ಸ್ಯಾಂಡಲ್​ವುಡ್ ನಟಿಯೊಂದಿಗೆ ಟೀಂ ಇಂಡಿಯಾ ವೇಗಿ ಬುಮ್ರಾ ಲವ್ವಿ-ಡವ್ವಿ​?

ಪುನೀತ್ ರಾಜ್​ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಅನುಪಮಾ ಅವರನ್ನು ಟೀಂ ಇಂಡಿಯಾ ವೇಗಿ ಟ್ವಿಟರ್​ನಲ್ಲಿ ಫಾಲೋ ಮಾಡುತ್ತಿದ್ದಾರೆ.

zahir | news18
Updated:June 8, 2019, 4:07 PM IST
ಸ್ಯಾಂಡಲ್​ವುಡ್ ನಟಿಯೊಂದಿಗೆ ಟೀಂ ಇಂಡಿಯಾ ವೇಗಿ ಬುಮ್ರಾ ಲವ್ವಿ-ಡವ್ವಿ​?
ಅನುಪಮಾ- ಬುಮ್ರಾ
  • News18
  • Last Updated: June 8, 2019, 4:07 PM IST
  • Share this:
ಟೀಂ ಇಂಡಿಯಾದ ಯಾರ್ಕರ್ ಮಾಂತ್ರಿಕ ಜಸ್​ಪ್ರೀತ್ ಬುಮ್ರಾ ಲವ್​ನಲ್ಲಿ ಬಿದ್ದಿದ್ದಾರೆಯೇ? ಇಂತಹದೊಂದು ಬೌನ್ಸರ್ ಪ್ರಶ್ನೆ ಇದೀಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪುಟಿದೆದ್ದಿದೆ. ಅತ್ತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ ಪಂದ್ಯಾಟಗಳತ್ತ ಯುವ ವೇಗಿ ಗಮನ ಕೇಂದ್ರೀಕರಿಸಿದ್ದಾರೆ. ಆದರೆ ಇತ್ತ ಬುಮ್ರಾ ಹೆಸರು ನಟಿ ಅನುಪಮಾ ಪರಮೇಶ್ವರನ್​ ಜತೆ ಕೇಳಿ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಜಸ್​ಪ್ರೀತ್ ಬುಮ್ರಾ ಟ್ವಿಟರ್ ಖಾತೆ.

ಪುನೀತ್ ರಾಜ್​ಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಅನುಪಮಾ ಅವರನ್ನು ಟೀಂ ಇಂಡಿಯಾ ವೇಗಿ ಟ್ವಿಟರ್​ನಲ್ಲಿ ಫಾಲೋ ಮಾಡುತ್ತಿದ್ದಾರೆ. ಈ ಖಾತೆಯಲ್ಲಿ ಬುಮ್ರಾ ಫಾಲೋ ಮಾಡುತ್ತಿರುವುದು ಕೇವಲ 25 ಮಂದಿಯನ್ನು ಮಾತ್ರ. ಅದರಲ್ಲಿ ಬಹುತೇಕರು ಕ್ರಿಕೆಟಿಗರೇ. ಅದರೆಡೆಯಲ್ಲಿ ಇದೀಗ ಅನುಪಮಾ ಹೆಸರು ಕಂಡು ಬಂದಿದ್ದೇ ಹೊಸ ಪ್ರೇಮ್​ ಕಹಾನಿಗೆ ಮುನ್ನುಡಿ ಬರೆಯಲಾಗುತ್ತಿದೆ.

ಇಬ್ಬರ ನಡುವೆ ಹಲವು ಟ್ವೀಟ್​ಗಳು ಸಹ ವಿನಿಮಯವಾಗಿದ್ದು, ಇದರಿಂದ ನಟಿ-ಕ್ರಿಕೆಟಿಗನ ನಡುವೆ ಲವ್ವಿ-ಡವ್ವಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಕ್ರಿಕೆಟಿಗರು ಬಾಲಿವುಡ್ ತಾರೆಗಳನ್ನು ತಮ್ಮ ಪ್ರೇಯಸಿಯನ್ನಾಗಿಸುತ್ತಾರೆ. ಇದೀಗ ಟಾಲಿವುಡ್-ಮಾಲಿವುಡ್ ಮತ್ತು ಸ್ಯಾಂಡಲ್​ವುಡ್​ನಲ್ಲಿ ಮುದ್ದು ಮುಖದಿಂದ ಎಲ್ಲರ ಮನ ಗೆದ್ದಿರುವ ಅನುಪಮಾ ಅವರ ಕ್ಯೂಟ್ ಸ್ಮೈಲ್​ಗೆ ಬುಮ್ರಾ ಕ್ಲೀನ್ ಬೋಲ್ಡ್ ಆಗಿದ್ದಾರೆ ಎನ್ನಲಾಗಿದೆ.ಸದ್ಯ ಇಂತಹದೊಂದು ಸೆಲೆಬ್ರಿಟಿ ಲವ್ವಿ ಡವ್ವಿ ಕಹಾನಿಯೊಂದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಖತ್ತಾಗೆ ಹರಿದಾಡುತ್ತಿದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ  ಬುಮ್ರಾ ಭಾನುವಾರ ನಡೆಯುವ  ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮತ್ತಷ್ಟು ಯಾರ್ಕರ್​ಗಳನ್ನು ಎಸೆಯಲು ಭರ್ಜರಿ ಸಿದ್ಧತೆಯಲ್ಲಿದ್ದಾರೆ.ಇದನ್ನೂ ಓದಿ: ಕುಡಿಯುವ ನೀರಿನಲ್ಲಿ ಕಾರು ತೊಳೆದ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ದಂಡ: ತೆತ್ತ ಬೆಲೆಯೆಷ್ಟು ಗೊತ್ತೆ?
First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ