INDW vs SAW: ಸ್ಟಾರ್ ಆಟಗಾರ್ತಿಯ ಅನುಪಸ್ಥಿಯಲ್ಲಿ ಭಾರತದ ವನಿತೆಯರಿಗೆ ಮೊದಲ ಏಕದಿನ!

ಬೆಳಗ್ಗೆ 9 ಗಂಟೆಗೆ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ ಆರಂಭವಾಗಲಿದ್ದು, ಭಾರತ ತಂಡವನ್ನು ಮಿಥಾಲಿ ರಾಜ್ ಮುನ್ನಡೆಸುತ್ತಿದ್ದಾರೆ.

Vinay Bhat | news18-kannada
Updated:October 9, 2019, 8:54 AM IST
INDW vs SAW: ಸ್ಟಾರ್ ಆಟಗಾರ್ತಿಯ ಅನುಪಸ್ಥಿಯಲ್ಲಿ ಭಾರತದ ವನಿತೆಯರಿಗೆ ಮೊದಲ ಏಕದಿನ!
ಸ್ಮೃತಿ ಮಂದಾನ
  • Share this:
ಬೆಂಗಳೂರು (ಅ. 09): ಪ್ರವಾಸಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಟಿ-20 ಸರಣಿ ವಶ ಪಡಿಸಿಕೊಂಡ ಭಾರತದ ಮಹಿಳೆಯರು ಏಕದಿನ ಸರಣಿಗೆ ಸಜ್ಜಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಇಂದು ವಡೊದರಾದಲ್ಲಿ ಮೊದಲ ಪಂದ್ಯ ನಡೆಯಲಿದೆ.

ಆದರೆ, ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಹೊರಗುಳಿದಿದ್ದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಭ್ಯಾಸ ನಡೆಸುತ್ತಿರುವ ವೇಳೆ ಸ್ಮೃತಿ ಅವರ ಬಲಗಾಲಿನ ಹೆಬ್ಬಟ್ಟಿಗೆ ಗಾಯವಾಗಿದೆ. ಹೀಗಾಗಿ ಮೂರು ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದು ಭಾರತಕ್ಕೆ ಹಿನ್ನಡೆಯಾಗಿದೆ.

ಆಫ್ರಿಕಾ ಸರಣಿ ಮುಗಿದ ಬೆನ್ನಲ್ಲೆ ಭಾರತದ ವನಿತೆಯರು ವೆಸ್ಟ್​ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕೆ ಸ್ಮೃತಿ ಲಭ್ಯರಿದ್ದಾರೆಯೆ ಎಂಬ ಬಗ್ಗೆ ಯಾವುದೆ ಮಾಹಿತಿ ಹೊರಬಂದಿಲ್ಲ.

ದಸರ ಹಬ್ಬಕ್ಕೆ ಕ್ರೀಡಾಪಟುಗಳಿಂದ ಶುಭಾಶಯ; ಮಗಳಿಂದ ಆಶೀರ್ವಾದ ಪಡೆದ ಗಂಭೀರ್!

ಬೆಳಗ್ಗೆ 9 ಗಂಟೆಗೆ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ ಆರಂಭವಾಗಲಿದ್ದು, ಭಾರತ ತಂಡವನ್ನು ಮಿಥಾಲಿ ರಾಜ್ ಮುನ್ನಡೆಸುತ್ತಿದ್ದಾರೆ. ಹರ್ಮನ್​ಪ್ರೀತ್ ಕೌರ್, ಜೆಮಿಮಾ ರಾಡ್ರಿಗಸ್ ಮತ್ತು ಕರ್ನಾಟಕದ ವೇದಾ ಕೃಷ್ಣಮೂರ್ತಿ ಅವರು ಬ್ಯಾಟಿಂಗ್​ನಲ್ಲಿ ಭಾರತದ ಬೆನ್ನೆಲುಬಾಗಿದ್ದಾರೆ.

ಇನ್ನು ಪೂನಮ್ ರಾವುತ್, ತಾನಿಯಾ ಭಾಟಿಯಾ, ದಯಾಳನ್ ಹೇಮಲತಾ ಅವರ ಮೇಲೂ  ಸಾಕಷ್ಟು ಭರವಸೆ ಇಡಲಾಗಿದೆ. ಬೌಲಿಂಗ್​ನಲ್ಲಿ ಅನುಭವಿ ಜೂಲನ್ ಗೋಸ್ವಾಮಿ ಅವರ ಬಲ ಭಾರತಕ್ಕಿದೆ. ಕನ್ನಡತಿ ರಾಜೇಶ್ವರಿ ಗಾಯಕವಾಡ, ಪೂನಮ್ ಯಾದವ್ ಮತ್ತು ಏಕ್ತಾ ಬಿಷ್ಠ್ ಪರಿಣಾಮಕಾರಿ ದಾಳಿ ನಡೆಸಿ  ಎದುರಾಳಿಗೆ ಶಾಖ್ ಕೊಡಬಲ್ಲರು.

ಇತ್ತ ಆಫ್ರಿಕಾದ ವನಿತೆಯರು ಟಿ-20 ಸರಣಿಯಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಕಾದುಕುಳಿತಿದೆ. ಕನಿಷ್ಠ ಏಕದಿನ ಸರಣಿಯನ್ನಾದರು ವಶ ಪಡಿಸಿಕೊಳ್ಳಬೇಕೆಂದು ಸುನೆ ಲುಸ್ ಪಡೆ ಸನ್ನದ್ದವಾಗಿದೆ.
First published: October 9, 2019, 7:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading