ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಅವರು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವು ವರ್ಷಗಳ ಹಿಂದೆ ವದಂತಿಗಳು ಹಬ್ಬಿದ್ದವು, ಆದರೆ, ಈ ಜೋಡಿಯು ತಮ್ಮ ಸಂಬಂಧವನ್ನು ಅಧಿಕೃತಗೊಳಿಸುವ ಮೊದಲೇ ಬ್ರೇಕಪ್ ಆಗಿದೆ ಎಂದು ವರದಿಗಳು ಹೇಳುತ್ತಿವೆ. ಅಲ್ಲದೆ, ಭಾರತೀಯ ಕ್ರಿಕೆಟಿಗ ವಾಟ್ಸ್ಆ್ಯಪ್ನಲ್ಲಿ ಕನ್ನಡದ ಐರಾವತ ಚಿತ್ರದಲ್ಲಿ ನಟಿಸಿದ್ದ ಊರ್ವಶಿ ರೌಟೇಲಾ ರನ್ನು ಬ್ಲಾಕ್ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ, ಇಬ್ಬರೂ ಈ ಬಗ್ಗೆ ನಿರ್ಧಾರ ಮಾಡಿಕೊಂಡೇ ಇಬ್ಬರೂ ಮೆಸೇಜಿಂಗ್ ಆ್ಯಪ್ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ನಟಿಯ ವಕ್ತಾರ ಹೇಳಿರುವ ಬಗ್ಗೆಯೂ ವರದಿಯಾಗಿದೆ.
ವಿಚಾರ ಇಷ್ಟೇ ಅಲ್ಲ, ಈ ಎಲ್ಲದರ ನಡುವೆ, ರಿಷಭ್ ಪಂತ್ ಇಶಾ ನೇಗಿ ಅವರೊಂದಿಗಿನ ಸಂಬಂಧವನ್ನು ದೃಢಪಡಿಸಿದ್ದಾರೆ. ಈ ಸಂಬಂಧ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. "ನಾನು ನಿಮ್ಮನ್ನು ಸಂತೋಷಪಡಿಸಲು ಬಯಸುತ್ತೇನೆ. ಏಕೆಂದರೆ ನಾನು ತುಂಬಾ ಸಂತೋಷವಾಗಿರಲು ನೀವೇ ಕಾರಣ" ಎಂಬ ಕ್ಯಾಪ್ಷನ್ ಅನ್ನೂ ಹಾಕಿಕೊಂಡು ಇಬ್ಬರೂ ಜತೆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ, ಇಶಾ ನೇಗಿ ಸಹ ತನ್ನ ಇನ್ಸ್ಟಾಗ್ರಾಂ ಹ್ಯಾಂಡಲ್ನಲ್ಲಿ ಇಬ್ಬರು ಜತೆಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ''ಮೈ ಮ್ಯಾನ್, ಮೈ ಸೋಲ್ಮೇಟ್, ಮೈ ಬೆಸ್ಟ್ ಫ್ರೆಂಡ್, ದಿ ಲವ್ ಆಫ್ ಮೈ ಲೈಫ್'' ಎಂದೂ ಬರೆದಿದ್ದಾರೆ.
ರಿಷಭ್ ಪಂತ್ ಗೆಳತಿ ಇಶಾ ನೇಗಿ, ಉದ್ಯಮಿ, ಒಳಾಂಗಣ ಅಲಂಕಾರ ವಿನ್ಯಾಸಕಿ ಎಂದು ತನ್ನ ಇನ್ಸ್ಟಾಗ್ರಾಂ ಪ್ರೊಫೈಲ್ನಲ್ಲಿ ಬರೆದುಕೊಂಡಿದ್ದಾರೆ. ಅವರು ಡೆಹ್ರಾಡೂನ್ನ ಕಾನ್ವೆಂಟ್ ಆಫ್ ಜೀಸಸ್ ಮತ್ತು ಮೇರಿ (ಸಿಜೆಎಂ ಶಾಲೆ) ಯಲ್ಲಿ ಓದಿದ್ದು, ದೆಹಲಿಯ ಪ್ರಸಿದ್ಧ ಅಮಿಟಿ ವಿಶ್ವವಿದ್ಯಾಲಯದ ಬಿಎ ಇಂಗ್ಲಿಷ್ ಹಾನರ್ಸ್ ಅನ್ನೂ ಓದಿದ್ದಾರೆ.
ಯಾವುದೇ ಕ್ರಿಕೆಟಿಗರು ಗೊತ್ತಿಲ್ಲ - ಊರ್ವಶಿ ರೌಟೇಲಾ
ಇನ್ನೊಂದೆಡೆ, ರಿಷಭ್ ಪಂತ್ ಜತೆ ಡೇಟಿಂಗ್ ನಡೆಸುತ್ತಿದ್ದು ಬ್ರೇಕಪ್ ಆಗಿದ್ದಾರೆ ಎಂಬ ವದಂತಿಗಳ ನಂತರ, ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಇನ್ಸ್ಟಾಗ್ರಾಂ ಕ್ಯೂ / ಎ ಸೆಷನ್ನಲ್ಲಿ, ತನಗೆ ಯಾವುದೇ ಕ್ರಿಕೆಟಿಗರು ಗೊತ್ತಿಲ್ಲ ಎಂದು ಹೇಳಿದ್ದಾರೆ. ಊರ್ವಶಿ ಅವರ ನೆಚ್ಚಿನ ಕ್ರಿಕೆಟಿಗನ ಬಗ್ಗೆ ಅಭಿಮಾನಿಯೊಬ್ಬರು ಇನ್ಸ್ಟಾಗ್ರಾಂನಲ್ಲಿ ಕೇಳಿದರು. ಅದಕ್ಕೆ ಉತ್ತರವಾಗಿ, ‘ಇನ್ಸ್ಪೆಕ್ಟರ್ ಅವಿನಾಶ್’ ಚಿತ್ರನಟಿ ಡಿಪ್ಲೊಮ್ಯಾಟಿಕ್ ಉತ್ತರ ನೀಡಿದ್ದು, ತಾನು ಕ್ರಿಕೆಟ್ ವೀಕ್ಷಣೆ ಮಾಡಲ್ಲ ಎಂದು ಹೇಳಿದ್ದರು.
“ನಾನು ಕ್ರಿಕೆಟ್ ನೋಡುವುದಿಲ್ಲ. ಆದ್ದರಿಂದ ಯಾವುದೇ ಕ್ರಿಕೆಟಿಗರು ಗೊತ್ತಿಲ್ಲ. ಸಚಿನ್ ಸರ್ ಮತ್ತು ವಿರಾಟ್ ಸರ್ ಬಗ್ಗೆ ನನಗೆ ಆಳವಾದ ಗೌರವವಿದೆ” ಎಂದು ಊರ್ವಶಿ ಬರೆದುಕೊಂಡಿದ್ದರು.
ರಿಷಭ್ ಪಂತ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ನಲ್ಲಿ ನಟಿಯನ್ನು ಬ್ಲಾಕ್ ಮಾಡಿದ್ದಾರೆ ಎಂಬ ವರದಿಗಳು ಬಂದ ಬಳಿಕ ಈ ಘಟನೆ ನಡೆದಿದೆ.
ಇನ್ನು, ನಟಿ ಊರ್ವಶಿ ರೌಟೇಲಾ, ರಣದೀಪ್ ಹೂಡಾ ಜತೆ ಇನ್ಸ್ಪೆಕ್ಟರ್ ಅವಿನಾಶ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಆರಂಭಿಸಿದ ಬಗ್ಗೆ ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ತಮ್ಮ ಸಹನಟ ರಣದೀಪ್ ಹೂಡಾ ಅವರೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ