Sachin Tendulkar: ಮಿಸ್ಟರ್ ತೆಂಡೂಲ್ಕರ್ ನೀವು ನನಗೆ ಸಹಾಯ ಮಾಡಬಹುದೇ? ಕ್ರಿಕೆಟ್ ದೇವರ ಮೊರೆಹೋದ ವಿಂಡೀಸ್ ಮಾಜಿ ಆಟಗಾರ

ಸಚಿನ್ ತೆಂಡೂಲ್ಕರ್ ಈಗ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಜವಾಬ್ದಾರಿಯನ್ನು ಹೊತ್ತುಕೊಂಡು ಯುವ ಕ್ರಿಕೆಟಿಗರನ್ನು ತಯಾರು ಮಾಡುವ ಮತ್ತು ಅವರಿಗೆ ಆಟವನ್ನು ಸುಧಾರಣೆ ಮಾಡಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಈಗ ಒಬ್ಬ ಮಾಜಿ ಕ್ರಿಕೆಟಿಗರೊಬ್ಬರು ಸಚಿನ್ ಅವರ ಸಹಾಯ ಕೇಳಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

  • Share this:
ಕ್ರಿಕೆಟ್ (Cricket) ಆಟದ ಮಾಸ್ಟರ್ ಬ್ಲಾಸ್ಟರ್ ಅಂತಾನೆ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಕ್ರಿಕೆಟ್ ನಿಂದ ನಿವೃತ್ತಿ ಪಡೆದರೂ ಸಹ ಇವತ್ತಿಗೂ ಅವರ ಸಲಹೆಗಳು ದೊಡ್ಡ ದೊಡ್ಡ ಕ್ರಿಕೆಟ್ ಆಟಗಾರರಿಗೆ ಬೇಕಾಗುತ್ತಿರುವುದನ್ನು ನಾವು ನೋಡಬಹುದು. ಇವರು ಈಗ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ (IPL) ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಜವಾಬ್ದಾರಿಯನ್ನು ಹೊತ್ತುಕೊಂಡು ಯುವ ಕ್ರಿಕೆಟಿಗರನ್ನು ತಯಾರು ಮಾಡುವ ಮತ್ತು ಅವರಿಗೆ ಆಟವನ್ನು ಸುಧಾರಣೆ ಮಾಡಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಈಗ ಒಬ್ಬ ಮಾಜಿ ಕ್ರಿಕೆಟಿಗರೊಬ್ಬರು ಸಚಿನ್ ಅವರ ಸಹಾಯ (Help) ಕೇಳಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಇವರೇ ಸಹಾಯ ಕೇಳಿದ ಕ್ರಿಕೆಟಿಗ
ವೆಸ್ಟ್ ಇಂಡೀಸ್ ಕ್ರಿಕೆಟ್ ನ ಮಾಜಿ ವೇಗಿ ವಿನ್ಸ್ಟನ್ ಬೆಂಜಮಿನ್ ಅವರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ನ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯಕ್ಕಾಗಿ ಸಚಿನ್ ತೆಂಡೂಲ್ಕರ್ ಅವರನ್ನು ಸಂಪರ್ಕಿಸಿದ್ದಾರೆ.

ಕ್ರಿಕೆಟ್ ವೆಸ್ಟ್ ಇಂಡೀಸ್ ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಇದರ ಪರಿಸ್ಥಿತಿಗಳು ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದರೂ, ಅವರ ಕ್ರಿಕೆಟ್ ಕಾರ್ಯಾಚರಣೆಗಳು ಸುಗಮವಾಗಿ ನಡೆಯಲು ಅವರು ಇನ್ನೂ ಆರ್ಥಿಕವಾಗಿ ಸ್ಥಿರವಾಗಿಲ್ಲ. ನಿಧಿ ಮತ್ತು ಸಂಪನ್ಮೂಲಗಳ ಕೊರತೆಯು ಕೆರಿಬಿಯನ್ ನಲ್ಲಿ ತಳಮಟ್ಟದಲ್ಲಿ ಕ್ರಿಕೆಟ್ ಮೇಲೆ ತುಂಬಾನೇ ಪರಿಣಾಮ ಬೀರುತ್ತಿದೆ.

ಏನಂಥ ಸಹಾಯ ಕೇಳಿದ್ದಾರೆ ನೋಡಿ
ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡಲು, ಬೆಂಜಮಿನ್ ಭಾರತದಲ್ಲಿನ ಕ್ರಿಕೆಟ್ ಐಕಾನ್ ಗಳನ್ನು ಸಂಪರ್ಕಿಸಿದ್ದಾರೆ, ಸ್ವಲ್ಪ ಸಹಾಯದ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಹಾಯ ಎಂದರೆ ಹಣದ ಸಹಾಯವೇ ಆಗಬೇಕೆಂದಿಲ್ಲ ಎಂದು ಬೆಂಜಮಿನ್ ಅವರು ಹೇಳುತ್ತಾರೆ. ವಾಸ್ತವವಾಗಿ, ಈ ಸಹಾಯ ಕ್ರಿಕೆಟ್ ಬ್ಯಾಟ್ ಗಳು ಅಥವಾ ಇತರ ಸಲಕರಣೆಗಳಂತೆ ಮೂಲಭೂತವಾಗಿರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs ZIM: ನಮ್ಮನ್ನು ಹಗುರವಾಗಿ ಪರಿಗಣಿಸಬೇಡಿ, ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ ಜಿಂಬಾಬ್ವೆ

"ಈ ಮೊದಲು ನಾವು ಶಾರ್ಜಾದಲ್ಲಿ ಪಂದ್ಯಾವಳಿಯನ್ನು ನಡೆಸುತ್ತಿದ್ದೆವು, ಅಲ್ಲಿ ಇದು ವಿವಿಧ ದೇಶಗಳ ಆಟಗಾರರಿಗೆ ಲಾಭದಾಯಕ ಆಟದಂತೆ ಇತ್ತು. ನಾನು ಯಾವುದೇ ಪ್ರಯೋಜನವನ್ನು ಅದರಿಂದ ಬಯಸುವುದಿಲ್ಲ. ನನಗೆ ಬೇಕಾಗಿರುವುದು ಯಾರೋ ಒಬ್ಬರು ಕ್ರಿಕೆಟ್ ಆಟಕ್ಕೆ ಬೇಕಾಗಿರುವಂತಹ ಕೆಲವು ಸಲಕರಣೆಗಳು ಒದಗಿಸಿಕೊಟ್ಟರು ಸಾಕು ಎಂದು ಹೇಳಲು ಬಯಸುತ್ತೇನೆ. ಎಂದರೆ 10 ರಿಂದ 15 ಬ್ಯಾಟ್ ಗಳು, ಅದು ನನಗೆ ಸಾಕಷ್ಟು ಒಳ್ಳೆಯದು. ನನಗೆ 20000 ಯುಎಸ್ ಡಾಲರ್ ಗಳು ಬೇಕಾಗಿಲ್ಲ. ನಾನು ಕೆಲವು ಸಲಕರಣೆಗಳನ್ನು ಬಯಸುತ್ತೇನೆ, ಇದರಿಂದ ನಾನು ಯುವ ಕ್ರಿಕೆಟಿಗರಿಗೆ ಸಹಾಯ ಮಾಡಬಹುದು. ನಾನು ಕೇಳುತ್ತಿರುವುದು ಇಷ್ಟೇ" ಎಂದು ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಬೆಂಜಮಿನ್ ಅವರು ಹೇಳಿದ್ದಾರೆ.

ಈ ಹಿಂದೆ ಮೊಹಮ್ಮದ್ ಅಜರುದ್ದೀನ್ ಅವರೂ ವಿಂಡೀಸ್ ಗೆ ಸಹಾಯ ಮಾಡಿದ್ರಂತೆ
"ಮಿಸ್ಟರ್ ತೆಂಡೂಲ್ಕರ್... ನೀವು ಉತ್ತಮವಾದ ಸ್ಥಾನದಲ್ಲಿದ್ದರೆ, ನೀವು ನನಗೆ ಸಹಾಯ ಮಾಡಬಹುದೇ? ನನಗೆ ದಯವಿಟ್ಟು ಕರೆ ಮಾಡಿ ಎಂದು ಅವರು ತಮ್ಮ ಫೋನ್ ಸಂಖ್ಯೆಯನ್ನು ಹಂಚಿಕೊಳ್ಳುವಾಗ ಹೇಳಿದರು. ಬೆಂಜಮಿನ್ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಮೊಹಮ್ಮದ್ ಅಜರುದ್ದೀನ್ ಅವರಿಗೆ ಬಹಳ ಸಮಯದ ಹಿಂದೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದವನ್ನು ಸಹ ಈ ವಿಡಿಯೋದಲ್ಲಿ ಅರ್ಪಿಸಿದರು.

ಇದನ್ನೂ ಓದಿ: BMW X7 ಕಾರು ಖರೀದಿಸಿದ ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​! ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ

"ನಾನು ನನ್ನ ಉತ್ತಮ ಸ್ನೇಹಿತ ಮೊಹಮ್ಮದ್ ಅಜರುದ್ದೀನ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನಗೆ ಕೆಲವು ಕ್ರಿಕೆಟ್ ಆಟಕ್ಕೆ ಬೇಕಾಗುವ ಸಲಕರಣೆಗಳನ್ನು ಕಳುಹಿಸಿದರು. ಅಜರ್, ಅಭಿನಂದನೆಗಳು! ಮತ್ತು ಆ ಸಹಾಯಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ಸದಾ ಸಂಪರ್ಕದಲ್ಲಿರಿ. ಕೊಡುಗೆ ನೀಡಲು ಬಯಸುವ ಯಾರಾದರೂ ಇದ್ದರೆ ಮುಕ್ತವಾಗಿರಿ" ಎಂದು ವಿಂಡೀಸ್ ನ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

1986 ಮತ್ತು 1995 ರ ನಡುವೆ ವೆಸ್ಟ್ ಇಂಡೀಸ್ ಪರ 21 ಟೆಸ್ಟ್ ಮತ್ತು 85 ಏಕದಿನ ಪಂದ್ಯಗಳನ್ನು ಆಡಿರುವ ಬೆಂಜಮಿನ್ ಅವರು 161 ವಿಕೆಟ್ ಗಳನ್ನು ಪಡೆದಿದ್ದಾರೆ.
Published by:Ashwini Prabhu
First published: