ರೋಹಿತ್ ಹೆಂಡತಿ ಜೊತೆ ವಿರಾಟ್ ಸುತ್ತಾಟ; ವೈರಲ್ ಆಗುತ್ತಿದೆ ಫೋಟೋ

ಕೊಹ್ಲಿ ಹಾಗೂ ರಿತಿಕಾ ಜೊತೆಯಾಗಿರುವ ಹಳೆಯ ಫೋಟೋ ವೈರಲ್ ಆಗುತ್ತಿದ್ದು, ಕೊಹ್ಲಿ-ರೋಹಿತ್ ನಡುವಣ ಜಗಳಕ್ಕೆ ಇದೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

Vinay Bhat | news18
Updated:August 1, 2019, 3:25 PM IST
ರೋಹಿತ್ ಹೆಂಡತಿ ಜೊತೆ ವಿರಾಟ್ ಸುತ್ತಾಟ; ವೈರಲ್ ಆಗುತ್ತಿದೆ ಫೋಟೋ
ವಿರಾಟ್ ಕೊಹ್ಲಿ ಮತ್ತಿ ರಿತಿಕಾ ಸಜ್ದೆ
  • News18
  • Last Updated: August 1, 2019, 3:25 PM IST
  • Share this:
ಬೆಂಗಳೂರು (ಆ. 01 :) ಈಗಾಗಲೇ ವೆಸ್ಟ್​ ಇಂಡೀಸ್ ಸರಣಿಗಾಗಿ ಕೆರಿಬಿಯನ್ನರ ನಾಡಿಗೆ ತೆರಳಿರುವ ಟೀಂ ಇಂಡಿಯಾ ಆ. 3 ರಂದು ಮೊದಲ ಟಿ-20 ಪಂದ್ಯ ಆಡಲಿದೆ. ವೆಸ್ಟ್​ ಇಂಡೀಸ್​ಗೂ ತೆರಳುವ ಮುನ್ನ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರೋಹಿತ್ ಹಾಗೂ ನನ್ನ ನಡುವೆ ಯಾವುದೇ ಜಗಳವಿಲ್ಲ, ಏನು ಮನಸ್ತಾಪವಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

ಇಷ್ಟಾದರು ಕೊಹ್ಲಿ-ರೋಹಿತ್ ನಡುವಣ ಜಗಳದ ವಿಚಾರ ತಣ್ಣಗಾಗುತ್ತಿಲ್ಲ. ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಷಯದಿಂದ ಇವರಿಬ್ಬರ ಜಗಳ ಮತ್ತಷ್ಟು ಪುಷ್ಠಿ ಪಡೆಯುತ್ತಿದೆ.

ಸದ್ಯ ಹೊಸ ವಿಚಾರ ಏನೆಂದರೆ, ವಿರಾಟ್ ಕೊಹ್ಲಿ ಜೊತೆಯಲ್ಲಿ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೆ ಸುತ್ತಾಡುತ್ತಿದ್ದ ಫೋಟೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

When Virat Kohli Was Spotted With Ritika Sajdeh On A Movie Date
ವಿರಾಟ್ ಕೊಹ್ಲಿ ಜೊತೆ ರಿತಿಕಾ ಸಜ್ದೆ


ಕಾಶ್ಮೀರದಲ್ಲಿ ಧೋನಿ; ಸ್ವಾತಂತ್ರ್ಯ ದಿನಾಚರಣೆವರೆಗೆ ಗಡಿ ಕಾಯಲಿದ್ದಾರೆ MSD!

2013ರಲ್ಲಿ ಮುಂಬೈನಲ್ಲಿ ವಿರಾಟ್ ಕೊಹ್ಲಿ ಬಿಡುವಿನ ವೇಳೆ ರಿತಿಕಾ ಸಜ್ದೆ ಜೊತೆ ಸಿನಿಮಾ ಹಾಲ್​ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಇವರಿಬ್ಬರು ಸಿನಿಮಾ ಹಾಲ್​ನಿಂದ ಹೊರಬರುತ್ತಿರುವ ದೃಶ್ಯ ಕ್ಯಾಮೆರಾದಲ್ಲೂ ಸೆರೆಯಾಗಿತ್ತು. ಇದಾದ ಬಳಿಕ ಹಲವು ಊಹಾಪೋಹಗಳು ಹಬ್ಬಿದ್ದವು. ನಂತರ ರಿತಿಕಾ ರೋಹಿತ್ ಶರ್ಮಾರನ್ನು ವಿವಾಹವಾದರು.

2010ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ವೇಳೆ ಕೊಹ್ಲಿ,​ ರಿತಿಕಾರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಕಂಪನಿಯ ಉದ್ಯೋಗಿಯಾಗಿದ್ದ ರಿತಿಕಾ, ವಿರಾಟ್ ಅವರ ಫೈನಾನ್ಸ್​ ನೋಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರಂತೆ. ಅಷ್ಟೇ ಅಲ್ಲದೆ ಸಿನಿಮಾ, ಡಿನ್ನರ್ ಡೇಟ್​ಗೆ ಕೂಡ ಇವರು ಹೋಗುತ್ತಿದ್ದರಂತೆ. ಈ ವಿಚಾರ ಸುದ್ದಿಯಾಗುತ್ತಿರುವುದನ್ನು ಕಂಡು ರಿತಿಕಾ ತಮ್ಮ ಕೆಲಸಕ್ಕೆ ರಿಸೈನ್ ಮಾಡಿದ್ದರು ಎಂದು ಹೇಳಲಾಗಿದೆ.ಸದ್ಯ ಕೊಹ್ಲಿ ಹಾಗೂ ರಿತಿಕಾ ಜೊತೆಯಾಗಿರುವ ಹಳೆಯ ಫೋಟೋ ವೈರಲ್ ಆಗುತ್ತಿದ್ದು, ಕೊಹ್ಲಿ-ರೋಹಿತ್ ನಡುವಣ ಜಗಳಕ್ಕೆ ಇದೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಡಿಯೋ ಕೃಪೆ: ಯುನಿವರ್ಸಲ್ ಮೀಡಿಯ ಪ್ರೋ

First published:August 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ