Virt Kohli Steps Down: ಭಾರತದ ಸಕ್ಸಸ್ ಫುಲ್ ನಾಯಕ ಈಗ ತಲೆ ಬಾಗಿದ್ದು ಯಾಕೆ? ನಾಯಕತ್ವದಿಂದ ಕೆಳಗಿಳಿಯಲು ಅಸಲಿ ಕಾರಣ ಏನು?

ವಿರಾಟ್ ಕೊಹ್ಲಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಟಿ-20 ನಾಯಕತ್ವದಿಂದ ಕೆಳಗಿಳಿದ್ರು. ಇದೀಗ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ ಮುಂದೆ ಟೆಸ್ಟ್ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸೋ ಸಾಧ್ಯತೆ ಇದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
    ಭಾರತೀಯ ಕ್ರಿಕೆಟ್ (Indian Cricket) ತನ್ನ 80 ವರ್ಷಗಳ ಇತಿಹಾಸದಲ್ಲಿ ಅನೇಕ ದಂತಕಥೆಗಳು ಹಾಗೂ ಶ್ರೇಷ್ಠ ಆಟಗಾರರನ್ನು ಕಂಡಿದೆ. ಅದರಲ್ಲಿ ವಿರಾಟ್ ಕೊಹ್ಲಿ(Virat Kohli) ಕೂಡ ಒಬ್ಬರು ಕೊಹ್ಲಿಯಂತಹ ಮತ್ತೊಬ್ಬ ನಾಯಕ ಬರಲು ಸಾಧ್ಯವಿಲ್ಲವೆಂದು ಅವ್ರ ದಾಖಲೆಗಳೇ ಹೇಳ್ತಿವೆ. ವಿರಾಟ್ ಕೊಹ್ಲಿ ನಡೆ ನಿಗೂಢ, ನೀವು ಅವರನ್ನ ಪ್ರೀತಿಸಬಹುದು ಅಥವಾ ದ್ವೇಷಿಸಬಹುದು ಆದ್ರೆ ನಿರ್ಲಕ್ಷಿಸಲು ಸಾಧ್ಯವಿಲ್ಲ. ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ ನಿನ್ನೆ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯೋದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದು ಅಭಿಮಾನಿಗಳಿಗೆ ಶಾಕ್ ಆಗಿದೆ.

    ಬೆಸ್ಟ್ ಆಫ್ ದಿ ಬೆಸ್ಟ್

    ಭಾರತೀಯ ಕ್ರಿಕೆಟ್‌ನಲ್ಲಿ ಟೆಸ್ಟ್ ನಾಯಕತವದಲ್ಲಿ ಹಲವರು ದೊಡ್ಡ ಹೆಸರುಗಳಿಸಿದ್ದಾರೆ. ಅವರಲ್ಲಿ CK ನಾಯುಡು 1932ರಲ್ಲಿ ಭಾರತದ ಮೊದಲ ಟೆಸ್ಟ್ ನಾಯಕರಾಗಿದ್ದರು. ಬಳಿಕ ಭಾರತ ಲಾಲಾ ಅಮರನಾಥ್ ನೇತೃತ್ವದಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿತು. ಮನ್ಸೂರ್ ಅಲಿ ಖಾನ್ (ಟೈಗರ್) ಪಟೌಡಿ ಭಾರತವನ್ನು ಮೊದಲ ಸಾಗರೋತ್ತರ ಟೆಸ್ಟ್ ಪಂದ್ಯ ಮತ್ತು ಸರಣಿ ವಿಜಯಗಳೊಂದಿಗೆ ಮುನ್ನಡೆಸಿದರು. ಈ ಶತಮಾನದ ಆರಂಭದಿಂದಲೂ, ಸೌರವ್ ಗಂಗೂಲಿ ಮತ್ತು ಎಂಎಸ್ ಧೋನಿ ಕೇವಲ ಸ್ವದೇಶಿ ಪಿಚ್‌ ಗಳಲ್ಲದೆ ವಿದೇಶಗಳಲ್ಲೂ ಗೆದ್ದು ಭಾರತ ತಂಡವನ್ನು ಮುನ್ನಡೆಸಿದ್ರು.

    ಇದನ್ನು ಓದಿ: ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ; ಮಾಜಿ ಆಟಗಾರರ ರಿಯಾಕ್ಷನ್ಸ್ ಇವು

    ಆದರೆ, ಈ ಹಿಂದಿನ ನಾಯಕರಿಗಿಂತ ವಿರಾಟ್ ಕೊಹ್ಲಿ ಅಬ್ಬರ ಒಂದು ಕೈ ಹೆಚ್ಚಾಗಿದೆ. 2015 ರಿಂದ ನಾಯಕನಾಗಿ 68 ಟೆಸ್ಟ್ ಗಳಲ್ಲಿ, ವಿರಾಟ್ ಕೊಹ್ಲಿ ಶೇ58.82 ಗೆಲುವನ್ನು ಸಾಧಿಸಿದ್ದಾರೆ, ಆಸ್ಟ್ರೇಲಿಯಾದ ಸ್ಟೀವ್ ವಾ (71.92%) ಮತ್ತು ರಿಕಿ ಪಾಂಟಿಂಗ್ (62.33%) ನಂತರ ವಿರಾಟ್ ಕೊಹ್ಲಿಬಿಟ್ಟರೆ ಮತ್ತೊಬ್ಬ ನಾಯಕನಿಲ್ಲ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 40 ಟೆಸ್ಟ್ ಗಳನ್ನು ಗೆದ್ದುಕೊಂಡಿದೆ. 17 ಮ್ಯಾಚ್ ಸೋತ್ತಿದ್ರೆ ಮತ್ತು 11 ಮ್ಯಾಚ್ ಡ್ರಾ ಆಗಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತಂಡವು ವಿದೇಶಗಳಲ್ಲಿ 16 ಟೆಸ್ಟ್ಗಳನ್ನು ಗೆದ್ದಿರೋದು ದೊಡ್ಡ ಸಾಧನೆ.

    ವಿರಾಟನ ‘ವಿರಾಟ’ ರೂಪ

    ಇನ್ನು ದಾಖಲೆಗಳೇ ಅವ್ರ ಸಾಧನೆ ಬಗ್ಗೆ ಸಾರಿ ಹೇಳಿತ್ತಿದ್ರು, ಗೆದ್ದಾಗ ಸೋತಾಗ ಅವರ ವರ್ತನೆಗಳು ಅಭಿಮಾನಿ ಬಳಗವನ್ನ ಹೆಚ್ಚು ಮಾಡಿದೆ. ಕೊಹ್ಲಿ ತನ್ನ ಆಕ್ರಮಣಶೀಲತೆಯಿಂದಲೇ ಹೆಸರಾಗಿದ್ರು ತಂಡ ಒಂದೊಂದು ವಿಕೆಟ್ ಗಳಿಸಿದಾಗಲು ಸಂಭ್ರಮಿಸಿದ ರೀತಿ ಆಟಗಾರರನ್ನು ಮತ್ತಷ್ಟು ಹುರಿದುಂಬಿಸಿತ್ತು. ಜೊತೆಗೆ ಕ್ರಿಕೆಟ್ ವಿಚಾರದಲ್ಲಿ ಯಾವುದಕ್ಕೂ ಹಿಂಜರಿದವರಲ್ಲ ಎಲ್ಲದಕ್ಕೂ ಮೊದಲೇ ಪ್ರತಿಕ್ರಿಯಿಸುತ್ತಿದ್ರು.

    ವಿರಾಟ್ ಕೊಹ್ಲಿ ಏಳುಬೀಳು!

    ಕಳೆದ ಸೆಪ್ಟೆಂಬರ್‌ನಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದ ವೇಳೆ ವಿರಾಟ್ ಕೊಹ್ಲಿ ಟೂರ್ನಿಯ ನಂತರ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಅಚ್ಚರಿಯ ಘೋಷಣೆ ಮಾಡಿದ್ದರು. ನಾಯಕತ್ವ ತ್ಯಜಿಸಲು ಕೆಲಸದ ಹೊರೆ ಪ್ರಮುಖ ಕಾರಣವೆಂದು ಉಲ್ಲೇಖಿಸಿದ್ರು. ಇದೀಗ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

    ಇದನ್ನು ಓದಿ: ಹೀನಾಯ ಸೋಲಿನ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ತೊರೆದ Virat Kohli

    ಮುಂದಿನ ಟೆಸ್ಟ್ ನಾಯಕ ಯಾರು?

    ಭಾರತದ ಕ್ರಿಕೆಟ್ ಟೆಸ್ಟ್ ನಾಯಕತ್ವವನ್ನು ಯಾರು ಮುನ್ನಡೆಸ್ತಾರೆ ಅನ್ನೋದೆ ಮುಂದಿನ ಕುತೂಹಲವಾಗಿದೆ. ರೋಹಿತ್ ಶರ್ಮಾ ಹೆಸರು ಕೇಳಿ ಬರ್ತಿದ್ದು, ಭಾರತೀಯ ತಂಡದ ಗೆಲುವಿನ ವೇಗವನ್ನು ಯಾರು ಮುನ್ನಡೆಸ್ತಾರೆ ಕಾದು ನೋಡಬೇಕಿದೆ. ಏನೇ ಆದ್ರೂ ಕೊಹ್ಲಿ ಅಭಿಮಾನಿಗಳು ಫೀಲ್ಡ್ ನಲ್ಲಿ ವಿರಾಟನ ವಿರಾಟ ರೂಪವನ್ನು ಮಿಸ್ ಮಾಡಿಕೊಳ್ತಾರೆ.

    ವರದಿ: ಅಮೇಯ ಭಿಸೆ
    Published by:Vasudeva M
    First published: