ಇಂಗ್ಲೆಂಡ್ನ ಸೌತಂಪ್ಟನ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವು ಐದನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಕಳೆದ ನಾಲ್ಕು ದಿನದಲ್ಲಿ ಸಂಪೂರ್ಣ ಪಂದ್ಯ ನಡೆದಿರುವುದು ಒಂದು ದಿನ ಮಾತ್ರ ಎನ್ನಬಹುದು. ಅಂದರೆ ಈ ನಾಲ್ಕು ದಿನಗಳಲ್ಲಿ ಉಭಯ ತಂಡಗಳು ಕೇವಲ 141.1 ಓವರ್‌ಗಳನ್ನು ಮಾತ್ರ ಆಡಲಾಗಿದೆ.
ಮೊದಲ ದಿನ ಮಳೆಗೆ ಆಹುತಿಯಾದ ಕಾರಣ ಎರಡನೇ ಪಂದ್ಯವನ್ನು ಆರಂಭಿಸಲಾಗಿತ್ತು. ಅದರಂತೆ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅಲ್ಲದೆ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 146 ರನ್ ಬಾರಿಸಿತ್ತು. ಈ ವೇಳೆ ಮಂದ ಬೆಳಕಿನ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನು ಮೂರನೇ ದಿನ ಭಾರತ 217 ರನ್ಗಳಿಗೆ ಸರ್ವಪತನ ಕಂಡರೆ, ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 101 ರನ್ ಕಲೆಹಾಕಿತ್ತು. ಆದರೆ ನಾಲ್ಕನೇ ದಿನ ಕೂಡ ಸಂಪೂರ್ಣ ಮಳೆಗೆ ಆಹುತಿಯಾದ ಕಾರಣ ಪಂದ್ಯ ನಡೆದಿರಲಿಲ್ಲ. ಇದೀಗ 5ನೇ ದಿನದಲ್ಲಿ ಫಲಿತಾಂಶ ಮೂಡಿಬರುವ ನಿರೀಕ್ಷೆಯಿಲ್ಲ. ಹೀಗಾಗಿ ಐಸಿಸಿ ಹೊಸ ನಿಯಮದಂತೆ ಮೀಸಲು ದಿನ ಆಟ ಮುಂದುವರೆಯಲಿದೆ. ಅಂದರೆ 6ನೇ ದಿನಕ್ಕೆ ಪಂದ್ಯವನ್ನು ಮುಂದೂಡಲಾಗುತ್ತದೆ.
ಸಾಮಾನ್ಯವಾಗಿ ಟೆಸ್ಟ್ ಪಂದ್ಯವು 5 ದಿನಗಳ ಕಾಲ ನಡೆಯುತ್ತದೆ. ಒಂದು ವೇಳೆ ಮಳೆಯ ಕಾರಣ ಅಥವಾ ಇನ್ನಿತರ ಕಾರಣದಿಂದ ಪಂದ್ಯವು ಸ್ಥಗಿತಗೊಂಡಿದ್ದರೆ ಆ ಸಮಯವನ್ನು ಹೊಂದಿಸಲು ಮೀಸಲು ದಿನದಲ್ಲಿ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಅದರಂತೆ ಮಳೆಯಿಂದ ರದ್ದಾದ ಪಂದ್ಯದ ಸಮಯವನ್ನು ಹೊಂದಿಸಲು ಹೆಚ್ಚುವರಿ ದಿನದಲ್ಲಿ (6ನೇ ದಿನ) ಪಂದ್ಯವನ್ನು ಆಡಲಾಗುತ್ತದೆ. ಆದರೆ ಇದೀಗ 2 ದಿನದಾಟದ ಹಾಗೂ ಮಂದಬೆಳಕಿನಿಂದ ಉಳಿದಿರುವ ಓವರ್‌ಗಳನ್ನು ಒಂದೇ ದಿನದಲ್ಲಿ ಮುಗಿಸುವುದು ಕಷ್ಟಸಾಧ್ಯ. ಹೀಗಾಗಿ 6ನೇ ದಿನ ಫಲಿತಾಂಶ ಮೂಡಿಬರದಿದ್ದರೆ ಮುಂದೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಇದಕ್ಕೆ ಸದ್ಯ ಐಸಿಸಿ ನೀಡಿರುವ ಉತ್ತರ ಜಂಟಿ ವಿಜೇತರು. ಹೌದು, 5 ದಿನದಲ್ಲಿ ಪಂದ್ಯ ಪೂರ್ಣಗೊಂಡು ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನೀರಸ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು ಎನ್ನಬಹುದು. ಈ ಮೂಲಕ ಭಾರತ-ನ್ಯೂಜಿಲೆಂಡ್ ಚೊಚ್ಚಲ ಟೆಸ್ಟ್ ಕಿರೀಟವನ್ನು ಜೊತೆಯಾಗಿ ಹಂಚಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
ಉಭಯ ತಂಡಗಳು ಹೀಗಿವೆ:-
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಟಾಮ್ ಲಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ನೀಲ್ ವಾಂಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ