Rohit Sharma: ಕ್ವಾರಂಟೈನ್‌ನಲ್ಲಿ ನೀವೇನು ಮಾಡಿದ್ರಿ? ರೋಹಿತ್ ಶರ್ಮಾರನ್ನ ಕೆಣಕಿದ ಆಸೀಸ್ ಆಟಗಾರ..!

ಭಾರತ-ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಸ್ಟೀವ್ ಸ್ಮಿತ್ ಅವರ ಆಕರ್ಷಕ ಶತಕ ಹಾಗೂ ಮಾರ್ನಸ್ ಲಾಬುಶೇನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 338 ರನ್ ಕಲೆಹಾಕಿದೆ.

Marnus Labuschagne and Rohit Sharma

Marnus Labuschagne and Rohit Sharma

 • Share this:
  ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮಾತಿನ ಚಕಮಕಿಗಳು ಸಾಮಾನ್ಯ. ಈ ಹಿಂದೆ ಹರ್ಭಜನ್ ಸಿಂಗ್-ಸೈಮಂಡ್ಸ್ ಆಗಿದ್ದರೆ, ಆ ಬಳಿಕ ವಿರಾಟ್ ಕೊಹ್ಲಿ-ಡೇವಿಡ್ ವಾರ್ನರ್ ಮಾತಿನ ಚಕಮಕಿಗೆ ಸಾಕ್ಷಿಯಾಗಿತ್ತು. ಇನ್ನು 2018-19ರ ಪ್ರವಾಸದ ವೇಳೆ ಎರಡು ತಂಡಗಳ ಆಟಗಾರರ ನಡುವಣ ವಾಕ್ಸಮರ ತಾರಕ್ಕೇರಿತ್ತು. ಅದರಲ್ಲೂ ಮ್ಯಾಥ್ಯೂ ವೇಡ್ ಹಾಗೂ ರಿಷಭ್ ಪಂತ್ ಪರಸ್ಪರ ಕಿಚಾಯಿಸಿ ಗಮನ ಸೆಳೆದಿದ್ದರು. ಈ ಬಾರಿ ಕೂಡ ಅಭಿಮಾನಿಗಳು ಆಟಗಾರರ ನಡುವಣ ವಾಕ್ಸಮರವನ್ನು ನಿರೀಕ್ಷಿಸಿದ್ದರು. ಆದರೆ ಮೊದಲ ಟೆಸ್ಟ್ ಪಂದ್ಯದ ವೇಳೆ ಅಂತಹ ಯಾವುದೇ ಘಟನೆಗಳು ಕಂಡು ಬಂದಿರಲಿಲ್ಲ.

  2ನೇ ಟೆಸ್ಟ್ ಪಂದ್ಯದ ವೇಳೆ ಆಟಗಾರರ ನಡುವಣ ವಾಕ್ಸಮರ ಭುಗಿಲೆದ್ದಿತ್ತು. ಅದು ಕೂಡ ವೇಡ್ ಹಾಗೂ ಪಂತ್ ನಡುವೆ ಎಂಬುದು ವಿಶೇಷ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಪರಸ್ಪರ ಕಿಚಾಯಿಸುವ ಘಟನೆ ನಡೆದಿದೆ. ಜಸ್​ಪ್ರೀತ್ ಬೂಮ್ರಾ ದಾಳಿ ವೇಳೆ ವಿಕೆಟ್ ಕೀಪರ್ ಪಂತ್, 'ಹೇ ಹೇ ಹೇ...' ಎಂದು ಹೀಯಾಳಿಸುವ ರೀತಿಯಲ್ಲಿ ಜೋರಾಗಿ ನಕ್ಕಿದ್ದರು.

  ಇದರಿಂದ ಅಸಮಾಧಾನಗೊಂಡ ವೇಡ್ ಕೂಡ 'ಹೇ ಹೇ ಹೇ...ನಿಮ್ಮನ್ನು ನೀವೇ ಬಿಗ್ ಸ್ಕ್ರೀನ್‌ನಲ್ಲಿ ನೋಡಿ ನಗುತ್ತಿದ್ದೀರಾ' ಎಂದು ಪ್ರತಿಕ್ರಿಯಿಸಿ ಕಿಚಾಯಿಸಿದರು. ಇದರೊಂದಿಗೆ ಪರಸ್ಪರ ಮಾತಿನ ಸಮರಕ್ಕಿಳಿಯುವ ಸೂಚನೆ ನೀಡಿದರು. ಇನ್ನು ಎರಡು ಮೂರು ಬಾರಿ ಪಂತ್​ರನ್ನು ಕೆಣಕುವ ಪ್ರಯತ್ನವನ್ನೂ ವೇಡ್ ಮಾಡಿದ್ದರು.

  ಇದೀಗ ಮೂರನೇ ಟೆಸ್ಟ್​ನಲ್ಲೂ ಆಸ್ಟ್ರೇಲಿಯಾ ಆಟಗಾರು ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನು ಕೆಣಕಲು ಪ್ರಾರಂಭಿಸಿದ್ದಾರೆ. ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದ ರೋಹಿತ್ ಶರ್ಮಾ ಅವರ ಏಕಾಗ್ರತೆಗೆ ಭಂಗ ತರಲು ಹಲವು ಬಾರಿ ಮಾರ್ನಸ್ ಲಾಬುಶೇನ್ ಯತ್ನಿಸಿದರು. ಶಾರ್ಟ್ ಲೆಗ್​​ನಲ್ಲಿ ಫೀಲ್ಡಿಂಗ್ ಮಾಡ್ತಿದ್ದ ಲಾಬುಶೇನ್, ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನು ಸುಖಾಸುಮ್ಮನೆ ಮಾತನಾಡಿಸಲು ಯತ್ನಿಸಿದ್ದರು.

  ಇದೇ ವೇಳೆ ರೋಹಿತ್ ಶರ್ಮಾ ಜೊತೆ ನೀವು ಕ್ವಾರಂಟೈನ್​ನಲ್ಲಿ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿ ಕೆಣಕುವ ಪ್ರಯತ್ನ ಮಾಡಿದ್ದರು. ಏಕೆಂದರೆ ಮೊದಲ ಎರಡು ಟೆಸ್ಟ್​ ಪಂದ್ಯಗಳನ್ನು ಹಿಟ್​ಮ್ಯಾನ್ ತಪ್ಪಿಸಿಕೊಂಡಿದ್ದರು. ಮೂರನೇ ಪಂದ್ಯದಲ್ಲಿ ಕಣಕ್ಕಿಳಿದ್ದರಿಂದ ಲಾಬುಶೇನ್ ಕ್ವಾರಂಟೈನ್ ವಿಷಯ ಪ್ರಸ್ತಾಪಿಸಿ ಕಿಚಾಯಿಸಲು ಯತ್ನಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.



  ಇನ್ನು ಸಿಡ್ನಿ ಕ್ರಿಕೆಟ್ ಗ್ರೌಂಡ್​​ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಸ್ಟೀವ್ ಸ್ಮಿತ್ ಅವರ ಆಕರ್ಷಕ ಶತಕ ಹಾಗೂ ಮಾರ್ನಸ್ ಲಾಬುಶೇನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 338 ರನ್ ಕಲೆಹಾಕಿದೆ. ಹಾಗೆಯೇ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದೆ.
  Published by:zahir
  First published: