ವಿಂಡೀಸ್ ವಿರುದ್ಧ ಮೊದಲ ಟಿ-20; 4ನೇ ಸ್ಥಾನಕ್ಕಾಗಿ ಕನ್ನಡಿಗರ ನಡುವೆಯೇ ಫೈಟ್?

ನಾಳಿನ ಪಂದ್ಯಕ್ಕೆ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಣಕ್ಕಿಳಿದರೆ, ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿ ಆಡಲಿದ್ದಾರೆ. ಆದರೆ 4, 5 ಸ್ಥಾನದಲ್ಲಿ ಯಾವ ಆಟಗಾರ ಆಡಲಿದ್ದಾನೆ ಎಂಬುದೆ ಕುತೂಹಲ.

Vinay Bhat | news18
Updated:August 2, 2019, 4:29 PM IST
ವಿಂಡೀಸ್ ವಿರುದ್ಧ ಮೊದಲ ಟಿ-20; 4ನೇ ಸ್ಥಾನಕ್ಕಾಗಿ ಕನ್ನಡಿಗರ ನಡುವೆಯೇ ಫೈಟ್?
ಟೀಂ ಇಂಡಿಯಾ
  • News18
  • Last Updated: August 2, 2019, 4:29 PM IST
  • Share this:
ಬೆಂಗಳೂರು (ಆ. 02): ಟೀಂ ಇಂಡಿಯಾ ವೆಸ್ಟ್​ ಇಂಡೀಸ್ ಪ್ರವಾಸ ನಾಳೆಯಿಂದ ಆರಂಭವಾಗಲಿದ್ದು, ಮೊದಲ ಟಿ-20 ಪಂದ್ಯವನ್ನಾಡಲಿದೆ. ಈಗಾಗಲೇ ಭಾರತೀಯ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದು, ಗೆಲುವಿನ ವಿಶ್ವಾಸದಲ್ಲಿದೆ.

ಮೂರು ಪಂದ್ಯಗಳ ಟಿ-20 ಸರಣಿಗೆ ಭಾರತ ತಂಡವನ್ನು ನೋಡುವುದಾದರೆ…

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್, ನವದೀಪ್ ಸೈನಿ.

ನಾಳಿನ ಪಂದ್ಯಕ್ಕೆ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಣಕ್ಕಿಳಿದರೆ, ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿ ಆಡಲಿದ್ದಾರೆ. ಆದರೆ 4, 5 ಸ್ಥಾನದಲ್ಲಿ ಯಾವ ಆಟಗಾರ ಆಡಲಿದ್ದಾನೆ ಎಂಬುದೆ ಕುತೂಹಲ. ಕನ್ನಡಿಗರಾದ ಕೆ ಎಲ್ ರಾಹುಲ್, ಹಾಗೂ ಮನೀಶ್ ಪಾಂಡೆ ಪ್ರಮುಖ ಅಸ್ತ್ರವಾದರೆ, ಶ್ರೇಯಸ್ ಐಯರ್ ಕೂಡ ರೇಸ್​​ನಲ್ಲಿದ್ದಾರೆ.

WI vs IND 2019: India's ideal middle-order for the first T20I
ಕೆ ಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ


Ashes 2019 ENG vs AUS: ಸ್ಮಿತ್ ಶತಕದ ನೆರವು; ಆಸೀಸ್ ಮೊದಲ ಇನ್ನಿಂಗ್ಸ್​ನಲ್ಲಿ 284ಕ್ಕೆ ಆಲೌಟ್

ಮನೀಶ್ ಪಾಂಡೆ ಸದ್ಯ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ದೇಶೀಯ ಪಂದ್ಯ ಸೇರಿದಂರೆ, ಭಾರತ ಎ ತಂಡದಲ್ಲಿ ಕಳೆದ ಒಂದು ವರ್ಷಗಳಿಂದ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಟಿ-20 ಪಂದ್ಯವಾಗಿದ್ದರಿಂದ ಪಾಂಡೆ ಉತ್ತಮ ಸ್ಟ್ರೈಕ್​ರೇಟ್ ಕೂಡ ಹೊಂದಿದ್ದಾರೆ. ಇತ್ತ ರಾಹುಲ್ ಕೂಡ ಉತ್ತಮ ಫಾರ್ಮ್​ನಲ್ಲಿ ಇದ್ದಾರೆಯಾದರು ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿರುವುದು ಮುಳುವಾದರು ಆಶ್ಚರ್ಯವಿಲ್ಲ. ಮತ್ತೊಬ್ಬ ಉದಯೋನ್ಮುಖ ಆಟಗಾರ ಶ್ರೇಯಸ್ ಐಯರ್ ಕೂಡ ಕಳೆದ ಒಂದು ವರ್ಷದಿಂದ ಫಾರ್ಮ್​ನಲ್ಲಿದ್ದಾರೆ.ಹೀಗಾಗಿ 4 ಹಾಗೂ 5ನೇ ಕ್ರಮಾಂಕದಲ್ಲಿ ಈ ಮೂವರಲ್ಲಿ ಯಾರಿಗೆ ಸ್ಥಾನ ಎಂಬುದೆ ದೊಡ್ಡ ಪ್ರಶ್ನೆಯಾಗಿದೆ. 6ನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡಿದರೆ, 7ನೇ ಸ್ಥಾನದಲ್ಲಿ ಜಡೇಜಾ, 8ನೇ ಕ್ರಮಾಂಕದಲ್ಲಿ ಕ್ರುನಾನ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ನಂತರದಲ್ಲಿ ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ನವದೀಪ್ ಸೈನಿ ಕಣಕ್ಕಿಳಿಯುವ ಅಂದಾಜಿದೆ.

First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading