ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟಿಂಗ್​ ದಿಗ್ಗಜರಾಗಲು ಕಾರಣವೇನು ಗೊತ್ತೇ? ಇಲ್ಲಿದೆ ಯಶಸ್ಸಿನ ಗುಟ್ಟು

Virat Kohli: ವಿಶ್ವಾದ್ಯಂತ ಈಗಿರುವ ಶ್ರೇಷ್ಠ ಆಟಗಾರರಲ್ಲಿ ಕೆಲವರು ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಕೆಲವರು ಟೆಸ್ಟ್​, ಕೆಲವರು ಟಿ-20 ಪಂದ್ಯದಲ್ಲಿ ಉತ್ತಮರೆನಿಸಿಕೊಂಡಿದ್ದಾರೆ. ಆದರೆ ವಿರಾಟ್​ ಮೂರು ಆವೃತ್ತಿಗೂ ಸಲ್ಲುತ್ತಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ

  • Share this:
ವಿಶ್ವ ಕ್ರಿಕೆಟ್​ನಲ್ಲಿ ಸಚಿನ್​ ತೆಂಡೂಲ್ಕರ್​ ನಂತರ ಮತ್ತು ಮುಂಚೆ ಹಲವು ಪ್ರತಿಭಾವಂತ ಕ್ರಿಕೆಟಿಗರು ಬಂದಿದ್ದರು. ದಿ ಗ್ರೇಟ್​ ವಾಲ್​ ರಾಹುಲ್​ ದ್ರಾವಿಡ್​, ವಿವಿಎಸ್​ ಲಕ್ಷ್ಮಣ್​, ಸೌರವ್​ ಗಂಗೂಲಿ, ವೀರೇಂದ್ರ ಸೆಹ್ವಾಗ್​ ಸೇರಿದಂತೆ ಸಚಿನ್​ ಸಮಕಾಲೀಕನರು ತಮ್ಮದೇ ಛಾಪನ್ನು ಕ್ರಿಕಟ್​ ಅಂಗಳದಲ್ಲಿ ಒತ್ತಿದ್ದಾರೆ. ಅದೇ ರೀತಿ ಜ್ಯಾಕ್​ ಕಾಲಿಸ್​, ಕೆವಿನ್​ ಪೀಟರ್ಸನ್​, ಎ ಬಿ ಡಿವಿಲಿಯರ್ಸ್​, ಸ್ಮಿತ್​, ಬ್ರಿಯಾನ್​ ಲಾರಾ, ಶಿವನಾರಾಯಣ್​ ಚಂದ್ರಪಾಲ್​, ಅರವಿಂದ​ ಡಿ ಸಿಲ್ವಾ, ಕುಮಾರ ಸಂಗಕ್ಕಾರ, ಮಹೇಲಾ ಜಯವರ್ಧನೆ, ಹೀಗೇ ಹೇಳುತ್ತ ಹೋದರೆ, ವಿಶ್ವವನ್ನೇ ತಮ್ಮತ್ತ ತಿರುಗುವಂತೆ ಮಾಡಿದ ಹಲವು ದಾಂಡಿಗರ ದಂಡೇ ಸಿಗುತ್ತದೆ.

ಅದೇ ರೀತಿ ಇಂದಿನ ಪೀಳಿಗೆಯಲ್ಲೂ ಅದ್ಭುತ ದಾಂಡಿಗರು ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿ ಮನೆ ಮಾತಾಗಿದ್ದಾರೆ. ವಿರಾಟ್​ ಕೊಹ್ಲಿ, ಸ್ಟೀವ್​ ಸ್ಮಿತ್​, ರೋಹಿತ್​ ಶರ್ಮಾ, ಜೋ ರೂಟ್​, ಬಾಬರ್​ ಆಜಮ್​, ಹೀಗೇ ದಂಡು ದೊಡ್ಡದೇ ಇದೆ. ಆದರೆ ಇವರೆಲ್ಲರನ್ನೂ ಎಲ್ಲಾ ಫಾರ್ಮಾಟ್​ನ ಪಂದ್ಯಗಳಲ್ಲೂ ಡಾಮಿನೇಟ್​ ಮಾಡಿರುವ ದಾಖಲೆ ವಿರಾಟ್​ ಕೊಹ್ಲಿಯವರಿಗೆ ಸಲ್ಲುತ್ತದೆ. ಅದಕ್ಕವರ ದಾಖಲೆಗಳು ಕೂಡ ಸಾಕ್ಷಿಯಾಗಿ ನಿಲ್ಲುತ್ತದೆ.

ವಿಶ್ವ ಕ್ರಿಕೆಟ್​ನಲ್ಲಿ ಇಂದಿಗೆ ಶ್ರೇಷ್ಠ ಆಟಗಾರ ಎಂದು ಕರೆಸಿಕೊಳ್ಳುವುದು ವಿರಾಟ್​ ಕೊಹ್ಲಿ. ಅದನ್ನು ಯಾರೂ ಅಲ್ಲಗಳೆಯಲೂ ಸಾಧ್ಯವಿಲ್ಲ. ಹಾಗಾದರೆ, ಸುತ್ತಲೂ ಹಲವು ಸ್ಪರ್ಧಿಗಳಿದ್ದರೂ ವಿಶ್ವದ ನಂಬರ್​ ಒನ್​ ಆಟಗಾರನಾಗಿ ಕೊಹ್ಲಿ ಹೇಗೆ ಯಶಸ್ಸು ಸಾಧಿಸಿದ್ದಾರೆ? ಈ ಗುಟ್ಟನ್ನು ಭಾರತದ ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋಡ್​ ಬಿಚ್ಚಿಡುತ್ತಾರೆ.

ಹಲವು ಫಾರ್ಮಾಟ್​ಗಳಲ್ಲಿ ಬೇರೆ ಬೇರೆ ದಿಗ್ಗಜ ಬ್ಯಾಟ್ಸ್​ಮನ್​ಗಳು ಕೊಹ್ಲಿಯವರಿಗೆ ಸವಾಲು ಹಾಕಿದರೂ, ಕೊಹ್ಲಿಯೇ ಎಲ್ಲಾ ತರದ ಆವರ್ತಿಯಲ್ಲೂ ಸರ್ವಶ್ರೇಷ್ಠ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ವಿಕ್ರಮ್​ ರಾಥೋಡ್​. ಮತ್ತು ಅವರ ಈ ನಂಬಿಕೆಗೆ ತಕ್ಕ ಉತ್ತರವೂ ಅವರು ನೀಡುತ್ತಾರೆ.

ವಿರಾಟ್​ ನಿಜಕ್ಕೂ ವಿಶ್ವದಲ್ಲೇ ಶ್ರೇಷ್ಠ ಆಟಗಾರ. ಅದನ್ನು ವಿರಾಟ್​ ದಾಖಲೆಗಳೇ ಪುಷ್ಠೀಕರಿಸುತ್ತವೆ. ಅವರು ತೋರಿಸಿದ, ತೋರಿಸುತ್ತಿರುವ ಪ್ರತಿಭೆ, ಹುಟ್ಟುಹಾಕಿದ ದಾಖಲೆಗಳು ನಮ್ಮ ಕಣ್ಣ ಮುಂದಿವೆ, ಎಂದು ರಾಥೋಡ್​ ಟೈಮ್ಸ್​ ಆಫ್​ ಇಂಡಿಯಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕ್ರಿಕೆಟ್​ ಆಟದಲ್ಲಿ ಅವರಿಗಿರುವ ಶ್ರದ್ಧೆ ನಿಜಕ್ಕೂ ಅನುಕರಣೀಯ. ಆದರೆ ನನಗೆ ಅವರಲ್ಲಿ ಇಷ್ಟ ಆಗುವುದು ಸಮಯಕ್ಕೆ ತಕ್ಕಂತೆ ಅವರು ಹೊಂದಿಕೊಳ್ಳುವುದು. ಎಲ್ಲಾ ಮ್ಯಾಚ್​ಗಳಲ್ಲೂ ಆ ಕ್ಷಣಕ್ಕೆ ತಕ್ಕ ಆಟಕ್ಕೆ ಅವರು ಹೊಂದಿಕೊಳ್ಳುತ್ತಾರೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಪಂದ್ಯದ ಗತಿಯನ್ನು ತಿರುಗಿಸಿ ಎದುರಾಳಿಗಳಿಗೆ ಭಯ ಹುಟ್ಟಿಸುವ ತಾಕತ್ತು ಸದ್ಯದ ಕ್ರಿಕೆಟ್​ನಲ್ಲಿ ವಿರಾಟ್​ಗೆ ಮಾತ್ರವೇ ಇರುವುದು. ಎಲ್ಲ ರೀತಿಯಲ್ಲಿ ವಿರಾಟ್​ ಒಂದು ಪರಿಪೂರ್ಣ ಪ್ಯಾಕೇಜ್​, ಎನ್ನುತ್ತಾರೆ ರಾಥೋಡ್​.

ಇದನ್ನೂ ಓದಿ: ಅನುಷ್ಕಾ-ವಿರಾಟ್ ಮಗಳ ಮೊದಲ ಫೋಟೋ; ಟೀಂ ಇಂಡಿಯಾ ಜೊತೆ ಹೋಗುವಾಗ ಏರ್​ಪೋರ್ಟ್​​ನಲ್ಲಿ ಕ್ಲಿಕ್

ವಿಶ್ವಾದ್ಯಂತ ಈಗಿರುವ ಶ್ರೇಷ್ಠ ಆಟಗಾರರಲ್ಲಿ ಕೆಲವರು ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಕೆಲವರು ಟೆಸ್ಟ್​, ಕೆಲವರು ಟಿ-20 ಪಂದ್ಯದಲ್ಲಿ ಉತ್ತಮರೆನಿಸಿಕೊಂಡಿದ್ದಾರೆ. ಆದರೆ ವಿರಾಟ್​ ಮೂರು ಆವೃತ್ತಿಗೂ ಸಲ್ಲುತ್ತಾರೆ. ಉತ್ತಮ ಡಿಫೆನ್ಸ್​ ಮಾಡಬಲ್ಲರು, ಹೊಡೆಬಡೆಯ ಆಟವಾಡಬಲ್ಲರು, ಕಡೆಯವರೆಗೂ ನಿಂತು ಪಂದ್ಯದ ಮೇಲು ಬೀಳುಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ಆಡಬಲ್ಲರು. ಎಲ್ಲಾ ಆವೃತ್ತಿಯ ಆಟದ ಶೈಲಿಯನ್ನೂ ಪಳಗಿಸಿಕೊಂಡಿರುವ ಫುಲ್​ ಪ್ಯಾಕೇಜ್​ ವಿರಾಟ್​ ಕೊಹ್ಲಿ, ಎಂದು ಅಭಿಪ್ರಾಯಪಡುತ್ತಾರೆ ರಾಥೋಡ್​.

ಇದನ್ನೂ ಓದಿ: ನಾನು ಸಸ್ಯಹಾರಿ ಮಾತ್ರ, ವೆಗನ್​ ಅಲ್ಲ; ಟ್ರೋಲಿಗರಿಗೆ ವಿರಾಟ್​ ಕೊಹ್ಲಿ ತಿರುಗೇಟು

2016ರ ಐಪಿಎಲ್​ ನೆನಪಿಸಿಕೊಂಡ ರಾಥೋಡ್​, ಕೊಹ್ಲಿ ವಿರಾಟ ಪ್ರದರ್ಶನದ ಬಗ್ಗೆ ಮಾತನಾಡುತ್ತಾರೆ. ಸುಮಾರು ನಲವತ್ತಕ್ಕೂ ಹೆಚ್ಚು ಸಿಕ್ಸ್​ಗಳನ್ನು 2016ರ ಐಪಿಎಲ್​ನಲ್ಲಿ ವಿರಾಟ್​ ಬಾರಿಸಿದ್ದರು. ನಾಲ್ಕು ಶತಕಗಳು, 900ಕ್ಕೂ ಹೆಚ್ಚು ರನ್​ ಎಲ್ಲವೂ ಆ ಐಪಿಎಲ್​ನಲ್ಲಿ ಬಂದವು. ಅದಾದ ನಂತರ ವೆಸ್ಟ್​ ಇಂಡೀಸ್​ ಟೂರ್​ ವೇಳೆ ನಾನು (ರಾಥೋಡ್​) ಭಾರತ ತಂಡದ ಆಯ್ಕೆಗಾರರ ತಂಡ ಸೇರಿದೆ. 150ಕ್ಕೂ ಹೆಚ್ಚು ಸ್ಟ್ರೈಕ್​ರೇಟ್​ನಲ್ಲಿ ನಾಲ್ಕು ಶತಕ ಬಾರಿಸಿ ಆಗಷ್ಟೇ ಕೊಹ್ಲಿ ವೆಸ್ಟ್​ ಇಂಡೀಸ್​ಗೆ ಬಂದಿದ್ದರು. ಎಲ್ಲರೂ ಈಗ ಅವರು ಹೇಗೆ ಆಡುತ್ತಾರೆ ಎಂಬ ಬಗ್ಗೆ ಯೋಚನೆಯಿತ್ತು. ಆದರೆ ಮೊದಲ ಟೆಸ್ಟ್​ನಲ್ಲಿ ಕೊಹ್ಲಿ, ತಾವು ಯಾವ ಫಾರ್ಮಾಟ್​ಗೆ ಹೇಗೆ ಬೇಕೋ ಹಾಗೇ ಆಡುವೆ ಅನ್ನುವುದನ್ನು ತೋರಿಸಿದರು. ಮೊದಲ ಟೆಸ್ಟ್​ನಲ್ಲಿ ಕೊಹ್ಲಿ ದ್ವಿಶತಕ ಬಾರಿಸಿದರು. ಅದರಲ್ಲಿ ಒಂದೂ ಸಿಕ್ಸ್​ ಇರಲಿಲ್ಲ, ಗಾಳಿಯಲ್ಲಿ ಒಂದೂ ಬಾಲ್​ ಹೊಡೆಯಲಿಲ್ಲ. ಅದು ಅವರ ಪ್ರಬುದ್ಧತೆಯನ್ನು ತೋರಿಸುತ್ತದೆ ಎನ್ನುತ್ತಾರೆ ರಾಥೋಡ್​.
Published by:Sharath Sharma Kalagaru
First published: