GT20 Canada 2019: ರಸೆಲ್ ಸ್ಫೋಟಕ ಆಟ ವ್ಯರ್ಥ; ಗ್ಲೋಬಲ್​ ಟಿ-20 ಕಿರೀಟ ತೊಟ್ಟ ವಿನ್ನಿಂಗ್ ಹಾಕ್ಸ್​

ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಓವರ್ ನಡೆಸಲಾಯಿತು. ಮೊದಲ ಬ್ಯಾಟ್ ಮಾಡಿದ ನೈಟ್ಟ್​ ತಂಡ ಕೇವಲ 9 ರನ್​ಗಳನ್ನಷ್ಟೆ ಕಲೆಹಾಕಿತು. 10 ರನ್​ಗಳನ್ನು ಹಾಕ್ಸ್​ ತಂಡ 4 ಎಸೆತಗಳಲ್ಲೇ ಹೊಡೆದು ಚಾಂಪಿಯನ್ ಆಗಿ ಹೊರಹೊಮ್ಮತು.

Vinay Bhat | news18
Updated:August 12, 2019, 1:29 PM IST
GT20 Canada 2019: ರಸೆಲ್ ಸ್ಫೋಟಕ ಆಟ ವ್ಯರ್ಥ; ಗ್ಲೋಬಲ್​ ಟಿ-20 ಕಿರೀಟ ತೊಟ್ಟ ವಿನ್ನಿಂಗ್ ಹಾಕ್ಸ್​
ಸಂಭ್ರಮದಲ್ಲಿ ವಿನ್ನಿಂಗ್ ಹಾಕ್ಸ್
  • News18
  • Last Updated: August 12, 2019, 1:29 PM IST
  • Share this:
ಬೆಂಗಳೂರು (ಆ. 12): 18 ದಿನಗಳ ಕಾಲ ನಡೆದ ಕೆನಡಾ ಗ್ಲೋಬಲ್ ಟಿ-20 ಲೀಗ್​​ಗೆ ಕೊನೆಗೂ ತೆರೆಬಿದ್ದಿದೆ. ಯುವರಾಜ್ ಸಿಂಗ್, ಕ್ರಿಸ್ ಗೇಲ್, ಶೋಯೆಬ್ ಮಲಿಕ್, ಶಾಹಿದ್ ಅಫ್ರಿದಿಯಂತಹ ಸ್ಟಾರ್ ಆಟಗಾರರು ಈ ಲೀಗ್​ನಲ್ಲಿ ಪಾಲ್ಗೊಂಡಿದ್ದರಿಂದ ಕಳೆದ ಬಾರಿಗಿಂತ ಈಬಾರಿ ಹೆಚ್ಚು ಆಕರ್ಷಣೆಹೊಂದಿತ್ತು.

ಅಂತಿಮ ಫೈನಲ್​ ಪಂದ್ಯದಲ್ಲಿ ರಿಯಾದ್​ ಎಮ್ರಿಟ್​ ನಾಯಕತ್ವದ ವಿನ್ನಿಂಗ್ ಹಾಕ್ಸ್​ ತಂಡ ರೋಚಕ ಸೂಪರ್​ ಓವರ್​ನಲ್ಲಿ ಮಲಿಕ್​ ನೇತೃತ್ವದ ವಾಂಕೋವರ್​ ನೈಟ್ಸ್​ ತಂಡವನ್ನು ಸೋಲಿಸಿ ಗ್ಲೋಬಲ್ ಟಿ-20 ಕೆನಡಾ 2019ರ ಚಾಂಪಿಯನ್​ ಆಗಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಹಾಕ್ಸ್​ ತಂಡ ಶಾಹಿಮ್ ಅನ್ವರ್​ರ 90, ಕ್ರಿಸ್ ಲಿನ್​ರ 37 ಹಾಗೂ ಜೆಪಿ ಡುಮಿನಿ ಅವರ 33 ರನ್​ಗಳ ನೆರವಿನಿಂದ 20 ಓವರ್​ಗೆ 8 ವಿಕೆಟ್ ಕಳೆದುಕೊಂಡು 192 ರನ್ ಬಾರಿಸಿತು. ವಾಂಕೋವರ್ ಪರ ಆ್ಯಂಡ್ರೊ ರಸೆಲ್ 4 ವಿಕೆಟ್ ಕಿತ್ತರು.

 ಟೀಂ ಇಂಡಿಯಾ ಮಧ್ಯಮ ಕ್ರಮಾಂಕಕ್ಕೆ ಸಿಕ್ಕ ಹೊಸ ಆಟಗಾರ; ಐಯರ್ ಮೇಲೆ ಹೆಚ್ಚಿದ ನಿರೀಕ್ಷೆ

193 ರನ್​ಗಳ ಕಠಿಣ ಗುರಿ ಬೆನ್ನಟ್ಟಿದ ವಾಂಕೋವರ್ ಕೂಡ ನಾಯಕ ಮಲಿಕ್​ರ 64 ರನ್ ಹಾಗೂ ರಸೆಲ್​ 20 ಎಸೆತಗಳಲ್ಲಿ 46 ರನ್​ ಸಿಡಿಸಿದ ಪರಿಣಾಮ 20 ಓವರ್​ಗೆ 6 ವಿಕೆಟ್ ಕಳೆದುಕೊಂಡು 192 ರನ್​ಗಳನ್ನೇ ಗಳಿಸಿತು.

ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಓವರ್ ನಡೆಸಲಾಯಿತು. ಮೊದಲ ಬ್ಯಾಟ್ ಮಾಡಿದ ನೈಟ್ಟ್​ ತಂಡ ಕೇವಲ 9 ರನ್​ಗಳನ್ನಷ್ಟೆ ಕಲೆಹಾಕಿತು. 10 ರನ್​ಗಳನ್ನು ಹಾಕ್ಸ್​ ತಂಡ 4 ಎಸೆತಗಳಲ್ಲೇ ಹೊಡೆದು ಚಾಂಪಿಯನ್ ಆಗಿ ಹೊರಹೊಮ್ಮತು.

ಟೂರ್ನಿಯುದ್ದಕ್ಕು ಅತ್ಯುತ್ತಮ ಪ್ರದರ್ಶನ ನೀಡಿದ ಜೆಪಿ ಡುಮಿನಿ ಸರಣಿಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, 90 ರನ್ ಸಿಡಿಸಿದ ಶಾಹಿಮ್ ಅನ್ವರ್​ ಪಂದ್ಯಶ್ರೇಷ್ಠ ತಮ್ಮದಾಗಿಸಿದರು.

First published:August 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...