Virat and Sachin: ವಿರಾಟ್ ಕೊಹ್ಲಿ ನೀಡಿದ್ದ ಉಡುಗೊರೆ ನೋಡಿ ಕಣ್ಣೀರಿಟ್ಟಿದ್ದ ಸಚಿನ್ ತೆಂಡೂಲ್ಕರ್

Virat Gift: ಸಚಿನ್ ತೆಂಡೂಲ್ಕರ್ ಆ ಪಂದ್ಯ ಮುಗಿದ ನಂತರ ಭಾವುಕರಾಗಿ ತಮ್ಮ ಕೊಠಡಿಯನ್ನು ತಲುಪಿದ್ದರು. ತಾವು ಆಡುತ್ತಿರುವ ಅಂತಿಮ ಪಂದ್ಯವಿದು ಎಂಬ ಸತ್ಯಾಂಶವನ್ನು ತಿಳಿದಿದ್ದ ಸಚಿನ್ ತೆಂಡೂಲ್ಕರ್ ಈ ಕೊಠಡಿಯಲ್ಲಿ ಕುಳಿತು ಕಣ್ಣೀರಿಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದರು

ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ

ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ

  • Share this:
    ಸಚಿನ್ ತೆಂಡೂಲ್ಕರ್(Sachin tendulkar) ಮತ್ತು ವಿರಾಟ್ ಕೊಹ್ಲಿ(Virat Kohli) ವಿಶ್ವ ಕ್ರಿಕೆಟ್ ನ(Cricket) ದಿಗ್ಗಜರು. ಇಬ್ಬರು ದಂತಕಥೆಗಳು ತಮ್ಮ ವೃತ್ತಿಜೀವನದಲ್ಲಿ ಹಲವಾರು ದಾಖಲೆಗಳನ್ನು(Record) ನಿರ್ಮಾಣ ಮಾಡಿದ್ದಾರೆ.. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಸರಿಗಟ್ಟುವ ವಿರಾಟ್ ಕೊಹ್ಲಿ ದಾಪುಗಾಲು ಇಡುತ್ತಿದ್ದಾರೆ.. ಸುಮಾರು ಎರಡೂವರೆ ದಶಕಗಳ ಕಾಲ ಕ್ರಿಕೆಟ್ ಆಡಿ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು(Fans) ಸಂಪಾದನೆ ಮಾಡಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಮುರಿಯಲು ಹಲವು ವರ್ಷಗಳೇ ಬೇಕು. ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಬಾರಿಸಿರುವ ವಿಶ್ವದ ಮೊದಲ ಹಾಗೂ ಏಕೈಕ ಕ್ರಿಕೆಟಿಗ ಎನಿಸಿಕೊಂಡು ಕ್ರಿಕೆಟ್ ದೇವರಾಗಿದ್ದಾರೆ.ಇತ್ತ ಕಡಿಮೆ ಅವಧಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ತಡೆಗಟ್ಟುವತ್ತ ವಿರಾಟ್ ಕೊಹ್ಲಿ ದಾಪುಗಾಲು ಇಡುತ್ತಿದ್ದಾರೆ. ವಿಶೇಷ ಅಂದ್ರೆ ಸಚಿನ್ ಹಾಗೂ ವಿರಾಟ್ ಹಲವು ವರ್ಷಗಳ ಕಾಲ ಕ್ರಿಕೆಟ್ ಉತ್ತಮ ಬಾಂಧವ್ಯ ಹೊಂದಿದ್ದಾರೆ.

    ಇಬ್ಬರ ನಡುವೆ ಹಲವಾರು ಅವಿಸ್ಮರಣೀಯ ಘಟನೆಗಳು ನಡೆದಿವೆ..ಘಟನೆಗಳನ್ನು ವಿರಾಟ್ ಹಾಗೂ ಸಚಿನ್ ಆಗಾಗ ಮೆಲುಕು ಹಾಕುತ್ತಲೇ ಇರುತ್ತಾರೆ.. ಈಗ ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ಜೊತೆಗಿನ ಭಾವನಾತ್ಮಕ ಮನೆಯೊಂದರ ಮೆಲುಕು ಹಾಕಿದ್ದಾರೆ

    ಸಚಿನ್ ಗೆ ವಿಶೇಷ ಉಡುಗೊರೆ ನೀಡಿದ್ದ ಕೊಹ್ಲಿ

    ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿ 9 ವರ್ಷಗಳು ಕಳೆದಿವೆ. ವಿರಾಟ್ ಕೊಹ್ಲಿ ಇಂದು ವಿಶ್ವ ಕ್ರಿಕೆಟ್​ನ ಶ್ರೇಷ್ಠ ಬ್ಯಾಟ್ಸ್​ಮನ್ ಆಗಿ ಹೊರಹೊಮ್ಮಿದ್ದಾರೆ. ಇಂದುಕೂಡ ಕೊಹ್ಲಿ ಮತ್ತು ಸಚಿನ್​ರಲ್ಲಿ ಯಾರು ಶ್ರೇಷ್ಠರು ಎಂಬ ಚರ್ಚೆ ನಡೆಯುತ್ತಲೇ ಇದೆ, ನಡೆಯುತ್ತಲೇ ಇರುತ್ತದೆ.

    ಈ ಇಬ್ಬರು ದಿಗ್ಗಜ ಆಟಗಾರರಿಗೆ ಒಬ್ಬರ ಮೇಲೆ ಮತ್ತೊಬ್ಬರ ಮೇಲೆ ಅಪಾರವಾದ ಗೌರವವಿದೆ. ಕೊಹ್ಲಿ ಮತ್ತು ಸಚಿನ್ ನಡುವೆ ಅನೇಕ ಕಥೆಗಳಿವೆ. ಈ ಪೈಕಿ 2013 ರಲ್ಲಿ ಮುಂಬೈನಲ್ಲಿ ತೆಂಡೂಲ್ಕರ್ ವಿದಾಯದ ಟೆಸ್ಟ್ ಪಂದ್ಯವನ್ನು ಆಡಿದ ನಂತರ ಇಬ್ಬರ ನಡುವೆ ನಡೆದ ಒಂದು ವಿಚಾರವನ್ನು ಇಂದಿಗೂ ಸಚಿನ್ ನೆನಪಿಸಿಕೊಳ್ಳುತ್ತಾರಂತೆ.

    ಇದನ್ನೂ ಓದಿ: ಏಕದಿನದ ಜೊತೆಗೆ ಟಿ 20 ಸರಣಿ ತನ್ನದಾಗಿಸಿಕೊಂಡ ಭಾರತ

    2013ರಲ್ಲಿ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದಿದ್ದ ಟೆಸ್ಟ್ ಪಂದ್ಯ ಸಚಿನ್ ತೆಂಡೂಲ್ಕರ್ ಆಡಿದ ಅಂತಿಮ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಜತೆಗೆ ವಿರಾಟ್ ಕೊಹ್ಲಿ ಕೂಡ ಭಾಗವಹಿಸಿದ್ದರು. ಸಚಿನ್ ತೆಂಡೂಲ್ಕರ್ ಆ ಪಂದ್ಯ ಮುಗಿದ ನಂತರ ಭಾವುಕರಾಗಿ ತಮ್ಮ ಕೊಠಡಿಯನ್ನು ತಲುಪಿದ್ದರು. ತಾವು ಆಡುತ್ತಿರುವ ಅಂತಿಮ ಪಂದ್ಯವಿದು ಎಂಬ ಸತ್ಯಾಂಶವನ್ನು ತಿಳಿದಿದ್ದ ಸಚಿನ್ ತೆಂಡೂಲ್ಕರ್ ಈ ಕೊಠಡಿಯಲ್ಲಿ ಕುಳಿತು ಕಣ್ಣೀರಿಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದರು.

    ಕೊಹ್ಲಿ ಕೊಟ್ಟ ಉಡುಗೊರೆ ನೋಡಿ ಕಣ್ಣೀರಿಟ್ಟ ಸಚಿನ್

    ಭಾವನಾತ್ಮಕವಾಗಿ ಕುಳಿತಿದ್ದ ಅವರ ಬಳಿಗೆ ಬಂದಾಗ ವಿರಾಟ್ ಕೊಹ್ಲಿ ಅವರ ತಂದೆ ನೀಡಿದ್ದ ಪವಿತ್ರ ದಾರವನ್ನು ನನಗೆ ನೀಡಿದರು. ನಾನು ಅದನ್ನು ಸ್ವಲ್ಪ ಸಮಯ ಕೈಯಲ್ಲಿ ಹಿಡುದುಕೊಂಡಿದ್ದೆ. ಆದರೆ, ಅದು ಕೊಹ್ಲಿಗೆ ಅತ್ಯಮೂಲ್ಯವಾಗಿದ್ದು ಎಂಬುದು ತಿಳಿದಿತ್ತು.

    ಹೀಗಾಗಿ ಅವರಿಗೆ ಮತ್ತೆ ಅದನ್ನು ಹಿಂತಿರುಗಿಸಿದೆ. ಇದು ನಿನ್ನ ಬಳಿಯೇ ಇರಬೇಕು. ಇದು ನಿನಗೆ ಸೇರಿದ್ದು ಬೇರೆ ಯಾರಿಗೂ ಅಲ್ಲ. ಇದನ್ನು ನೀನು ನಿನ್ನ ಕೊನೇ ಉಸಿರು ಇರುವವರೆಗೆ ಇಟ್ಟುಕೊಳ್ಳಬೇಕು. ಹೀಗೆ ನಾನು ಕೊಹ್ಲಿಗೆ ಮರಳಿಕೊಟ್ಟೆ. ಇದು ಅಂದು ನಡೆದ ಅತ್ಯಂತ ಭಾವನಾತ್ಮಕ ಘಟನೆ ಆಗಿತ್ತು,” ಎಂದು ಸಚಿನ್ ಹೇಳಿದ್ದಾರೆ.

    ಇದನ್ನೂ ಓದಿ: 2023ರಲ್ಲಿ IOC Session ನಿರ್ವಹಿಸುವ ಹೊಣೆ ಭಾರತದ ಹೆಗಲಿಗೆ! ಇಲ್ಲಿದೆ ಸಂಪೂರ್ಣ ಮಾಹಿತಿ

    ಕೈ ದಾರದ ಬಗ್ಗೆ ಈ ಹಿಂದೆ ಮಾತನಾಡಿದ್ದ ವಿರಾಟ್

    ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ಉಡುಗೊರೆಯಾಗಿ ನೀಡಲು ಬಂದಿದ್ದ ಕೈ ದಾರದ ಕುರಿತು ಮೆಲುಕು ಹಾಕಿದ್ದು, ಇದೇ ಕೈ ದಾರದ ಕುರಿತು ಈ ಹಿಂದೆ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಅವರು ಕೂಡಾ ಮಾತನಾಡಿದ್ದರು. ಭಾರತೀಯ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಕೈ ದಾರಗಳನ್ನು ಕಟ್ಟಲಾಗುತ್ತದೆ, ಅದೇ ರೀತಿ ತನಗೆ ತನ್ನ ತಂದೆ ಈ ವಿಶೇಷ ದಾರವನ್ನು ನೀಡಿದ್ದರು ಹಾಗೂ ಅದನ್ನು ತಾನು ಸಚಿನ್ ತೆಂಡೂಲ್ಕರ್ ಅವರಿಗೆ ಉಡುಗೊರೆಯನ್ನಾಗಿ ನೀಡಲು ಮುಂದಾಗಿದ್ದೆ, ಅದಕ್ಕಿಂತ ವಿಶೇಷವಾದ ಉಡುಗೊರೆ ಬೇರೆ ಯಾವುದೂ ಇಲ್ಲ ಎಂದು ತನಗೆ ಎನಿಸಿತ್ತು ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದರು.
    Published by:ranjumbkgowda1 ranjumbkgowda1
    First published: