ನಾನೇ ನಿಮ್ಮನ್ನ ಮಾನಸಿಕ ತಜ್ಞರ ಬಳಿ ಕರೆದೊಯ್ಯುವೆ; ಅಫ್ರಿದಿ ಮಾತುಗಳಿಗೆ ಗಂಭೀರ್ ತಿರುಗೇಟು​

ಬೂಮ್ ಬೂಮ್ ಎಂದೇ ಖ್ಯಾತಿಯ ಅಫ್ರಿದಿ ನಿವೃತ್ತಿ ಬಳಿಕ ಇತ್ತೀಚೆಗಷ್ಟೇ ತನ್ನ ಆತ್ಮಚರಿತ್ರೆಯನ್ನ ತೆರೆದಿಟ್ಟರು. ಗೇಮ್ ಚೇಂಜರ್ ಎಂಬ ಹೆಸರಿನ ಅಫ್ರಿದಿ ಆಟೋಬಯೋಗ್ರಫಿ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

Vinay Bhat | news18
Updated:May 5, 2019, 4:03 PM IST
ನಾನೇ ನಿಮ್ಮನ್ನ ಮಾನಸಿಕ ತಜ್ಞರ ಬಳಿ ಕರೆದೊಯ್ಯುವೆ; ಅಫ್ರಿದಿ ಮಾತುಗಳಿಗೆ ಗಂಭೀರ್ ತಿರುಗೇಟು​
ಆದರೆ ಗಂಭೀರ್​ ತನ್ನನ್ನು ಡಾನ್ ಬ್ರಾಡ್ಮನ್ ಮತ್ತು ಜೇಮ್ಸ್ ಬಾಂಡ್ ಎಂದು ಪರಿಗಣಿಸುತ್ತಾನೆ. ಅಲ್ಲದೆ ಆತನಿಗೆ ಹೇಗೆ ವರ್ತಿಸಬೇಕೆಂದೇ ಗೊತ್ತಿಲ್ಲ. ಅವನಿಗೆ ವ್ಯಕ್ತಿತ್ವ ಎಂಬುದಿಲ್ಲ. ನಾವನಲ್ಲಿರುವುದು ಬರೀ ನಾಟಕಗಳು ಮಾತ್ರ ಎಂದು ಅಫ್ರಿದಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
  • News18
  • Last Updated: May 5, 2019, 4:03 PM IST
  • Share this:
ಬೆಂಗಳೂರು (ಮೇ. 05): ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಾಹಿದ್​ ಅಫ್ರಿದಿ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್ ನಡುವಿನ ವಾಗ್ವಾದ ತಾರಕಕ್ಕೇರಿದೆ. ಅಫ್ರಿದಿ ತನ್ನ ಆತ್ಮಚರಿತ್ರೆಯಲ್ಲಿ ಮಾಡಿದ್ದ ಟೀಕೆಗಳಿಗೆ ​ಗಂಭೀರ್​ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ಅಫ್ರಿದಿ ಪಾಕಿಸ್ತಾನ ಕ್ರಿಕೆಟ್​​ನ ಮಾಜಿ ಸ್ಟಾರ್ ಆಟಗಾರ. ತಾನಿದ್ದಷ್ಟು ಕಾಲ ಎದುರಾಳಿ ಬೌಲರ್​ಗಳನ್ನು ಕಾಡಿದ್ದರು. ಬೂಮ್ ಬೂಮ್ ಎಂದೇ ಖ್ಯಾತಿಯ ಅಫ್ರಿದಿ ನಿವೃತ್ತಿ ಬಳಿಕ ಇತ್ತೀಚೆಗಷ್ಟೇ ತನ್ನ ಆತ್ಮಚರಿತ್ರೆಯನ್ನ ತೆರೆದಿಟ್ಟರು. 'ಗೇಮ್ ಚೇಂಜರ್' ಎಂಬ ಹೆಸರಿನ ಅಫ್ರಿದಿ ಆಟೋಬಯೋಗ್ರಫಿ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ತನ್ನ ವಯಸ್ಸಿನ ಕುರಿತು ಇದ್ದ ಅನೇಕ ಪ್ರಶ್ನಗಳಿಗೆ ಉತ್ತರಿಸಿರುವ ಅಫ್ರಿದಿ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸದ್ಯ ಬಿಜೆಪಿಯ ದೆಹಲಿಯ ಲೋಕಸಭಾ ಚುನಾವಣಾ ಅಭ್ಯರ್ಥಿ ಗಂಭೀರ್ ವಿರುದ್ಧ ಅಸಹ್ಯಕರ ಮಾತುಗಳನ್ನು ಆಡಿದ್ದಾರೆ. ಗಂಭೀರ್ ಓರ್ವ ಜಗಳಗಂಟ. ವ್ಯಕ್ತಿತ್ವವೇ ಇಲ್ಲದೆ ವ್ಯಕ್ತಿ. ಕ್ರಿಕೆಟ್​ನಲ್ಲಿ ಪ್ರೊಫೆಷನ್​​ ತುಂಬಾ ಮುಖ್ಯ ಆದರೆ ಅದು ಗಂಭೀರ್​ಗಿಲ್ಲ ಎಂದು ಖಾರವಾಗಿ ನುಡಿದಿದ್ದಾರೆ.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಗಂಭೀರ್ ಕುರಿತು ತನ್ನ ಆತ್ಮಚರಿತ್ರೆಯಲ್ಲಿ ಬರೆದಿಕೊಂಡಿದ್ದ ಅಫ್ರಿದಿ,  ಗೌತಮ್ ಗಂಭೀರ್ ಯಾವುದೇ ದೊಡ್ಡ ಸಾಧನೆ ಮಾಡದಿದ್ದರೂ ಡಾನ್ ಬ್ರಾಡ್ಮನ್, ಜೇಮ್ಸ್ ಬಾಂಡ್ ರೀತಿಯಲ್ಲಿ ದೊಡ್ಡ ಸಾಧನೆ ಮಾಡಿರುವ ರೀತಿ ವರ್ತಿಸುತ್ತಾರೆ. ಗಂಭೀರ್ ರಂತಹ ವ್ಯಕ್ತಿಗಳನ್ನ ಕರಾಚಿಯಲ್ಲಿ ಕೋಪಿಷ್ಠ ಎಂದು ಕರೆಯುತ್ತಾರೆ.  ನಾನು ಉತ್ತಮ ವ್ಯಕ್ತಿಗಳನ್ನ ಇಷ್ಟಪಡುತ್ತೇನೆ. ಆದರೆ ಆಕ್ರಮಣಾಕಾರಿ ಅಥವಾ ಪೈಪೋಟಿಗಾರರನ್ನ ಇಷ್ಟಪಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: IPL 2019 Live Score, KXIP vs CSK: ಟಾಸ್​ ಗೆದ್ದ ಪಂಜಾಬ್: ಫೀಲ್ಡಿಂಗ್ ಆಯ್ಕೆ

ಹೌದು, ಅಫ್ರಿದಿ ತಮ್ಮ ಆತ್ಮಚರಿತ್ರೆಯಲ್ಲಿ 2007ರಲ್ಲಿ ಕಾನ್ಪುರದಲ್ಲಿ ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಕದಿನ ಸರಣಿ ಸಂದರ್ಭದಲ್ಲಿ ನಡೆದಿದ್ದ ಗಲಾಟೆ ನೆನಪಿಸಿಕೊಂಡಿದ್ದಾರೆ.​​

ಅಂದು ಏಷ್ಯಾ ಕಪ್ ನಲ್ಲಿ ಗಂಭೀರ್ ಸಿಂಗಲ್ ರನ್ ತೆಗೆದು ನನ್ನ ಬಳಿ ಓಡಿ ಬರುತ್ತಿದ್ದಾಗ ಈ ಜಗಳಕ್ಕೆ ನಾನೇ ಮಂಗಳ ಹಾಡಬೇಕು ಎಂದುಕೊಂಡಿದ್ದೆ. ನಮ್ಮಿಬ್ಬರ ನಡುವೆ ಜಗಳ ಯಾವ ಮಟ್ಟಿಗೆ ತಲುಪಿತ್ತು ಎಂದರೆ ಇಬ್ಬರೂ ತಮ್ಮ ತಮ್ಮ ಮನೆಯ ಹೆಣ್ಣುಮಕ್ಕಳ ಹೆಸರೆತ್ತಿ ಹೀಯಾಳಿಸಿದ್ದೆವು. ನನಗೆ ಇಂತಹ ಆಕ್ರಮಣಕಾರಿ ಸ್ವಭಾವದವರೆಂದರೆ ಇಷ್ಟ. ಆದರೆ ಗಂಭೀರ್ ಆಕ್ರಮಣಕಾರಿ ಅಲ್ಲದೆ, ಋಣಾತ್ಮಕ ವ್ಯಕ್ತಿತ್ವದವರು. ಇಂತವರು ನನಗೆ ಇಷ್ಟವಾಗಲ್ಲ.
ಶಾಹಿದ್ ಅಫ್ರಿದಿ, ಪಾಕಿಸ್ತಾನ ಮಾಜಿ ಕ್ರಿಕೆಟಿಗ


ಹೀಗೆ ಅಫ್ರಿದಿ ಗಂಭೀರ್ ವಿರುದ್ಧ ತನ್ನ ಆತ್ಮಚರಿತ್ರೆಯಲ್ಲಿ ಟೀಕೆಗಳ ಮಳೆಯನ್ನೇ ಸುರಿಸಿದ್ದಾರೆ. ಈ ಟೀಕೆಗಳು ಭಾರೀ ವೈರಲ್ ಆಗುತ್ತಿದ್ದಂತೆ ಗಂಭೀರ್ ಕೂಡ ಗುಡುಗಿದ್ದಾರೆ.

ಅಫ್ರಿದಿಯ ಒಂದೊಂದು ಟೀಕೆಗಳಿಗೆ ಉತ್ತರಿಸಿದ ಗೌತಮ್​ ಗಂಭೀರ್ ಶಾರ್ಟ್​ ಆಗಿ ನಿನೊಬ್ಬ ಹುಚ್ಚನಾಗಿದ್ದು, ವೈದ್ಯರ ಅವಶ್ಯಕತೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ಶಾಹಿದ್ ಅಫ್ರಿದಿ, ನೀವೊಬ್ಬ ಹಾಸ್ಯಾಸ್ಪದ ವ್ಯಕ್ತಿ! ಹೇಗಿದ್ರೂ ನಾವು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಪಾಕಿಸ್ತಾನದವರಿಗೆ ವೀಸಾಗಳನ್ನು ನೀಡುತ್ತಿದ್ದೇವೆ. ನಾನು ವೈಯಕ್ತಿಕವಾಗಿ ನಿಮ್ಮನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗುವೆ.


-ಗೌತಮ್​ ಗಂಭೀರ್​​, ಟೀಂ ಇಂಡಿಯಾ ಮಾಜಿ ಆಟಗಾರ


 ಹೀಗೆ ಅಫ್ರಿದಿ ಮಾತಿಗೆ ಸರಿಯಾದ ತಿರುಗೇಟು ಕೊಟ್ಟಿರುವ ಗಂಭೀರ್, ಅಫ್ರಿದಿಯನ್ನ ಭಾರತಕ್ಕೆ ಆಹ್ವಾನಿಸಿದ್ದಾರೆ. ಅಲ್ಲದೆ ತಾನೇ ಸ್ವತಃ ಮನೋವೈದ್ಯರ ಬಳಿ ಕರೆದುಕೊಂಡು ಹೋಗುತ್ತೇನೆಂದು ಹೇಳಿದ್ದಾರೆ.
First published:May 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading