• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • 'ಸಣ್ಣ ರಾಜ್ಯದ ಕ್ರಿಕೆಟಿಗರು ನಿಮಗೆ ಕಾಣಿಸಲ್ಲ'; ಆಯ್ಕೆ ಸಮಿತಿ ಮೈ ಚಳಿ ಬಿಡಿಸಿದ ಸೌರಾಷ್ಟ್ರ ಆಟಗಾರ

'ಸಣ್ಣ ರಾಜ್ಯದ ಕ್ರಿಕೆಟಿಗರು ನಿಮಗೆ ಕಾಣಿಸಲ್ಲ'; ಆಯ್ಕೆ ಸಮಿತಿ ಮೈ ಚಳಿ ಬಿಡಿಸಿದ ಸೌರಾಷ್ಟ್ರ ಆಟಗಾರ

ಶೆಲ್ಡನ್ ಜಾಕ್ಸನ್

ಶೆಲ್ಡನ್ ಜಾಕ್ಸನ್

'ನಮಗೆ ಯಾಕೆ ಅವಕಾಶ ಸಿಕ್ಕಿಲ್ಲ, ನಮ್ಮಲ್ಲೇನಾದರು ತಪ್ಪಿದ್ದರೆ ತಿಳಿಸಿ. ನಾನು ಪ್ರಶ್ನಿಸುತ್ತಿಲ್ಲ. ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದೇನೆ'- ಶೆಲ್ಡನ್

  • Share this:

ಬೆಂಗಳೂರು (ಸೆ. 05): ಸೌರಾಷ್ಟ್ರ ಕ್ರಿಕೆಟ್ ತಂಡದ ಪ್ರಮುಖ ವಿಕೆಟ್ ಕೀಪರ್- ಬ್ಯಾಟ್ಸ್​ಮನ್​​ ಶೆಲ್ಡನ್ ಜಾಕ್ಸನ್ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದರು, ಸರಾಸರಿ 50 ಹೊಂದಿದ್ದರೂ ಜಾಕ್ಸನ್ ಭಾರತ ‘ಎ’ ಮತ್ತು ದುಲೀಪ್ ಟ್ರೋಫಿ ತಂಡಗಳಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಶೆಲ್ಡನ್ ಕಳೆದ ರಣಜಿ ಋತುವಿನಲ್ಲಿ 854 ರನ್‌ಗಳನ್ನು ಬಾರಿಸಿದ್ದರು. ಇಷ್ಟಾದರು ಇವರನ್ನು ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರಿನ ಸರಣಿಗೆ ಮತ್ತು ದುಲೀಪ್ ಟ್ರೋಫಿ ತಂಡಕ್ಕೆ ಆಯ್ಕೆ ಮಾಡಲಿಲ್ಲ.

Saurashtra batsman Sheldon Jackson calls for transparency from national selectors
ಶೆಲ್ಡನ್ ಜಾಕ್ಸನ್


(VIDEO): ಬೌಂಡರಿ ಲೈನ್ ಪಕ್ಕ ಶ್ರೀಲಂಕಾ ಆಟಗಾರರು ಡಿಕ್ಕಿ; ರೋಚಕ ಪಂದ್ಯದಲ್ಲಿ ಮುಂದೇನಾಯ್ತು?

ಈ ಬಗ್ಗೆ ಬೇಸರ ಹೊರ ಹಾಕಿರುವ ಶೆಲ್ಡನ್, 'ಈ ವರ್ಷ ರಣಜಿಯಲ್ಲಿ ಸೌರಾಷ್ಟ್ರ ತಂಡ ಫೈನಲ್​ ವರೆಗೆ ತಲುಪಿತ್ತು. ಇಷ್ಟಾದರು ಯಾವೊಬ್ಬ ಆಟಗಾರ ಬೇರೆ ಯಾವುದೇ ತಂಡಕ್ಕೆ ಆಯ್ಕೆ ಆಗಲಿಲ್ಲ. ಅವಕಾಶ ಇರುವ ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ, ಭಾರತ ಎ ತಂಡದಲ್ಲೂ ಸ್ಥಾನ ಸಿಗಲಿಲ್ಲ' ಎಂದು ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದಾರೆ.

 


'ಸೌರಾಷ್ಟ್ರ ತಂಡ ಕಳೆದ ಐದು ವರ್ಷಗಳಲ್ಲಿ ಮೂರು ಬಾರಿ ಫೈನಲ್​ಗೇರಿದ ಸಾಧನೆ ಮಾಡಿದೆ. ಸಣ್ಣ ರಾಜ್ಯಗಳ ತಂಡ ಎಂದು ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಸಿತಾಂಶು ಕೋಟಕ್ ಕೋಚಿಂಗ್‌ನಲ್ಲಿ ಸೌರಾಷ್ಟ್ರ ಉತ್ತಮ ಸಾಧನೆ ಮಾಡಿದೆ. ಆದರೆ, ನನಗೆ ಏನೂ ಮಾತನಾಡದಂತೆ ಹೇಳಲಾಗಿದೆ. ಇಷ್ಟೇಲ್ಲ ಇದ್ದರೆ ನಾವು ರಣಜಿ ಕ್ರಿಕೆಟ್ ಆಡುವುದರಿಂದ ಏನು ಪ್ರಯೋಜನ'

ಕೊಹ್ಲಿ, ಧೋನಿ ಅಲ್ಲ!: ಈ ಆಟಗಾರನನ್ನು ಪಡೆಯಲು ಭಾರತ ಪುಣ್ಯ ಮಾಡಿರಬೇಕು ಎಂದ ಪಠಾಣ್

 


'ನಮಗೆ ಯಾಕೆ ಅವಕಾಶ ಸಿಕ್ಕಿಲ್ಲ, ನಮ್ಮಲ್ಲೇನಾದರು ತಪ್ಪಿದ್ದರೆ ತಿಳಿಸಿ. ನಾನು ಪ್ರಶ್ನಿಸುತ್ತಿಲ್ಲ. ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದೇನೆ' ಎಂದು ಶೆಲ್ಡನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 


 


First published: