ಅಕ್ಟೋಬರ್ 24ಕ್ಕೆ ನಿರ್ಧಾರವಾಗಲಿದೆ ಧೋನಿ ಭವಿಷ್ಯ; ಗಂಗೂಲಿಯಿಂದ ಅಚ್ಚರಿಯ ಹೇಳಿಕೆ!

ಅಕ್ಟೋಬರ್ 24 ರಂದು ವಿಕೆಟ್ ಕೀಪರ್, ಬ್ಯಾಟ್ಸ್​ಮನ್​ ಎಂಎಸ್ ಧೋನಿ ಭವಿಷ್ಯದ ಕುರಿತು ಆಯ್ಕೆ ಸಮಿತಿ ಜೊತೆ ಮಾತನಾಡಲಿದ್ದೇನೆ ಎಂದು ಗಂಗೂಲಿ ಹೇಳಿದ್ದಾರೆ.

Vinay Bhat | news18-kannada
Updated:October 17, 2019, 8:38 AM IST
ಅಕ್ಟೋಬರ್ 24ಕ್ಕೆ ನಿರ್ಧಾರವಾಗಲಿದೆ ಧೋನಿ ಭವಿಷ್ಯ; ಗಂಗೂಲಿಯಿಂದ ಅಚ್ಚರಿಯ ಹೇಳಿಕೆ!
ಇನ್ನು ಧೋನಿ ವಿಚಾರವಾಗಿ ಮಾತನಾಡಿದ ಗಂಗೂಲಿ, ನಾವು ಎಲ್ಲ ನಿರ್ಧಾರವನ್ನು ಧೋನಿಗೆ ಬಿಟ್ಟಿದ್ದೇವೆ. ಅವರ ವೈಯಕ್ತಿಕ ನಿರ್ಣಯ. ನನಗೆ ಗೊತ್ತಿಲ್ಲ. ನಾನು ಅವರ ಜತೆ ಮಾತುಕತೆ ನಡೆಸಿಲ್ಲ ಎಂದು ಗಂಗೂಲಿ ಅಭಿಪ್ರಾಯಪಟ್ಟರು.
  • Share this:
ಬೆಂಗಳೂರು (ಅ. 17): ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ​ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಅಕ್ಟೋಬರ್ 23 ರಂದು ಬಿಸಿಸಿಐ ಚುನಾವಣೆ ಬಳಿಕ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿಲಿದ್ದಾರೆ. ಅಧಿಕಾರ ಸ್ವೀಕರಿಸಿದ ಮರುದಿನವೇ ಗಂಗೂಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಅಕ್ಟೋಬರ್ 24 ರಂದು ವಿಕೆಟ್ ಕೀಪರ್, ಬ್ಯಾಟ್ಸ್​ಮನ್​ ಎಂಎಸ್ ಧೋನಿ ಭವಿಷ್ಯದ ಕುರಿತು ಆಯ್ಕೆ ಸಮಿತಿ ಜೊತೆ ಮಾತನಾಡಲಿದ್ದೇನೆ ಎಂದು ಗಂಗೂಲಿ ಹೇಳಿದ್ದಾರೆ.

2019 ಏಕದಿನ ವಿಶ್ವಕಪ್ ಬಳಿಕ ಧೋನಿ ಮೈದಾನಕ್ಕಿಳಿಯಲಿಲ್ಲ. ಈ ನಡುವೆ ಕಾಶ್ಮೀರದಲ್ಲಿ ಸೈನಿಕರ ಜೊತೆ ಕಾರ್ಯನಿವರ್ಹಿಸಿ ತಂಡ ಸೇರಿಕೊಳ್ಳುತ್ತಾರೆಂದು ಹೇಳಲಾಗಿತ್ತು. ಅದಕೂಡ ಆಗಿಲ್ಲ. ದಿಢೀರ್ ನಿವೃತ್ತಿ ಘೋಷಿಸಲಿದ್ದಾರೆಂಬ ಸುದ್ದಿ ಹರಿದಾಡಿತು. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದರು. ಬಳಿಕ ಧೋನಿ ಇನ್ನೊಂದಿಷ್ಟು ದಿನ ವಿಶ್ರಾಂತಿ ಬಯಸಿದ್ದಾರೆ ಎಂದು ಹೇಳಲಾಗಿತ್ತು.

ಮತ್ತೆ ಬ್ಯಾಟ್ ಬೀಸಲಿದ್ದಾರೆ ಕ್ರಿಕೆಟ್​ ದಿಗ್ಗಜರು..!

"ಈ ಎಲ್ಲಾ ವಿಚಾರವಾಗಿ ಅ. 24 ರಂದು ಆಯ್ಕೆ ಸಮಿತಿಯನ್ನು ಭೇಟಿ ಮಾಡಿ ಧೋನಿ ಮುಂದಿನ ಭವಿಷ್ಯದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೇನೆ. ಬಳಿಕ ನನ್ನ ಅನಿಸಿಕೆಯನ್ನು ಅವರಿಗೆ ಹೇಳುತ್ತೇನೆ. ಜೊತೆಗೆ ಧೋನಿ ಬಯಕೆಯೂ ಏನು ಎಂಬ ಬಗ್ಗೆ ತಿಳಿದುಕೊಳ್ಳುತ್ತೇನೆ" ಎಂದು ದಾದಾ ತಿಳಿಸಿದ್ದಾರೆ.

ನವೆಂಬರ್ 3 ರಿಂದ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಭಾರತ ಸರಣಿಯನ್ನು ಆರಂಭಿಸಲಿದೆ. ಮೊದಲಿಗೆ ಮೂರು ಪಂದ್ಯಗಳ ಟಿ-20 ಸರಣಿ ಇದ್ದರೆ, ಬಳಿಕ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಬಾಂಗ್ಲಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಅ. 24 ರಂದು ಗಂಗೂಲಿ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಿದೆ.

First published: October 17, 2019, 8:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading