ಏನಿದು ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್; 2 ವರ್ಷ ನಡೆಯಲಿರುವ ಈ ಟೂರ್ನಿ ಹೇಗಿರಲಿದೆ..?

ಎರಡು ವರ್ಷಗಳಲ್ಲಿ ಪ್ರತೀ ತಂಡ ಮೂರು ಆತಿಥೇಯ ಹಾಗೂ ಮೂರು ವಿದೇಶಿ ಸರಣಿ ಸೇರಿ ಒಟ್ಟು ಆರು ಟೆಸ್ಟ್​ ಸರಣಿ ಆಡಲಿದೆ. ಸರಣಿಯಲ್ಲಿ ಕನಿಷ್ಠ ಎರಡು, ಮೂರು ಮತ್ತು ಗರಿಷ್ಠ ಐದು ಪಂದ್ಯಗಳಿರುತ್ತವೆ.

Vinay Bhat | news18
Updated:July 30, 2019, 8:01 AM IST
ಏನಿದು ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್; 2 ವರ್ಷ ನಡೆಯಲಿರುವ ಈ ಟೂರ್ನಿ ಹೇಗಿರಲಿದೆ..?
ಇಂಗ್ಲೆಂಡ್ ನಾಯಕ ಜೋ ರೂಟ್ ಹಾಗೂ ವಿರಾಟ್ ಕೊಹ್ಲಿ
  • News18
  • Last Updated: July 30, 2019, 8:01 AM IST
  • Share this:
ಬೆಂಗಳೂರು (ಜು. 30): ಟಿ-20, ಏಕದಿನ ಟೂರ್ನಿಗಳಲ್ಲೇ ಕಳೆದು ಹೋಗುತ್ತಿರುವ ಕ್ರಿಕೆಟ್ ಮಧ್ಯೆ ಐಸಿಸಿ ನೂತನ ಪ್ರಯೋಗಕ್ಕೆ ಸಜ್ಜಾಗಿದೆ. ಅದುವೆ ‘ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್’! ಏನಿದು ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್?, ಟೂರ್ನಿಯಲ್ಲಿ ಭಾಗವಹಿಸುವ ತಂಡಗಳೆಷ್ಟು? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್?:

ಹೊಡಿಬಡಿ ಆಟದತ್ತ ವಾಲುತ್ತಿರುವ ಈಗಿನ ಕ್ರಿಕೆಟ್ ಅಭಿಮಾನಿಗಳು ಐದು ದಿನಗಳ ಟೆಸ್ಟ್​ ಪಂದ್ಯ ವೀಕ್ಷಿಸುವುದು ಕ್ಷೀಣಿಸುತ್ತಿದೆ. ಟೆಸ್ಟ್​ ಕ್ರಿಕೆಟ್ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬೊತ್ತಿಗೆ ಐಸಿಸಿ ವೈಟ್ ಜೆರ್ಸಿ ಕ್ರಿಕೆಟ್ ಅನ್ನು ಮೇಲುತ್ತುವ ಪ್ರಯತ್ನದಲ್ಲಿ ಹೊಸ ಹೆಜ್ಜೆಯಿಟ್ಟು ಈ ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್ ಅನ್ನು ಪ್ರಾರಂಭಿಸಿದೆ.

2 ವರ್ಷಗಳ ಕಾಲ ನಡೆಯುವ ಟೂರ್ನಿ:

ಐಸಿಸಿ ಟೆಸ್ಟ್​ ರ್ಯಾಂಕಿಂಗ್​​ನ ಟಾಪ್ 9 ತಂಡಗಳು ಈ ಟೂರ್ನಿಯಲ್ಲಿ ಭಾಗವಿಸುತ್ತಿದೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್‌, ಭಾರತ, ನ್ಯೂಜಿಲ್ಯಾಂಡ್‌, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ ಇಂಡೀಸ್‌ ತಂಡಗಳು ಚೊಚ್ಚಲ ಟೆಸ್ಟ್‌ ಚಾಂಪಿಯನ್‌ ಶಿಪ್​ಗಾಗಿ ಸೆಣಸಾಡಲಿವೆ. ಟೆಸ್ಟ್ ಮಾನ್ಯತೆ ಪಡೆದಿರುವ ಅಫ್ಘಾನಿಸ್ತಾನ, ಐರ್ಲೆಂಡ್, ಜಿಂಬಾಬ್ವೆ ತಂಡಗಳಿಗೆ ಅವಕಾಶವಿಲ್ಲ. 2019 ಆಗಸ್ಟ್ 1 ರಿಂದ 2021ರ ಮಾರ್ಚ್ 31ರ ವರೆಗೆ ನಡೆಯುವ ದ್ವಿಪಕ್ಷೀಯ ಸರಣಿಗಳಲ್ಲಿ ಆಯ್ದ ಸರಣಿಗಳನ್ನು ಪರಿಗಣಿಸಿ ಈ ಚಾಂಪಿಯನ್ ಶಿಪ್​ಗೆ ಪರಿಗಣಿಸಲಾಗುತ್ತದೆ. 2021ರ ಜೂನ್ ನಲ್ಲಿ ಇಂಗ್ಲೆಂಡ್​ನ ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ಏರ್ಪಡಿಸಲಾಗಿದೆ.

ಆಗಸ್ಟ್​ 1 ರಿಂದ ಆರಂಭವಾಗಲಿರುವ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಶಸ್ ಸರಣಿಯೊಂದಿಗೆ ಟೆಸ್ಟ್‌ ಚಾಂಪಿಯನ್‌ ಶಿಪ್‌ ಶುರುವಾಗಲಿದೆ. ವಿಂಡೀಸ್​ ಪ್ರವಾಸದಲ್ಲಿ ಟೀಂ ಇಂಡಿಯಾ ಆಡಲಿರುವ ಎರಡು ಟೆಸ್ಟ್ ಪಂದ್ಯ ಇದೇ ಚಾಂಪಿಯನ್​ಶಿಪ್​ನ ಅಡಿಯಲ್ಲಿ ಬರಲಿದೆ.

ಕೊಹ್ಲಿ-ರೋಹಿತ್ ಜಗಳ; ಸುದ್ದಿಗೋಷ್ಠಿಯಲ್ಲಿ ಕೊನೆಗೂ ಮೌನ ಮುರಿದ ವಿರಾಟ್ ಒಂದು ತಂಡಕ್ಕೆ ಎಷ್ಟು ಪಂದ್ಯ?:

ಈ ಎರಡು ವರ್ಷಗಳಲ್ಲಿ ಪ್ರತೀ ತಂಡ ಮೂರು ಆತಿಥೇಯ ಹಾಗೂ ಮೂರು ವಿದೇಶಿ ಸರಣಿ ಸೇರಿ ಒಟ್ಟು ಆರು ಟೆಸ್ಟ್​ ಸರಣಿ ಆಡಲಿದೆ. ಸರಣಿಯಲ್ಲಿ ಕನಿಷ್ಠ ಎರಡು, ಮೂರು ಮತ್ತು ಗರಿಷ್ಠ ಐದು ಪಂದ್ಯಗಳಿರುತ್ತವೆ. ಇಂಗ್ಲೆಂಡ್ ಒಟ್ಟು 22 ಪಂದ್ಯವಾಡಿದರೆ, ಆಸ್ಟ್ರೇಲಿಯಾ 19, ಭಾರತ 18, ದ. ಆಫ್ರಿಕಾ 16, ವೆಸ್ಟ್ ಇಂಡೀಸ್ 15, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ತಲಾ 14, ಪಾಕಿಸ್ಥಾನ ಮತ್ತು ಶ್ರೀಲಂಕಾ ತಲಾ 13 ಪಂದ್ಯಗಳಲ್ಲಿ ಆಡಲಿದೆ.

ಚಾಂಪಿಯನ್ ಘೋಷಣೆ ಹೇಗೆ?:

ಒಂದು ಟೆಸ್ಟ್​​ ಸರಣಿಯಲ್ಲಿ 120 ಅಂಕಗಳಿರುತ್ತದೆ. 2 ವರ್ಷದ ಅವಧಿಯಲ್ಲಿ 720 ಅಂಕಗಳನ್ನು ಮೀಸಲಿಡಲಾಗಿದೆ. ಅಂಕಗಳ ಸಹ ಸರಣಿಯಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ ಎಂಬುದರ ಮೇಲೆ ನಿರ್ಣಯವಾಗಲಿದೆ.

ಭಾರತ ತಂಡದ ಕೋಚ್ ಯಾರಾದರೆ ಉತ್ತಮ? ಪ್ರಶ್ನೆಗೆ ಕೊಹ್ಲಿ ಹೇಳಿದ್ದೇನೆ ಗೊತ್ತಾ..?

World Test Championship1
ಪ್ರತಿ ಪಂದ್ಯದ ಪಾಯಿಂಟ್ ವಿವರ


ಇನ್ನು ಚಾಂಪಿಯನ್ ಪಟ್ಟಕ್ಕಾಗಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಸೆಣೆಸಾಟ ನಡೆಸಲಿದೆ.  ಎಲ್ಲಾದರು ಫೈನಲ್ ಪಂದ್ಯ ಟೈನಲ್ಲಿ ಅಂತ್ಯ ಕಂಡರೆ ಅಥವಾ ಡ್ರಾ ಆದರೆ ಪಾಯಿಂಟ್ ಪಟ್ಟಿಯಲ್ಲಿ ಯಾವತಂಡ ಮೊದಲ ಸ್ಥಾನದಲ್ಲಿದೆಯೋ ಆ ತಂಡ ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್ ಪ್ರಶಸ್ತಿ ಗೆಲ್ಲಲಿದೆ.

First published: July 30, 2019, 8:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading