Virat Kohli: ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ 50ನೇ ಶತಕ ಯಾವಾಗ?; ಇಲ್ಲಿದೆ ಉತ್ತರ

2017-18 ರಲ್ಲಿ ಕೊಹ್ಲಿ ಆಡಿದ 40 ಏಕದಿನ ಪಂದ್ಯಗಳಲ್ಲಿ 12 ಬಾರಿ ಸೆಂಚುರಿ ಬಾರಿಸಿ ಮಿಂಚಿದ್ದರು. ಅಂದರೆ ಪ್ರತಿ 4 ಪಂದ್ಯಗಳಲ್ಲಿ 1 ಶತಕ ಇವರ ಬ್ಯಾಟ್​ನಿಂದ ಬರುತ್ತಿತ್ತು.

Vinay Bhat | news18
Updated:August 13, 2019, 12:48 PM IST
Virat Kohli: ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ 50ನೇ ಶತಕ ಯಾವಾಗ?; ಇಲ್ಲಿದೆ ಉತ್ತರ
ವಿರಾಟ್ ಕೊಹ್ಲಿ
  • News18
  • Last Updated: August 13, 2019, 12:48 PM IST
  • Share this:
ಬೆಂಗಳೂರು (. 13): ಕ್ರಿಕೆಟ್​​ನಲ್ಲಿ ಸದಾ ಒಂದಲ್ಲಾಒಂದು ನೂತನ ದಾಖಲೆ ಸೃಷ್ಟಿಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 42ನೇ ಶತಕ ಸಿಡಿಸಿ ಮಿಂಚಿದರು.

ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಶತಕ ಬಾರಿಸಿದ ಪೈಕಿ 49 ಸೆಂಚುರಿಯೊಂದಿಗೆ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರೆ, 42ನೇ ಶತಕದೊಂದಿಗೆ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಸಚಿನ್ ದಾಖಲೆ ಮುರಿಯಲು ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಆಟಗಾರ ಎಂದೆನಿಸಲು ಕೊಹ್ಲಿಗಿನ್ನು 8 ಶತಕಗಳಷ್ಟೆ ಬಾಕಿಉಳಿದಿದೆ.

When is Virat Kohli likely to complete 50 ODI hundreds?
ವಿರಾಟ್ ಕೊಹ್ಲಿ


2017-18 ರಲ್ಲಿ ಕೊಹ್ಲಿ ಆಡಿದ 40 ಏಕದಿನ ಪಂದ್ಯಗಳಲ್ಲಿ 12 ಬಾರಿ ಸೆಂಚುರಿ ಬಾರಿಸಿ ಮಿಂಚಿದ್ದರು. ಅಂದರೆ ಪ್ರತಿ 4 ಪಂದ್ಯಗಳಲ್ಲಿ 1 ಶತಕ ಇವರ ಬ್ಯಾಟ್​ನಿಂದ ಬರುತ್ತಿತ್ತು. 2019 ವರ್ಷವನ್ನು ಭರ್ಜರಿ ಆಗಿಯೆ ಪ್ರಾರಂಭಿಸಿರುವ ಕೊಹ್ಲಿ ಅದಾಗಲೇ 4 ಶತಕ ಬಾರಿಸಿದ್ದಾರೆ. ಆದರೆ ಕೊಹ್ಲಿ ಬ್ಯಾಟ್​​ನಿಂದ 50ನೇ ಸೆಂಚುರಿ ಬರಲು ಒಂದಿಷ್ಟು ಸಮಯ ಕಾಯಬೇಕಿದೆ. ಇದರಿಂದ ಸಚಿನ್ ಅಭಿಮಾನಿಗಳು ಒಂದಿಷ್ಟು ನಿರಾಳರಾಗಬಹುದು.

IPL 2020: ರಾಜಸ್ಥಾನ್ ರಾಯಲ್ಸ್​ ತಂಡದ ಸ್ಟಾರ್ ಆಟಗಾರನ ಖರೀದಿಗೆ ಮುಂದಾದ ಡೆಲ್ಲಿ

ಭಾರತ ಸದ್ಯ ಟಿ-20 ವಿಶ್ವಕಪ್​ನತ್ತ ಹೆಚ್ಚಿನ ಗಮನ ಹರಿಸುತ್ತಿದೆ. 2020ರ ನವೆಂಬರ್​​ನಲ್ಲಿ ಐಸಿಸಿ ಟಿ-20 ವಿಶ್ವಕಪ್ ನಡೆಯಲಿದ್ದು, ಮಾಹಿತಿಯ ಪ್ರಕಾರ ಇದಕ್ಕೂ ಮುನ್ನ ಭಾರತ 12 ಏಕದಿನ ಪಂದ್ಯಗಳನ್ನಷ್ಟೆ ಆಡಲಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತಕ್ಕೆ ಒಟ್ಟು 21 ಏಕದಿನ ಪಂದ್ಯಗಳಿವೆ. ಆ ಹೊತ್ತಿಗೆ 2023ರ ಐಸಿಸಿ ಏಕದಿನ ವಿಶ್ವಕಪ್ ಕೂಡ ಬರಲಿದೆ.

ಆದರೆ ಈ ಹೊತ್ತಿಗಾಗಲೇ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ತಮ್ಮ ಪಾರುಪತ್ಯ ಮೆರೆಯಲಿದ್ದಾರೆ, ಕ್ರಿಕೆಟ್ ಇತಿಹಾಸದಲ್ಲೇ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರನಾಗಿರುತ್ತಾರೆ ಎನ್ನುತ್ತಿವೆ ಮೂಲಗಳು. ಮುಂದಿನ 21 ಪಂದ್ಯಗಳಲ್ಲಿ(2 ವರ್ಷಗಳಲ್ಲಿ) ಕೊಹ್ಲಿ ಬ್ಯಾಟ್​​ನಿಂದ 8 ಶತಕ ಬಂದರೆ ಕ್ರಿಕೆಟ್ ಇತಿಹಾಸದಲ್ಲೇ ವಿರಾಟ್ ವಿಶ್ವಶ್ರೇಷ್ಠ ಆಟಗಾರ ಎಂದೆನಿಸಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಕ್ರಿಕೆಟ್​ನಲ್ಲಿ ಈವರೆಗೆ ಯಾರು ಮಾಡದ ಬಹುದೊಡ್ಡ ಸಾಧನೆ ಮಾಡುವ ಸಮಯ ದೂರವಿಲ್ಲ ಎನ್ನಬಹುದು.
Loading...

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...