ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್​ಗೆ ವಿರಾಟ್ ಕೊಹ್ಲಿ ಅನುಮಾನ!

ಆಗಸ್ಟ್​ 22 ರಂದು ಭಾರತ ಅಂಟಿಗಾದಲ್ಲಿ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್​ ಪಂದ್ಯವನ್ನು ಆಡಲಿದೆ. ಇದಕ್ಕೂ ಮೊದಲು ಆ. 17 ರಂದು ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.

Vinay Bhat | news18
Updated:August 15, 2019, 4:17 PM IST
ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್​ಗೆ ವಿರಾಟ್ ಕೊಹ್ಲಿ ಅನುಮಾನ!
ವಿರಾಟ್ ಕೊಹ್ಲಿ
  • News18
  • Last Updated: August 15, 2019, 4:17 PM IST
  • Share this:
ಬೆಂಗಳೂರು (ಆ. 15): ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್​ನಲ್ಲಿ ಭರ್ಜರಿ ಶತಕ ಸಿಡಿಸಿ ಭಾರತದ ಗೆಲುವಿಗೆ ಕಾರಣವಾದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್​ ಸರಣಿಯಲ್ಲಿ ಆಡುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ.

ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುವಾಗ 27ನೇ ಓವರ್​​ನ ಕೇಮರ್ ರೋಚ್ ಬೌಲಿಂಗ್​ನಲ್ಲಿ ಚೆಂಡು ನೇರವಾಗಿ ಕೊಹ್ಲಿ ಬಲಗೈ ಹೆಬ್ಬರಳಿಗೆ ಬಡಿದಿದೆ. ತೀವ್ರ ಗಾಯಕ್ಕೆ ತುತ್ತಾದ ಕಾರಣ ಕೊಹ್ಲಿ ತುಂಬಾ ನೋವು ಅನುಭವಿಸಿದರು. ನಂತರ ಫಿಜಿಯೋ ಮೈದಾನಕ್ಕೆ ಆಗಮಿಸಿ ಕೊಹ್ಲಿಗೆ ಪ್ರಥಮ ಚಿಕಿತ್ಸೆ ನೀಡಿದರು.

ಆಗಸ್ಟ್​ 22 ರಂದು ಭಾರತ ಅಂಟಿಗಾದಲ್ಲಿ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್​ ಪಂದ್ಯವನ್ನು ಆಡಲಿದೆ. ಇದಕ್ಕೂ ಮೊದಲು ಆ. 17 ರಂದು ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.

ಪಂತ್​ ಕ್ರೀಸ್​ಗೆ ಬರುವುದೇ ಔಟ್ ಆಗಲು; ಸೊನ್ನೆ ಸುತ್ತಿದ ರಿಷಭ್​​ಗೆ ಅಭಿಮಾನಿಗಳಿಂದ ಕ್ಲಾಸ್

ಸದ್ಯ ಕೊಹ್ಲಿಗಾಗಿರುವ ಗಾಯದ ಪ್ರಮಾಣ ಎಷ್ಟು ಎಂಬುದು ತಿಳಿದುಬಂದಿಲ್ಲ. ಬಲಗೈ ಹೆಬ್ಬೆರಳನ್ನು ಸ್ಕ್ಯಾನ್ ಮಾಡಲಾಗಿದ್ದು, ವರದಿ ಬಂದ ನಂತರ ಮೊದಲ ಟೆಸ್ಟ್​ನಲ್ಲಿ ಕೊಹ್ಲಿ ಕಣಕ್ಕಿಳಿಯಲಿದ್ದಾರ ಎಂಬುದು ತಿಳಿದು ಬರಬೇಕಿದೆ.

ನಿನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 99 ಎಸೆತಗಳಲ್ಲಿ 14 ಬೌಂಡರಿಯೊಂದಿಗೆ ಅಜೇಯ 114 ರನ್ ಬಾರಿಸಿದರು. ಅಲ್ಲದೆ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಬಾಜಿಕೊಂಡಿದ್ದರು.

First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...