ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ. ಅತ್ತ ಭರ್ಜರಿ ಜಯ ದಾಖಲಿಸಿರುವ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿದೆ. ಇನ್ನು ಈಗಾಗಲೇ ಫೈನಲ್ಗೆ ಅರ್ಹತೆ ಪಡೆದುಕೊಂಡಿರುವ ನ್ಯೂಜಿಲೆಂಡ್ ದ್ವಿತೀಯ ಸ್ಥಾನದಲ್ಲಿದೆ.
ಇನ್ನು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲಿರುವ ತಂಡಗಳ ಪೈಕಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳಿದ್ದು, ಉಭಯ ತಂಡಗಳ ಪ್ರಸ್ತುತ ಟೆಸ್ಟ್ ಸರಣಿಯ ಫಲಿತಾಂಶದಿಂದ ಇದು ನಿರ್ಧಾರವಾಗಲಿದೆ. ಈಗಾಗಲೇ 4 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿರುವ ಇಂಗ್ಲೆಂಡ್ ಮುಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ಆಸೆಯನ್ನು ಜೀವಂತವಿರಿಸುವ ವಿಶ್ವಾಸದಲ್ಲಿದೆ.
ಆದರೆ ಮುಂದಿನ ಪಂದ್ಯವನ್ನು ಸೋಲದಂತೆ ನೋಡಿಕೊಳ್ಳಬೇಕಾದ ಒತ್ತಡ ಟೀಮ್ ಇಂಡಿಯಾ ಮೇಲಿದೆ. ಏಕೆಂದರೆ ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪಡೆ ಕನಿಷ್ಠ 2 ಪಂದ್ಯಗಳನ್ನು ಗೆದ್ದರೆ ಫೈನಲ್ ಪ್ರವೇಶಿಸಲಿದೆ. ಆದರೆ 2 ಪಂದ್ಯಗಳಲ್ಲಿ ಸೋಲಬಾರದು. ಅಂದರೆ ಇಂಗ್ಲೆಂಡ್ ವಿರುದ್ಧ 4-0, ಅಥವಾ 3-0, ಅಥವಾ 3-1, ಅಥವಾ 2-0, ಅಥವಾ 2-1 ಫಲಿತಾಂಶದೊಂದಿಗೆ ಸರಣಿ ಜಯಿಸಿದರೆ ಮಾತ್ರ ಅರ್ಹತೆ ಪಡೆಯಬಹುದು.
ಈಗಾಗಲೇ ಇಂಗ್ಲೆಂಡ್ ವಿರುದ್ಧ 1 ಪಂದ್ಯವನ್ನು ಸೋತಿರುವ ಕೊಹ್ಲಿ ಪಡೆ ಈ ಸರಣಿಯನ್ನು ಇನ್ನು 3-1 ಅಥವಾ 2-1 ಫಲಿತಾಂಶದೊಂದಿಗೆ ಜಯಗಳಿಸಿ ಅರ್ಹತೆ ಪಡೆಯಬೇಕಿದೆ. ಹೀಗಾಗಿ ಚೆನ್ನೈನಲ್ಲೇ ನಡೆಯಲಿರುವ 2ನೇ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಸೋತರೆ ಟೀಮ್ ಇಂಡಿಯಾದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸು ಬಹುತೇಕ ಕಮರಲಿದೆ.
A huge win over India in the first Test has propelled England to the top of the ICC World Test Championship standings 👀#WTC21 pic.twitter.com/8AaC8XMrjr
— ICC (@ICC) February 9, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ