿ ಚಾಂದ್

ದ್ಯುತಿ ಚಾಂದ್

ದ್ಯುತಿ ಚಾಂದ್

ಕೊರೋನಾ ಕಾರಣಕ್ಕೆ ಒಲಂಪಿಕ್ಸ್ ಒಂದು ವರ್ಷ ಮುಂದೂಡಿಕೆಯಾಗಿದೆ. ಆದರೆ ಕ್ರೀಡಾಪಟುಗಳಿಗೆ ತರಬೇತಿ ನಿರಂತರವಾಗಿ ಬೇಕಾಗುತ್ತದೆ. ಹೀಗಿರುವಾಗ ಎಲ್ಲರೂ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಪ್ರಾಯೋಜಕತ್ವ ನೀಡಲು ಯಾರೂ ಮುಂದಾಗುತ್ತಿಲ್ಲ. ಇದು ಕ್ರೀಡಾಪಟುಗಳಿಗೆ ಸಂಕಷ್ಟ ತಂದೊಡ್ಡಿದೆ.

 • Share this:

  ಕೊರೋನಾ ವೈರಸ್ ಇಡೀ ವಿಶ್ವವನ್ನೇ​ ವಕ್ಕರಿಸಿರುವ ಕಾರಣದಿಂದಾಗಿ ಭಾರತದ ಅನೇಕ ಕ್ರೀಡಾಪಟುಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಪ್ರಮುಖವಾಗಿ ಭಾರತದ ಅತ್ಯಂತ ವೇಗದ ಓಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿರುವ ದ್ಯುತಿ ಚಾಂದ್ ತಮ್ಮ ತರಬೇತಿ ವೆಚ್ಚಗಳನ್ನು ಭರಿಸಲು ಬೇರೆ ದಾರಿಯಿಲ್ಲದೆ ತಮ್ಮಲ್ಲಿರುವ ಬೆಲೆಬಾಳುವ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.


  ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿರುವ ದ್ಯುತಿ ಬಳಿಕ ಆ ಪೋಸ್ಟ್​ ಅನ್ನು ಡಿಲೀಟ್‌ ಮಾಡಿದ್ದಾರೆ. ಕೊರೋನಾದಿಂದ ಪ್ರಾಯೋಜಕರು ಸಿಗದೇ ಇರುವುದರಿಂದ ತರಬೇತಿಗೆ ಆರ್ಥಿಕ ಅಡಚಣೆ ಆಗುತ್ತಿರುವ ಕಾರಣ ದ್ಯುತಿ ಚಂದ್‌ ತಮ್ಮ 2015ರ ಬಿಎಂಡಬ್ಲ್ಯು 3-ಸಿರೀಸ್‌ ಲಕ್ಸುರಿ ಕಾರನ್ನು ಮಾರಾಟ ಮಾಡಲು ಮುಂದಾಗಿದ್ದರು.


  England vs West Indies: ಕೊರೋನಾ ಲಾಕ್​ಡೌನ್ ಬಳಿಕ ಕ್ರಿಕೆಟ್: ಬಲಿಷ್ಠ ಇಂಗ್ಲೆಂಡ್ ವಿರುದ್ಧ ವೆಸ್ಟ್​ ಇಂಡೀಸ್​ಗೆ ಭರ್ಜರಿ ಜಯ


  "ಈ ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಪ್ರಾಯೋಜಕರು ಸಿಗುತ್ತಿಲ್ಲ. ನನಗೆ ಹಣದ ಅವಶ್ಯಕತೆಯಿದೆ. ಮತ್ತು ಟೋಕಿಯೋ ಒಲಿಂಪಿಕ್‌ಗೆ ನಾನು ತಯಾರಿ ನಡೆಸುತ್ತಿರುವಾಗ ನನ್ನ ತರಬೇತಿ ಮತ್ತು ಆಹಾರ ವೆಚ್ಚಗಳನ್ನು ಪೂರೈಸಲು ನನಗೆ ಹಣ ಬೇಕಿದ್ದು ಅದಕ್ಕಾಗಿ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ.


  "ಏಷ್ಯನ್ ಕ್ರೀಡಾಕೂಟದಲ್ಲಿ ನನ್ನ ಸಾಧನೆಗಾಗಿ ಒಡಿಶಾ ಎಂ ನವೀನ್ ಪಟ್ನಾಯಕ್ ಅವರಿಂದ 3 ಕೋಟಿ ರೂ.ಗಳ ನಗದು ಬಹುಮಾನವನ್ನು ಪಡೆದ ನಂತರ ನಾನು ಅದನ್ನು ಖರೀದಿಸಿದೆ, ಆ ಹಣದಿಂದ ನಾನು ನನ್ನ ಮನೆ ನಿರ್ಮಿಸಿದ್ದೆ , ಬಿಎಂಡಬ್ಲ್ಯು ಕಾರ್ ಖರೀದಿಸಿದೆ." ಎಂದು ಬರೆದುಕೊಂಡಿದ್ದರು. ಆದರೆ, ದ್ಯುತಿ ಚಾಂದ್ ಪೋಸ್ಟ್ ಹಾಕಿದ್ದ ಕೆಲ ಸಮಯದ ನಂತರ ಆ ಪೋಸ್ಟ್ ಅನ್ನು ಅಳಿಸಿದ್ದಾರೆ.


  ಒಡಿಶಾದ ಬಡಕುಟುಂಬದಲ್ಲಿ ಜನಿಸಿದ ದ್ಯುತಿ 2018ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್​ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗದ್ದುಕೊಂಡಿದ್ದರು. ಇದಲ್ಲದೇ ದೇಶ ಹಾಗೂ ವಿದೇಶಗಳಲ್ಲಿ ನಡೆದ ಹಲವು ಕ್ರೀಡಾಕೂಟಗಳಲ್ಲಿ ದ್ಯುತಿ ವಿವಿಧ ಪದಕ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ರಾಂಚಿಯಲ್ಲಿ ರಾಷ್ಟ್ರೀಯ ಕ್ರೀಡಕೂಟದಲ್ಲಿ ದ್ಯುತಿ 100 ಮೀಟರ್​ ಅಂತರವನ್ನು ಕೇವಲ 11.22 ಸೆಕೆಂಡ್ಸ್​​ನಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ್ದಾರೆ.


  ಹೋಮ್ » ಫೋಟೋ » ಕ್ರಿಕೆಟ್ ವಿಶ್ವಕಪ್​​ ಗೆದ್ದ ಬಳಿಕವೇ ನಾನು ಮದುವೆಯಾಗುತ್ತೇನೆ ಎಂದ ಕ್ರಿಕೆಟಿಗ!


  ಸದ್ಯ ಕೊರೋನಾ ಕಾರಣಕ್ಕೆ ಒಲಂಪಿಕ್ಸ್ ಒಂದು ವರ್ಷ ಮುಂದೂಡಿಕೆಯಾಗಿದೆ. ಆದರೆ ಕ್ರೀಡಾಪಟುಗಳಿಗೆ ತರಬೇತಿ ನಿರಂತರವಾಗಿ ಬೇಕಾಗುತ್ತದೆ. ಹೀಗಿರುವಾಗ ಎಲ್ಲರೂ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಪ್ರಾಯೋಜಕತ್ವ ನೀಡಲು ಯಾರೂ ಮುಂದಾಗುತ್ತಿಲ್ಲ. ಇದು ಕ್ರೀಡಾಪಟುಗಳಿಗೆ ಸಂಕಷ್ಟ ತಂದೊಡ್ಡಿದೆ.

  Published by:Vinay Bhat
  First published: