• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • 2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಸದಸ್ಯರು ಯಾರ‍್ಯಾರು ಏನು ಮಾಡುತ್ತಿದ್ದಾರೆ ಗೊತ್ತಾ?

2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಸದಸ್ಯರು ಯಾರ‍್ಯಾರು ಏನು ಮಾಡುತ್ತಿದ್ದಾರೆ ಗೊತ್ತಾ?

ಟೀಂ ಇಂಡಿಯಾ

ಟೀಂ ಇಂಡಿಯಾ

2011 World Cup: ಭಾರತ 2011 ರಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆದ್ದಿತ್ತು. ಆ ಐತಿಹಾಸಿಕ ಕ್ಷಣಕ್ಕೀಗ 10 ವರ್ಷ. ಅಂದಿನಿಂದ ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಮತ್ತು ಆ ವಿಜೇತ ತಂಡದ ಕೆಲವರನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ಆಟಗಾರರು ನಿವೃತ್ತರಾಗಿದ್ದಾರೆ. ವಿಜಯಶಾಲಿ ತಂಡದ ಸದಸ್ಯರು ಈಗ ಏನು ಮಾಡುತ್ತಿದ್ದಾರೆ ನೋಡಿ..

ಮುಂದೆ ಓದಿ ...
  • Share this:

ಭಾರತದಲ್ಲಿ ಕ್ರಿಕೆಟ್‌ ಅಂದರೆ ಬಹುತೇಕರಿಗೆ ನೆಚ್ಚಿನ ಕ್ರೀಡೆ. ಕ್ರಿಕೆಟ್‌ ಆಟಗಾರರನ್ನು ಅಭಿಮಾನಿಗಳು ಆರಾಧಿಸುವುದನ್ನು ನೋಡುವುದೇ ವಿಶಿಷ್ಟವಾದ ಕ್ಷಣ. ಇದೇ ರೀತಿ ಭಾರತ 2011 ರಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆದ್ದಿತ್ತು. ಆ ಐತಿಹಾಸಿಕ ಕ್ಷಣಕ್ಕೀಗ 10 ವರ್ಷ. ಅಂದಿನಿಂದ ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಮತ್ತು ಆ ವಿಜೇತ ತಂಡದ ಕೆಲವರನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ಆಟಗಾರರು ನಿವೃತ್ತರಾಗಿದ್ದಾರೆ. ವಿಜಯಶಾಲಿ ತಂಡದ ಸದಸ್ಯರು ಈಗ ಏನು ಮಾಡುತ್ತಿದ್ದಾರೆ ನೋಡಿ..


ಎಂ.ಎಸ್. ಧೋನಿ: ಬಹುಶಃ ಭಾರತದ ಅತ್ಯಂತ ಯಶಸ್ವಿ ನಾಯಕ ಎಂದು ಹೇಳಲಾಗುವ ಧೋನಿ, ಇನ್ನೂ ಐದು ವಿಶ್ವಕಪ್‌ಗಳಲ್ಲಿ ತಂಡವನ್ನು ಪ್ರತಿನಿಧಿಸಿದರು. ಆ ಟ್ರೋಫಿಗಳನ್ನು ತಮ್ಮ ಸಾಧನೆಯ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಾಗದಿದ್ದರೂ, 2013 ರಲ್ಲಿ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಕಾರಣರಾದರು. 2020 ರಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಆದರೆ, ಪ್ರಸ್ತುತ ಐಪಿಎಲ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಫ್ರಾಂಚೈಸ್‌ ಸಿಎಸ್‌ಕೆ ತಂಡವನ್ನು ಐಪಿಎಲ್‌ 2021 ನಲ್ಲೂ ಅವರು ಮುನ್ನಡೆಸುತ್ತಿದ್ದಾರೆ.


ಸಚಿನ್ ತೆಂಡೂಲ್ಕರ್: ವಿಶ್ವಕಪ್‌ ಗೆದ್ದ ನಂತರ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್‌ ಇನ್ನೂ 10 ಏಕದಿನ ಪಂದ್ಯಗಳನ್ನು ಆಡಿದರು ಮತ್ತು 2013 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಹಾಗೆ ಮಾಡುವ ಮೊದಲು ಅವರು 100 ಶತಕ ಗಳಿಸಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡರು. ಅಂದಿನಿಂದ, ಅವರು ಸಾಮಾಜಿಕ ಕಾರಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ, ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಪಂದ್ಯಗಳನ್ನಾಡಿದ ನಂತರ ಕೋವಿಡ್ - 19 ಸೋಂಕು ತಗುಲಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.


ವೀರೇಂದ್ರ ಸೆಹ್ವಾಗ್: 2015 ರವರೆಗೆ ಭಾರತವನ್ನು ಪ್ರತಿನಿಧಿಸುತ್ತಲೇ ಇದ್ದರು ಆಕ್ರಮಣಕಾರಿ ಆಟಗಾರ ವೀರೇಂದ್ರ ಸೆಹ್ವಾಗ್‌. ಆದರೆ ಅವರ ಫಾರ್ಮ್ ಕೈಕೊಡುತ್ತಿದ್ದಂತೆ ನಿವೃತ್ತಿಯಾದರು. ರಿಟೈರ್ಡ್ ಆದ ಬಳಿಕ, ಅವರು ಕೆಲವೊಮ್ಮೆ ಪ್ರಸಾರಕರಾಗಿ ಕಾಣಿಸಿಕೊಂಡರು, ಯಶಸ್ವಿ ಉದ್ಯಮಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಅವರು ಇತ್ತೀಚೆಗೆ ರಸ್ತೆ ಸುರಕ್ಷತೆ ವಿಶ್ವ ಸರಣಿಯ ಭಾಗವಾಗಿದ್ದರು, ಅಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದರು.


ಗೌತಮ್ ಗಂಭೀರ್: ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬ್ಯಾಟ್ಸ್‌ಮನ್‌ 2018 ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಬಿಜೆಪಿಗೆ ಸೇರಿದ ಅವರು ಸಂಸದರಾಗಿದ್ದಾರೆ. ಅತ್ಯಂತ ಯಶಸ್ವಿ ಐಪಿಎಲ್ ನಾಯಕರಲ್ಲಿ ಒಬ್ಬರಾಗಿದ್ದ ಗಂಭೀರ್‌, ಕೆಕೆಆರ್ ಅನ್ನು 2012 ಮತ್ತು 2014 ರಲ್ಲಿ ಎರಡು ಬಾರಿ ಗೆಲುವಿನತ್ತ ಮುನ್ನಡೆಸಿದ್ದರು. ಭಾರತಕ್ಕಾಗಿ 2016 ರಲ್ಲಿ ಕೊನೆಯ ಪಂದ್ಯವಾಡಿದ ಗಂಭೀರ್‌, ನಂತರ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರು.


ವಿರಾಟ್ ಕೊಹ್ಲಿ: 2011 ರ ಆ ತಂಡದ ಪೈಕಿ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಇಬ್ಬರು ಆಟಗಾರರಲ್ಲಿ ಇವರೂ ಒಬ್ಬರು. ಧೋನಿ ನಾಯಕತ್ವ ತೊರೆದ ನಂತರ ಭಾರತ ತಂಡ ವಿವಿಧ ಸಾಧನೆ ಮಾಡಲು ಕಾರಣರಾಗಿದ್ದಾರೆ ಕೊಹ್ಲಿ. ಅವರ ವೈಯಕ್ತಿಕ ಫಾರ್ಮ್ ಅತ್ಯುತ್ತಮವಾಗಿದೆ ಮತ್ತು ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪುವಲ್ಲಿ ಯಶಸ್ವಿಯಾಯಿತು ಮತ್ತು ಜೂನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಂತಿಮ ಪಂದ್ಯ ಆಡಲಿದೆ. ಪ್ರಸ್ತುತ, ಅವರು ಐಪಿಎಲ್ ತಯಾರಿಗಳಲ್ಲಿ ನಿರತರಾಗಿದ್ದಾರೆ.


ಯುವರಾಜ್ ಸಿಂಗ್: 2011 ರ ವಿಶ್ವಕಪ್‌ನಲ್ಲಿ ಪಂದ್ಯಾವಳಿಯ ಆಟಗಾರರಾಗಿದ್ದರು. ವಿಜಯೋತ್ಸವದ ನಂತರ ಕ್ಯಾನ್ಸರ್‌ಗೆ ತುತ್ತಾದರು ಹಾಗೂ ಮಹಾಮಾರಿಯನ್ನೇ ಸೋಲಿಸಿದ ಬಳಿಕ ತಂಡದಲ್ಲಿ ಮತ್ತೆ ಯಶಸ್ವಿ ಕಮ್‌ಬ್ಯಾಕ್‌ ಮಾಡಿದರು. ಆದರೆ ಬಳಿಕ ಅವರ ಪ್ರದರ್ಶನ, ಫಾರ್ಮ್ ಕಳೆಗುಂದುತ್ತಾ ಹೋಯಿತು ಮತ್ತು ತಂಡದಿಂದ ಹೊರಗುಳಿಯುವುದು, ತಂಡದಲ್ಲಿ ಆಡುವುದು ಮುಂದುವರೆದಿತ್ತು. ಅವರು 2019 ರಲ್ಲಿ ನಿವೃತ್ತಿ ಘೋಷಿಸಿದರು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗಿ ಪ್ರಚಾರ ಮಾಡುತ್ತಿದ್ದಾರೆ.


ಸುರೇಶ್ ರೈನಾ: ಧೋನಿ ಜೊತೆಗೆ, ರೈನಾ ಕೂಡ 2020 ರಲ್ಲಿ ನಿವೃತ್ತಿ ಘೋಷಿಸಿದರು. ಅವರು 2018 ರಲ್ಲಿ ಭಾರತೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರು, ಆದರೆ ಅದಕ್ಕೂ ಮೊದಲು ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ ತಮ್ಮ ಸಾಧನೆ ಮಾಡಿದ್ದಾರೆ. ಏಪ್ರಿಲ್ 9 ರಿಂದ ಐಪಿಎಲ್‌ನ ಈ ಋತುಮಾನ ಪ್ರಾರಂಭವಾಗಲಿದ್ದು, ರೈನಾ ಇನ್ನೂ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.


ಯೂಸುಫ್ ಪಠಾಣ್: ವಿಶ್ವಕಪ್‌ ವಿಜಯದ ನಂತರ ಅವರು ಕೇವಲ ಆರು ಏಕದಿನ ಪಂದ್ಯಗಳನ್ನು ಆಡಿದರು. ನಂತರ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಕಳೆದ ತಿಂಗಳಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು. ಇವರು ಸಹ ರಸ್ತೆ ಸುರಕ್ಷತೆ ವಿಶ್ವ ಸರಣಿಯನ್ನು ಗೆದ್ದ ಇಂಡಿಯನ್ ಲೆಜೆಂಡ್ಸ್ ತಂಡದ ಭಾಗವಾಗಿದ್ದರು.


ಹರ್ಭಜನ್ ಸಿಂಗ್: ಇನ್ನೂ ಸಕ್ರಿಯ ಆಟಗಾರನಾಗಿರುವ ಹರ್ಭಜನ್ 2016 ರಲ್ಲಿ ಭಾರತ ಪರವಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದಾರೆ. ಆದರೆ ಅವರು ಐಪಿಎಲ್‌ನಲ್ಲಿ ಆಡುತ್ತಲೇ ಇದ್ದು, ಇತ್ತೀಚೆಗಷ್ಟೇ ಇನ್ನೂ ಹೆಚ್ಚು ಆಡಲು ಬಯಸುವುದಾಗಿ ಸ್ಪಷ್ಟಪಡಿಸಿದ್ದರು. ಕೆಲವೊಮ್ಮೆ ಬ್ರಾಡ್‌ಕಾಸ್ಟರ್‌ ಆಗಿಯೂ ಕಾಣಿಸಿಕೊಂಡಿದ್ದಾರೆ.


ರವಿಚಂದ್ರನ್ ಅಶ್ವಿನ್: ಅವರು ವಿಶ್ವದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ, ಮತ್ತು ಭಾರತವನ್ನು ಆಸ್ಟ್ರೇಲಿಯಾದಲ್ಲಿ ಮತ್ತು ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ ಪ್ರಸಿದ್ಧ ಗೆಲುವುಗಳಿಗೆ ಕಾರಣರಾಗಿದ್ದಾರೆ. 2017 ರ ಬಳಿಕ ಸೀಮಿತ ಓವರ್‌ಗಳ ವೃತ್ತಿಜೀವನ ನಿಂತಿದ್ದರೂ, ಟೆಸ್ಟ್ ತಂಡದಲ್ಲಿ ಖಾಯಂ ಸದಸ್ಯರಾಗಿದ್ದಾರೆ. 34 ವರ್ಷಗಳ ರವಿಚಂದ್ರನ್‌ ಅಶ್ವಿನ್‌, ದೇಶಕ್ಕಾಗಿ ಇನ್ನೂ ಕೆಲವು ವರ್ಷಗಳನ್ನು ಆಡುವ ಇಚ್ಛೆ ಹೊಂದಿದ್ದಾರೆ.


ಪಿಯೂಷ್ ಚಾವ್ಲಾ: ವಿಶ್ವಕಪ್‌ ಸರಣಿಯಲ್ಲಿ ಚಾವ್ಲಾ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಅಂದಿನಿಂದ, ಅವರು 2012 ರಲ್ಲಿ ಕೆಲವು ಟಿ 20 ಐ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆದರೆ ಅವರು ಐಪಿಎಲ್‌ನಲ್ಲಿ ಆಡುತ್ತಿದ್ದು, ಈ ಬಾರಿಯೂ ತಮ್ಮ ಸ್ಪಿನ್‌ ಪ್ರದರ್ಶನವನ್ನು ನೀಡಲಿದ್ದಾರೆ. ಅವರ ಫಾರ್ಮ್ ವೈಫಲ್ಯತೆ ಅವರನ್ನು ಮುಳುವಾಗಿಸಿದ್ದು, ಭಾರತೀಯ ತಂಡದಿಂದ ಹೊಹೋಗಬೇಕಾಯಿತು.


ಜಹೀರ್ ಖಾನ್: ಅವರು ವಿಶ್ವಕಪ್‌ನಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು. ನಿವೃತ್ತಿ ಘೋಷಿಸುವ ಮೊದಲು 2015 ರವರೆಗೆ ತಂಡಕ್ಕಾಗಿ ಆಡುತ್ತಿದ್ದರು. ಬ್ರಾಡ್ಕಾಸ್ಟರ್ ಆಗಿ ಕೆಲ ಬಾರಿ ಕಾಣಿಸಿಕೊಂಡರಾದರೂ, ಸದ್ಯ ಮುಂಬೈ ಇಂಡಿಯನ್ಸ್ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ ಸೇರಿದರು. ಅಲ್ಲಿ ಯುವ, ಪ್ರತಿಭಾವಂತ ಬೌಲರ್‌ಗಳನ್ನು ಬೆಳೆಸುತ್ತಿದ್ದಾರೆ.


ಆಶಿಶ್ ನೆಹ್ರಾ: ನೆಹ್ರಾ ಗಾಯಗಳೊಂದಿಗೆ ಹೋರಾಡುತ್ತಲೇ ಇದ್ದರು, ಮತ್ತು ಅಂತಿಮವಾಗಿ 2018 ರಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದರೆ ಅವರು ಭಾರತ ಪರ ಆಡಿದ ಸೀಮಿತ ಪಂದ್ಯಗಳಲ್ಲಿ ಸಾಕಷ್ಟು ಉತ್ತಮ ಪ್ರದರ್ಶನ ನೀಡಿದರು. ಅದರ ನಂತರ, ಅವರು ಯಶಸ್ವಿ ಪ್ರಸಾರಕರಾದರು ಮತ್ತು ಆರ್‌ಸಿಬಿ ಬೌಲಿಂಗ್ ತರಬೇತುದಾರರಾಗಿ ಸೇರಿಕೊಂಡರು.


ಮುನಾಫ್ ಪಟೇಲ್: 2016 ರಲ್ಲಿ ನಡೆದ ಡಬ್ಲ್ಯೂಸಿ ಫೈನಲ್ ಪಂದ್ಯದ ನಂತರ ಕೇವಲ ಆರು ಪಂದ್ಯಗಳನ್ನು ಆಡಿದ್ದಾರೆ. ನಂತರ 2016 ರ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಪರ ಆಡಿದ್ದರು. ಬಳಿಕ ಸಂಪೂರ್ಣವಾಗಿ ಮರೆಯಾದರು. ಹಾಗೂ, 2018 ರಲ್ಲಿ ನಿವೃತ್ತಿ ಘೋಷಿಸಿದರು. ಅಂದಿನಿಂದ ತಮ್ಮ ಗ್ರಾಮದ ಸ್ಥಳೀಯರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ. ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಇವರೂ ಆಡಿದ್ದರು.


ಎಸ್.ಶ್ರೀಶಾಂತ್: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ 2013 ರಲ್ಲಿ ಅವರಿಗೆ ನಿಷೇಧ ಹೇರಲಾಯಿತು. ಆದರೆ ಕಮ್‌ಬ್ಯಾಕ್‌ ಮಾಡಿದ ಬಳಿಕ ದೇಶೀಯ ಸರ್ಕ್ಯೂಟ್‌ನಲ್ಲಿ ಉತ್ತಮವಾಗೇ ಆಡುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದರು ಶ್ರೀಶಾಂತ್‌.

First published: