David Warner| ನೀವು ಪ್ರೀತಿಸುವ ತಂಡದಿಂದ ಕಾರಣವೇ ಇಲ್ಲದೆ ಕೈಬಿಟ್ಟಾಗ ನೋವಾಗುತ್ತದೆ: SRH ಬಗ್ಗೆ ವಾರ್ನರ್ ಬೇಸರ!

ಈ ಬಾರಿಯ IPL 2021ರ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಇದೇ ಸಮಯದಲ್ಲಿ ವಾರ್ನರ್‌ ಅವರನ್ನು ತಂಡದ ನಾಯಕತ್ವದಿಂದ ತೆಗೆದು ಹಾಕಲಾಯಿತು. ಮಾತ್ರವಲ್ಲದೆ, ತಂಡದಿಂದಲೂ ಕೈಬಿಡಲಾಗಿತ್ತು.

ಡೇವಿಡ್ ವಾರ್ನರ್.

ಡೇವಿಡ್ ವಾರ್ನರ್.

 • Share this:
  ಆಸ್ಟ್ರೇಲಿಯಾದ (Australia) ಆರಂಭಿಕ ಬ್ಯಾಟ್ಸ್​ಮನ್ ಹಾಗೂ ಸನ್​ ರೈಸರ್ಸ್​ ಹೈದ್ರಾಬಾದ್​ (Sunrisers Hyderabad) ತಂಡ ಮಾಜಿ ಯಶಸ್ವಿ ನಾಯಕ ಡೇವಿಡ್​ ವಾರ್ನರ್​ (David Warner) ಕಳೆದ ಒಂದು ವರ್ಷದಿಂದ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದರು. ಇದೇ ಕಾರಣಕ್ಕೆ ಅವರನ್ನು ಎಚ್​ಆರ್​ಹೆಚ್​ (SRH) ತಂಡ ಐಪಿಎಲ್ (IPL)​ ಟೂರ್ನಿಯಿಂದಲೂ ಹೊರಗಿಟ್ಟಿತ್ತು. ಈ ವಿಚಾರ ಸಾಮಾನ್ಯವಾಗಿ ಡೇವಿಡ್​ ವಾರ್ನರ್ ಅವರ ಮನಸ್ಸಿಗೆ ಸಾಕಷ್ಟು ನೋವುಂಟು ಮಾಡಿತ್ತು.ಆದರೆ, ಕೊನೆಗೂ ಫಾರ್ಮ್​ಗೆ ಮರಳಿದ್ದ ವಾರ್ನರ್​ ಟಿ20 ವಿಶ್ವಕಪ್​ನಲ್ಲಿ (T20 World Cup) ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ, ಆಸ್ಟ್ರೇಲಿಯಾ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದರ ಬೆನ್ನಿಗೆ ಡೇವಿಡ್ ವಾರ್ನರ್ ಇದೀಗ ಎಸ್​ಆರ್​ಹೆಚ್​ ತಂಡದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. "ನಿಮ್ಮ ತಪ್ಪಿಲ್ಲದೆಯೂ ನಿಮ್ಮನ್ನು ತಂಡದಿಂದ ಕೈಬಿಟ್ಟಾಗ, ಕಾರಣ ನೀಡದೇ ನಾಯಕತ್ವದಿಂದ ಕಿತ್ತುಹಾಕಿದಾಗ, ಅದು ತುಂಬಾ ನೋವುಂಟುಮಾಡುತ್ತದೆ" ಎಂದು ಅವರು ತಿಳಿಸಿದ್ದಾರೆ.

  ಐಪಿಎಲ್​ನಿಂದ ವಿಶ್ವಕಪ್​ ವರೆಗೆ ವಾರ್ನರ್ ಆಟ:

  ಸೆಪ್ಟೆಂಬರ್‌ನಲ್ಲಿ ಐಪಿಎಲ್ ಫ್ರಾಂಚೈಸಿಯಿಂದ ತಮ್ಮನ್ನು ಕೈಬಿಟ್ಟಾಗಿನಿಂದ ನವೆಂಬರ್‌ನಲ್ಲಿ ಟಿ-20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವವರೆಗೆ ಡೇವಿಡ್‌ ವಾರ್ನರ್‌ ಸಾಕಷ್ಟು ಏರುಪೇಟುಗಳನ್ನು ಕಂಡಿದ್ದಾರೆ. ಇದೆಲ್ಲದರ ನಡುವೆ, ಆಸ್ಟ್ರೇಲಿಯಾ ಚೊಚ್ಚಲ ಟಿ-20 ವಿಶ್ವಕಪ್‌ ಗೆಲ್ಲಲು ಓಪನರ್‌ ಬ್ಯಾಟ್ಸ್‌ಮನ್‌ ಆಗಿರುವ ವಾರ್ನರ್‌ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

  ಈ ಬಾರಿಯ IPL 2021ರ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಇದೇ ಸಮಯದಲ್ಲಿ ವಾರ್ನರ್‌ ಅವರನ್ನು ತಂಡದ ನಾಯಕತ್ವದಿಂದ ತೆಗೆದು ಹಾಕಲಾಯಿತು. ಮಾತ್ರವಲ್ಲದೆ, ತಂಡದಿಂದಲೂ ಕೈಬಿಡಲಾಗಿತ್ತು.

  ಸನ್​ ರೈಸರ್ಸ್​ ಬಗ್ಗೆ ವಾರ್ನರ್ ಬೇಸರ:

  "ವರ್ಷಾನುಗಟ್ಟಲೆ ನೀವು ಅತ್ಯಂತ ಹೆಚ್ಚಾಗಿ ಪ್ರೀತಿಸಿದ ತಂಡದಿಂದ ನಿಮ್ಮ ತಪ್ಪಿಲ್ಲದೆಯೂ ನಿಮ್ಮನ್ನು ಕೈಬಿಟ್ಟಾಗ, ಕಾರಣ ನೀಡದೇ ನಾಯಕತ್ವದಿಂದ ಕಿತ್ತುಹಾಕಿದಾಗ ತುಂಬಾ ನೋವುಂಟು ಮಾಡುತ್ತದೆ. ಆದರೆ, ಭಾರತದಲ್ಲಿನ ಅಭಿಮಾನಿಗಳು ಯಾವಾಗಲೂ ನನ್ನ ಜೊತೆ ಇರುತ್ತಾರೆ. ಅಲ್ಲಿ ನನಗಾಗಿ ಮತ್ತು ಅವರಿಗಾಗಿ ನಾವು ಆಡುತ್ತೇವೆ. ನಾವು ಮನರಂಜನೆಗಾಗಿ, ಉತ್ತಮ ಪ್ರದರ್ಶನವನ್ನು ನೀಡಲು ಆಡುತ್ತೇವೆ" ಎಂದು ದಿ ಎಕನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ವಾರ್ನರ್ ಹೇಳಿದ್ದಾರೆ.

  2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಐಪಿಎಲ್ ಪ್ರಶಸ್ತಿಗೆ ಕೊಂಡೊಯ್ದ ಡೇವಿಡ್ ವಾರ್ನರ್, ಐಪಿಎಲ್ 2021ರ ಟೂರ್ನಿಯಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆದಾಗ್ಯೂ, SRH ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳದಿದ್ದರೂ, ಅವರು ಕಠಿಣ ತರಬೇತಿ ಪಡೆಯುತ್ತಿದ್ದರು ಎಂದು ಹೇಳಿದ್ದರು.

  "ನನಗೆ ಐಪಿಎಲ್ ತಂಡದಲ್ಲಿ ಸ್ಥಾನ ಸಿಗದಿರಲು ಕಾರಣವೇನಿರಬಹುದು ಎಂಬುದು ಗೊತ್ತಿಲ್ಲ. ನಾನು ಅತ್ಯಂತ ಕಠಿಣ ತರಬೇತಿಯನ್ನು ಪಡೆದುಕೊಳ್ಳುತ್ತಿದೆ. ನಾನು ಒಂದು ದಿನವೂ ಪ್ರಾಕ್ಟೀಸ್‌ಗೆ ತಪ್ಪಿಸಿಕೊಳ್ಳಲಿಲ್ಲ. ಎಲ್ಲವೂ ಕಾರ್ಯರೂಪಕ್ಕೆ ಬರುವ ವೇಳೆಗೆ ನನ್ನನ್ನು ಕೈಬಿಡಲಾಯಿತು. ಇದು ಕೇವಲ ಸಮಯದ ವಿಷಯವಾಗಿದೆ. ಆದ್ದರಿಂದ, ನನಗೆ ನೋವಾಗಿದೆ. ಆದರೂ, ನನಗೆ ಇನ್ನೊಂದು ಅವಕಾಶವಿದೆ ಎಂದು ತಿಳಿದಿತ್ತು"  ವಾರ್ನರ್ ತಿಳಿಸಿದ್ದಾರೆ.

  ಇದನ್ನೂ ಓದಿ: 29 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಮೊದಲ ಗ್ಲೋಬಲ್ ಟೂರ್ನಿ; 8 ಐಸಿಸಿ ಟ್ರೋಫಿಗಳ ವೇಳಾಪಟ್ಟಿ ಪ್ರಕಟ

  ವಾರ್ನರ್ ಅಟಕ್ಕೆ ದಕ್ಕಿದ ವಿಶ್ವಕಪ್:

  ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ತನ್ನ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದಿದೆ. ಡೇವಿಡ್ ವಾರ್ನರ್ ಈ ಟೂರ್ನಿಯಲ್ಲಿ ವಾರ್ನರ್‌ 7 ಇನ್ನಿಂಗ್ಸ್‌ಗಳಲ್ಲಿ 289 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಗೆಲುವಿಗೆ ಕಾರಣರಾದರು.

  ಇದನ್ನೂ ಓದಿ: IND vs NZ- ಇನ್ಮುಂದೆ ಕೊಹ್ಲಿ ಪಾತ್ರ ಏನು? ಕ್ಯಾಪ್ಟನ್ಸಿ ಬಗ್ಗೆ 9 ವರ್ಷದ ಹಿಂದಿನ ರೋಹಿತ್ ಟ್ವೀಟ್ ವೈರಲ್

  ಆರ್​​ಸಿಬಿ ಪಾಲಾಗಲಿದ್ದಾರ ವಾರ್ನರ್​?:

  ಮುಂದಿನ ವರ್ಷ ನಡೆಯಲಿರುವ ಐಪಿಎಲ್​ನಲ್ಲಿ ಡೇವಿಡ್​ ವಾರ್ನರ್​ ಅವರನ್ನು ಸನ್​ ರೈಸರ್ಸ್​ ಹೈದ್ರಾಬಾದ್​ ತಂಡ ಡೇವಿಡ್ ವಾರ್ನರ್ ಅವರನ್ನು ಕೈಬಿಡಲಿದೆ ಎನ್ನಲಾಗಿತ್ತು. ಆದರೆ, ಇದೀಗ ಅವರು ವಿಶ್ವಕಪ್​ನಲ್ಲಿ ಅದ್ಭುತ ಫಾರ್ಮ್​ಗೆ ಮರಳಿದ್ದು, ಎಸ್​ಆರ್​ಹೆಚ್​ ಅವರನ್ನು ಮತ್ತೆ ಉಳಿಸಿಕೊಳ್ಳಲಿದೆಯೇ? ಎಂಬ ಪ್ರಶ್ನೆಗಳೂ ಮೂಡಿವೆ. ಒಂದು ವೇಳೆ ವಾರ್ನರ್​ ಎಸ್​ಆರ್​ಹೆಚ್​ನಿಂದ ಹೊರಬಿದ್ದರೆ, ಬೆಂಗಳೂರು ರಾಯಲ್ ಚಾಲೆಂಜರ್ಸ್​ ವಾರ್ನರ್​ ಅವರನ್ನು ಖರೀದಿಸಿ ನಾಯಕತ್ವ ನೀಡಲಿದೆ ಎನ್ನಲಾಗುತ್ತಿದೆ.
  Published by:MAshok Kumar
  First published: