ಇಂಗ್ಲೆಂಡ್ ಸೋಲನ್ನು ಒಂದಾಗಿ ಸಂಭ್ರಮಿಸಿದ ಪಾಕ್, ಶ್ರೀಲಂಕಾ, ಬಾಂಗ್ಲಾ ಅಭಿಮಾನಿಗಳು; ಏಕೆ ಗೊತ್ತಾ?

ಇನ್ನುಮುಂದೆ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ನ್ಯೂಜಿಲೆಂಡ್​ ಹಾಗೂ ಭಾರತ ತಂಡವನ್ನು ಇಂಗ್ಲೆಂಡ್​ ಎದುರಿಸಬೇಕಿದೆ. ಈ ವೇಳೆ ಒಂದು ಪಂದ್ಯ ಸೋತರೂ ಇಂಗ್ಲೆಂಡ್​ನ ಸೆಮಿಫೈನಲ್​ ಏರುವ ಕನಸು ನುಚ್ಚು ನೂರಾಗುವ ಸಾಧ್ಯತೆ ಇದೆ.

ಟ್ರೋಲ್​ ಮಾಡಲಾದ ಚಿತ್ರ

ಟ್ರೋಲ್​ ಮಾಡಲಾದ ಚಿತ್ರ

  • News18
  • Last Updated :
  • Share this:
ವಿಶ್ವಕಪ್​ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್​ 64 ರನ್​ಗಳ ಸೋಲು ಕಂಡಿದೆ. ಈ ಮೂಲಕ ಆಸ್ಟ್ರೇಲಿಯಾ ಸೆಮಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಅಚ್ಚರಿ ಎಂದರೆ ಇಂಗ್ಲೆಂಡ್​ ಸೋಲಿಗೆ ಆಸ್ಟ್ರೇಲಿಯಾ ಅಭಿಮಾನಿಗಳು ಮಾತ್ರವಲ್ಲ ಪಾಕಿಸ್ತಾನ​, ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಕ್ರೀಡಾಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ!

ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಭಾರತ ಹಾಗೂ ಇಂಗ್ಲೆಂಡ್ ತಂಡ ಮೊದಲ 4 ಸ್ಥಾನದಲ್ಲಿ ನಿಂತಿವೆ. ಮೊದಲ ಮೂರು ತಂಡಗಳು ಸೆಮಿಫೈನಲ್​ಗೆ ಏರುವುದು ಬಹುತೇಕ ಖಚಿತವಾಗಿದೆ. ಆದರೆ, ನಾಲ್ಕನೇ ಸ್ಥಾನಕ್ಕೆ ಇಂಗ್ಲೆಂಡ್​, ಬಾಂಗ್ಲಾ, ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಇಂಗ್ಲೆಂಡ್​ 7ರಲ್ಲಿ 4 ಪಂದ್ಯ ಗೆದ್ದಿದ್ದು, ಮೂರು ಪಂದ್ಯಗಳನ್ನು ಸೋತಿದೆ. ಉಳಿದ ಎರಡು ಪಂದ್ಯಗಳಲ್ಲಿಸೋಲಿಲ್ಲದ ಸರದಾರ ಎನಿಸಿಕೊಂಡಿರುವ ನ್ಯೂಜಿಲೆಂಡ್​ ಹಾಗೂ ಭಾರತ ತಂಡವನ್ನು ​ ಎದುರಿಸಬೇಕಿದೆ. ಈ ವೇಳೆ ಒಂದು ಪಂದ್ಯ ಸೋತರೂ ಇಂಗ್ಲೆಂಡ್​ನ ಸೆಮಿಫೈನಲ್​ ಏರುವ ಕನಸು ನುಚ್ಚು ನೂರಾಗುವ ಸಾಧ್ಯತೆ ಇದೆ. ಹಾಗಾದಲ್ಲಿ ಬಾಂಗ್ಲಾ, ಪಾಕ್​ ಅಥವಾ ಶ್ರೀಲಂಕಾ ಸೆಮಿ ಫೈನಲ್​ಗೆ ಏರುವ ಸಾಧ್ಯತೆ ಇದೆ.  ಇದೇ ಕಾರಣಕ್ಕೆ ಈ ಮೂರು ದೇಶಗಳು ಒಟ್ಟಾಗಿ ಇಂಗ್ಲೆಂಡ್​ ಸೋಲನ್ನು ಸಂಭ್ರಮಿಸಿದ್ದವು. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಟ್ರೋಲ್​ ಆಗಿದೆ.First published: