Happy Birthday Kapil Dev: ಭಾರತ ಮ್ಯಾಚ್ ಗೆದ್ದರೆ ಅದೇ ಕಪಿಲ್​ಗೆ ಗಿಫ್ಟ್ ಎಂದ ಗವಾಸ್ಕರ್

ಗವಾಸ್ಕರ್ ಅವರು 1983 ರಲ್ಲಿ ಭಾರತಕ್ಕೆ ಮೊದಲ ODI ವಿಶ್ವಕಪ್ ಟ್ರೋಫಿಯನ್ನು ಗೆದ್ದ ಕಪಿಲ್ಸ್ ಡೆವಿಲ್ಸ್ ತಂಡದ ಭಾಗವಾಗಿದ್ದರು

ಟೀಂ ಇಂಡಿಯಾ

ಟೀಂ ಇಂಡಿಯಾ

  • Share this:
ತಮ್ಮ ಮಾಜಿ ನಾಯಕ ಕಪಿಲ್ ದೇವ್ ಅವರ (Kapil Dev's birthday) ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ದಕ್ಷಿಣ ಆಫ್ರಿಕಾದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವಂತೆ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ( Sunil Gavaskar) ಭಾರತೀಯ ಕ್ರಿಕೆಟ್ ( Indian cricket) ತಂಡಕ್ಕೆ ಮನವಿ ಮಾಡಿದ್ದಾರೆ. ಕ್ರಿಕೆಟ್ ಜಗತ್ತಿನ ದಂತಕಥೆ ಕಪಿಲ್ ದೇವ್ 1983 ರ ವರ್ಲ್ಡ್ ಕಪ್ (World Cup) ವಿಜೇತ ನಾಯಕರಾಗಿ ಪ್ರಖ್ಯಾತರಾಗಿದ್ದು ಇಂದು ತಮ್ಮ 63 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ದಿನ ಜೊಹಾನ್ಸ್‌ಬರ್ಗ್(Johannesburg Test Series) ಟೆಸ್ಟ್ ಪಂದ್ಯಾವಳಿಯು 4 ನೇ ದಿನಕ್ಕೆ ಕಾಲಿಡುತ್ತಿದೆ. ಈ ಆಟದಲ್ಲಿ ಪುನರಾಗಮನವನ್ನು ನಡೆಸಲು ಭಾರತಕ್ಕೆ 4 ನೇ ದಿನವಾದ ಇಂದು ಕೆಲವು ಆರಂಭಿಕ ವಿಕೆಟ್‌ಗಳ ಅಗತ್ಯವಿದೆ.

ಅಂತಿಮ ಅವಕಾಶ
ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ (121 ಎಸೆತಗಳಲ್ಲಿ 46 ರನ್) ತಮ್ಮ ಬ್ಯಾಟಿಂಗ್ ಕೈಚಳಕವನ್ನು ಪ್ರದರ್ಶಿಸಿ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ, ಚೇತಾಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆಯವರ ಶತಕದ ಜೊತೆಯಾಟದಲ್ಲಿ ಭಾರತವು ನೀಡಿದ್ದ 240 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ನೆಲದಲ್ಲಿ ಭಾರತವು ಟೆಸ್ಟ್ ಸರಣಿ ಗೆಲುವನ್ನು ದಾಖಲಿಸದೇ ಇರುವುದರಿಂದ ಪ್ರಸ್ತುತ ನಡೆಯುತ್ತಿರುವ ಪ್ರವಾಸವು ತಂಡಕ್ಕೆ ‘ಅಂತಿಮ ಅವಕಾಶ’ವಾಗಿದೆ ಎನ್ನಲಾಗುತ್ತಿದೆ. ದಕ್ಷಿಣ ಆಫ್ರಿಕಾ ತಂಡ ಗೆಲುವಿಗೆ 122 ರನ್‌ಗಳ ಅಂತರದಲ್ಲಿದ್ದು, ಟೀಂ ಇಂಡಿಯಾ ಗೆಲುವಿಗೆ 8 ವಿಕೆಟ್‌ಗಳ ಅಗತ್ಯವಿದೆ.

ಇದನ್ನೂ ಓದಿ: ಕೊಹ್ಲಿ ವಿವಾದ ವಿಚಾರ: ಗವಾಸ್ಕರ್ ಸಲಹೆ; ಕೊನೆಗೂ ಮೌನಮುರಿದ ಸೌರವ್ ಗಂಗೂಲಿ

ಭಾರತ ಇಲ್ಲಿಯವರೆಗೆ ಈ ನೆಲದಲ್ಲಿ ಸರಣಿ ಗೆದ್ದಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಇಲ್ಲಿ ಭಾರತ ಕೆಲವೇ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2018 ರಲ್ಲಿ ಭಾರತ ತಂಡ ಇಲ್ಲಿಗೆ ಬಂದಿತ್ತು ಆ ಸಮಯದಲ್ಲಿ ಒನ್-ಡೇ ಸೀರೀಸ್‌ನಲ್ಲಿ ಗೆಲುವನ್ನು ಸಾಧಿಸಿದರೂ ಟೆಸ್ಟ್ ಸೀರೀಸ್‌ ಅನ್ನು 2-1 ರಲ್ಲಿ ಕಳೆದುಕೊಂಡರು. ಹಾಗಾಗಿ ಈ ಅವಕಾಶ ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕವಾದುದಾಗಿದೆ ಎಂಬುದಾಗಿ ಸೂಪರ್‌ಸ್ಪೋರ್ಟ್‌ನ ಮೂರನೇ ದಿನದ ಮಧ್ಯಂತರ ಅವಧಿಯಲ್ಲಿ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

ಕಪಿಲ್ ದೇವ್‌ ಹುಟ್ಟುಹಬ್ಬ
ಈ ಸಮಯದಲ್ಲಿ ಗವಾಸ್ಕರ್ ಕಪಿಲ್ ದೇವ್ ಅವರನ್ನು ಭಾರತದ ಶ್ರೇಷ್ಟ ಕ್ರಿಕೆಟ್ ಆಟಗಾರ ಎಂಬುದಾಗಿ ಹೊಗಳಿದ್ದು, ಕೆಎಲ್ ರಾಹುಲ್ ಹಾಗೂ ತಂಡವು ಪಂದ್ಯದಲ್ಲಿ ಐತಿಹಾಸಿಕ ಗೆಲುವನ್ನು ಸಾಧಿಸುವ ಮೂಲಕ ಕ್ರಿಕೆಟ್ ದಂತಕಥೆಯಾಗಿರುವ ಕಪಿಲ್ ದೇವ್‌ ಅವರಿಗೆ ಹುಟ್ಟುಹಬ್ಬದ ಕಾಣಿಕೆಯನ್ನು ಅರ್ಪಿಸಬಹುದು ಎಂಬುದಾಗಿ ತಿಳಿಸಿದ್ದು ತಂಡವು ಈ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದು ಮನವಿ ಮಾಡಿದ್ದಾರೆ.

ನಾನು ಎಣಿಸಿರುವಂತೆ ಎಲ್ಲವೂ ಸರಿಯಾಗಿದ್ದರೆ ಕಪಿಲ್ ಅವರ ಜನ್ಮದಿನದಂದು ಭಾರತ ತಂಡದ ಗೆಲುವು ಅತ್ಯುನ್ನತ ಉಡುಗೊರೆಯಾಗಲಿದೆ. ತಂಡದಲ್ಲಿ ಕಪಿಲ್ ಅವರ ಅಭಿಮಾನಿಗಳು ಅಂತೆಯೇ ಅವರನ್ನು ಸ್ಫೂರ್ತಿಯಾಗಿರಿಸಿಕೊಂಡವರು ಬಹಳಷ್ಟು ಆಟಗಾರರಿದ್ದಾರೆ. ಹಾಗಾಗಿ ಅವರೆಲ್ಲರ ಪರಿಶ್ರಮದಿಂದ ಪಂದ್ಯದಲ್ಲಿ ತಂಡ ಗೆದ್ದರೆ ಅವರ ಹುಟ್ಟುಹಬ್ಬಕ್ಕೆ ಇದಕ್ಕಿಂತ ಇನ್ನೊಂದು ಶ್ರೇಷ್ಟ ಉಡುಗೊರೆ ಬೇರೊಂದು ಇರಲಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಚಿತ್ರಕ್ಕೆ ಭರ್ಜರಿ ಪ್ರಶಂಸೆ
ಗವಾಸ್ಕರ್ ಅವರು 1983 ರಲ್ಲಿ ಭಾರತಕ್ಕೆ ಮೊದಲ ODI ವಿಶ್ವಕಪ್ ಟ್ರೋಫಿಯನ್ನು ಗೆದ್ದ ‘ಕಪಿಲ್ಸ್ ಡೆವಿಲ್ಸ್’ ತಂಡದ ಭಾಗವಾಗಿದ್ದರು. ಇತ್ತೀಚೆಗೆ ತಾನೇ ಕಬೀರ್ ಖಾನ್ ನಿರ್ದೇಶನದಲ್ಲಿ ಭಾರತದ ಐತಿಹಾಸಿಕ 1983 ರ ವಿಶ್ವಕಪ್ ಗೆಲುವಿನ ಸ್ಮರಣೀಯವಾಗಿ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲಾಯಿತು. ಕಪಿಲ್ ದೇವ್ ಪಾತ್ರದಲ್ಲಿ ರಣ್‌ವೀರ್ ಸಿಂಗ್ ನಟಿಸಿದ್ದು, ಕ್ರಿಕೆಟ್ ಪ್ರೇಮಿಗಳು ಸೇರಿ ಹೆಚ್ಚಿನ ಸಿನಿ ರಸಿಕರ ಮನವನ್ನು ಚಿತ್ರವನ್ನು ಗೆದ್ದುಕೊಂಡಿದ್ದು, ಭರ್ಜರಿ ಪ್ರಶಂಸೆಯನ್ನು ಚಲನಚಿತ್ರ ಪಡೆದುಕೊಂಡಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ನೀಡಿದ್ದ ಆವತ್ತಿನ ಒಂದು ಹೇಳಿಕೆ ಯಡವಟ್ಟಾಗಿರಬಹುದು: ಗವಾಸ್ಕರ್

ದಕ್ಷಿಣ ಆಫ್ರಿಕಾ ತಂಡವು ಗೆಲುವಿನ ಹೊಸಿಲಲ್ಲಿದ್ದು, ಅದಾಗ್ಯೂ ಸರಣಿಯಲ್ಲಿ ಆಟದ ದಿಕ್ಕನ್ನು ಬದಲಾಯಿಸುವ ಹಲವಾರು ನಿದರ್ಶನಗಳಿದ್ದು ಇದು ಭಾರತಕ್ಕೆ ಅವಕಾಶದ ಬಾಗಿಲನ್ನು ತೆರೆಯಲಿದೆ ಎಂಬ ವಿಶ್ವಾಸವಿದೆ
Published by:vanithasanjevani vanithasanjevani
First published: